ಕರ್ನಾಟಕ

karnataka

ಟ್ರಂಪ್​ ವಿರುದ್ಧದ ಆರೋಪಗಳನ್ನು ವಿಚಾರಣೆಯಿಲ್ಲದೇ ತಳ್ಳಿಹಾಕಲು ಕೆಲ ರಿಪಬ್ಲಿಕನ್ನರ ವಿರೋಧ! ಏನಾಗುತ್ತಾ ವಾಗ್ದಂಡನೆ?

ಕಾಂಗ್ರೆಸ್​ ಮೇಲ್ಮನೆ, ಟ್ರಂಪ್​ ವಾಗ್ದಂಡನೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಹೀಗಾಗಿ ಯುಸ್​ ಸೆನೆಟ್​ನ ಕೆಲ ರಿಪಬ್ಲಿಕನ್ ಪಕ್ಷದ ಸದಸ್ಯರು, ಅಮೆರಿಕಾ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧದ ಆರೋಪಗಳನ್ನು ವಿಚಾರಣೆಯಿಲ್ಲದೇ ಸಂಪೂರ್ಣವಾಗಿ ತಳ್ಳಿಹಾಕುವ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

By

Published : Jan 15, 2020, 9:16 AM IST

Published : Jan 15, 2020, 9:16 AM IST

Trump
ಟ್ರಂಪ್

ವಾಷಿಂಗ್ಟನ್​: ಯುಸ್​ ಸೆನೆಟ್​ನ ಕೆಲ ರಿಪಬ್ಲಿಕನ್ ಪಕ್ಷದ ಸದಸ್ಯರು, ತಮ್ಮದೇ ಪಕ್ಷದ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ವಿರುದ್ಧದ ಆರೋಪಗಳನ್ನು ವಿಚಾರಣೆಯಿಲ್ಲದೆ ಸಂಪೂರ್ಣವಾಗಿ ತಳ್ಳಿಹಾಕುವ ಪ್ರಯತ್ನಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್​ ಮೇಲ್ಮನೆ, ಮುಂದಿನ ದಿನಗಳಲ್ಲಿ ಟ್ರಂಪ್​ ವಾಗ್ದಂಡನೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಸಜ್ಜಾಗಿದೆ. ಹೀಗಾಗಿ ರಿಪಬ್ಲಿಕನ್ನರು ಟ್ರಂಪ್ ವಿರುದ್ಧದ ಆರೋಪಗಳನ್ನು ಯಾವುದೇ ವಿಚಾರಣೆಯಿಲ್ಲದೇ ವಜಾಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ನಮ್ಮ ಸದಸ್ಯರು ಟ್ರಂಪ್​ರನ್ನು ವಜಾಗೊಳಿಸುವ ಪ್ರಕ್ರಿಯೆ ಬಗ್ಗೆ ಆಸಕ್ತಿ ಹೊಂದಿಲ್ಲ ಎಂದು ರಿಪಬ್ಲಿಕನ್ ಪಕ್ಷದ ನಾಯಕ ರಾಯ್ ಬ್ಲಂಟ್ ಹೇಳಿದ್ದಾರೆ. ಈ ಬಗ್ಗೆ ಎರಡೂ ಕಡೆಯಿಂದ ವಿಚಾರಣೆ ನಡೆಸಬೇಕಿದೆ. ಅಲ್ಲದೆ ನ್ಯಾಯಯುತ ನೆಲೆಯಲ್ಲಿ ಅಧ್ಯಕ್ಷರ ಅಭಿಪ್ರಾಯವನ್ನೂ ಕೇಳಬೇಕಿದೆ ಎಂದು ರಾಯ್ ಬ್ಲಂಟ್ ಹೇಳಿದ್ದಾರೆ.

ಡೆಮೋಕ್ರಾಟಿಕ್ ನೇತೃತ್ವದ ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಈ ವಾರ ಟ್ರಂಪ್​ ಬಗೆಗಿನ ಆರೋಪಗಳನ್ನು ಔಪಚಾರಿಕವಾಗಿ ಸೆನೆಟ್​ಗೆ ಕಳುಹಿಸುವ ನಿರೀಕ್ಷೆಯಿದೆ. ಅಲ್ಲಿ ಬಹುಮತ ಹೊದಿರುವ ನಾಯಕ ಮಿಚ್ ಮೆಕ್‌ಕಾನ್ನೆಲ್, ತನ್ನ ಸಹವರ್ತಿ ರಿಪಬ್ಲಿಕನ್ ಟ್ರಂಪ್​ ಅವರ ಆರೋಪಗಳನ್ನು ಖುಲಾಸೆಗೊಳಿಸಲು ಸಹಾಯ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.

ಈ ಬಗ್ಗೆ ಸೋಮವಾರ ನಡೆದ ಕಲಾಪದಲ್ಲಿ, ಸ್ಪೀಕರ್ ನ್ಯಾನ್ಸಿ ಪೆಲೋಸಿ ಅವರೊಂದಿಗಿನ ಸಭೆಯನ್ನು ತ್ಯಜಿಸಿದ ರಿಪಬ್ಲಿಕನ್​​ ಸದಸ್ಯರು, ಈ ಪ್ರಕರಣದ ವಿಚಾರಣೆಗೆ ಶಾಸಕರನ್ನು ಹೆಸರಿಸಲು ಮತ್ತು ಅದರ ಎರಡು ವಾಗ್ದಂಡನೆ ಆರೋಪಗಳನ್ನು ಸೆನೆಟ್​ಗೆ ಕಳುಹಿಸಲು ಮೇಲ್ಮನೆಯಲ್ಲಿ ಬುಧವಾರ ಮತ ಚಲಾಯಿಸುವ ಸಾಧ್ಯತೆಯಿದೆ ಎಂದು ಸೂಚಿಸಿದೆ.

ಟ್ವಿಟ್ಟರ್​ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್​, ಪೂರ್ಣ ವಿಚಾರಣೆಯನ್ನು ನಡೆಸುವುದು ಪಕ್ಷಪಾತವಿಲ್ಲದ ವಿಶ್ವಾಸಾರ್ಹ ಅಂಶ. ಇಲ್ಲದಿದ್ದರೆ ಅದು ವಿಶ್ವಾಸಾರ್ಹವಲ್ಲ ಕ್ರಮವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details