ಕರ್ನಾಟಕ

karnataka

ETV Bharat / international

ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧ ಹೇರಿಕೆ ಸಾಧ್ಯತೆ: ಜಿ-7ರಾಷ್ಟ್ರಗಳೊಂದಿಗೆ ಬೈಡನ್​ ಮಹತ್ವದ ಮಾತುಕತೆ - US President Joe Biden meets with G7 allies

ಅನಾಹುತಕಾರಿ ಯುದ್ಧವನ್ನು ತಡೆಯಲು ಹಾಗೂ ಯುರೋಪಿನಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಅಂತ್ಯಹಾಡುವ ದೃಷ್ಟಿಯಿಂದ ಅಮೆರಿಕದ ಜನರೊಂದಿಗೂ ಮಾತನಾಡಲು ನಿರ್ಧರಿಸಿದ್ದಾರೆ. ಇದೇ ವೇಳೆ, ರಷ್ಯಾದ ವಿರುದ್ಧ G7 ಮಿತ್ರರಾಷ್ಟ್ರಗಳು ಒಪ್ಪಿಕೊಂಡಿರುವ ನಿರ್ಬಂಧಗಳನ್ನು ಬೈಡನ್​​ ಘೋಷಿಸುವ ನಿರೀಕ್ಷೆಯಿದೆ.

Russian invasion of Ukraine: US President Joe Biden meets G7 allies to discuss further sanctions
ರಷ್ಯಾ ಮೇಲೆ ಮತ್ತಷ್ಟು ನಿರ್ಬಂಧ ಹೇರಿಕೆ ಸಾಧ್ಯತೆ: ಜಿ-7ರಾಷ್ಟ್ರಗಳೊಂದಿಗೆ ಬೈಡನ್​ ಮಹತ್ವದ ಮಾತುಕತೆ

By

Published : Feb 24, 2022, 10:08 PM IST

ವಾಷಿಂಗ್ಟನ್​:ರಷ್ಯಾ-ಉಕ್ರೇನ್​​​​​​​​ ಯುದ್ಧದ ಹಿನ್ನೆಲೆಯಲ್ಲಿ ಅಮೆರಿಕ ತಲೆ ಬಿಸಿ ಮಾಡಿಕೊಂಡಿದೆ. ಹೇಗಾದರೂ ಮಾಡಿ ಯುದ್ಧಕ್ಕೆ ತಡೆಹಾಕಲು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಸರ್ವ ಪ್ರಯತ್ನ ಮಾಡುತ್ತಿದ್ದಾರೆ. ಈ ನಡುವೆ ಅವರು ಇಂದು ರಷ್ಯಾ ವಿರುದ್ಧ ಹೊಸ ನಿರ್ಬಂಧಗಳನ್ನು ಹೇರುವ ಸಲುವಾಗಿ ಜಿ-7 ರಾಷ್ಟ್ರಗಳ ನಾಯಕರೊಂದಿಗೆ ಮಾತನಾಡಿದರು.

ಅನಾಹುತಕಾರಿ ಯುದ್ಧವನ್ನು ತಡೆಯಲು ಹಾಗೂ ಯುರೋಪಿನಲ್ಲಿ ಉಂಟಾಗಿರುವ ಬಿಕ್ಕಟ್ಟಿಗೆ ಅಂತ್ಯಹಾಡುವ ದೃಷ್ಟಿಯಿಂದ ಅಮೆರಿಕದ ಜನರೊಂದಿಗೂ ಮಾತನಾಡಲು ನಿರ್ಧರಿಸಿದ್ದಾರೆ. ಇದೇ ವೇಳೆ, ರಷ್ಯಾದ ವಿರುದ್ಧ G7 ಮಿತ್ರರಾಷ್ಟ್ರಗಳು ಒಪ್ಪಿಕೊಂಡಿರುವ ನಿರ್ಬಂಧಗಳನ್ನು ಬೈಡನ್​​ ಘೋಷಿಸುವ ನಿರೀಕ್ಷೆಯಿದೆ.

ಬ್ರಿಟನ್, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್ ಮತ್ತು ಅಮೆರಿಕದ ನಾಯಕರು ಜಿ-7 ಸಭೆಯಲ್ಲಿ ಭಾಗವಹಿಸಿದ್ದರು. ಅತ್ಯಂತ ರಹಸ್ಯವಾಗಿ ನಡೆದ ಈ ವರ್ಚುಯಲ್​ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಮಾತನಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್​​, ನ್ಯಾಟೋ ಮೈತ್ರಿಕೂಟದ ರಾಷ್ಟ್ರಗಳೊಂದಿಗೂ ಮಾತನಾಡಿದ್ದು, ಯಾವುದೇ ದಾಳಿಯನ್ನು ಎದುರಿಸಲು ಒಗ್ಗಟ್ಟಾಗಿ ಹೋರಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.

ರಷ್ಯಾ ಗುರುವಾರ ಏಕಾಏಕಿ ಉಕ್ರೇನ್​ ಮೇಲೆ ಯುದ್ಧ ಸಾರಿದೆ. ಈ ಮೂಲಕ ಉಕ್ರೇನ್‌ನ ಮೇಲೆ ವ್ಯಾಪಕವಾದ ದಾಳಿಯನ್ನು ಪ್ರಾರಂಭಿಸಿದೆ. ರಷ್ಯಾದ ಈ ದಾಳಿಯಲ್ಲಿ ಉಕ್ರೇನ್​​ನ 40 ಸೈನಿಕರು ಅಸುನೀಗಿದ್ದಾರೆ. 70ಕ್ಕೂ ಹೆಚ್ಚು ಸೇನಾ ನೆಲೆಗಳನ್ನು ರಷ್ಯಾ ಪಡೆಗಳು ನಾಶ ಪಡಿಸಿವೆ ಎಂದು ಉಕ್ರೇನ್​ ಹೇಳಿಕೊಂಡಿದೆ.

ಇದನ್ನು ಓದಿ:5 ಲಕ್ಷ ಜನರ ಬಲಿಪಡೆದಿದ್ದ ಚರ್ನೊಬಿಲ್​ ಅಣುಸ್ಥಾವರ ವಶಕ್ಕೆ ರಷ್ಯಾ ಪಡೆಗಳ ಯತ್ನ: ಉಕ್ರೇನ್​ ಅಧ್ಯಕ್ಷರಿಂದ ಮಾಹಿತಿ ಬಹಿರಂಗ

ABOUT THE AUTHOR

...view details