ಕರ್ನಾಟಕ

karnataka

ETV Bharat / international

ಉಗ್ರ ಅಜರ್​ಗೆ ನಿರ್ಬಂಧ ಹೇರಲು ಅಮೆರಿಕ ಪಣ: ಚೀನಾ ಸೊಕ್ಕು ಮುರಿಯಲಾದೀತೆ?

ಉಗ್ರ ಮಸೂದ್ ಅಜರ್​​​ನನ್ನು ಜಾಗತಿಕ ಉಗ್ರ ಎಂದು ಘೋಷಿಸಬೇಕೆಂದು ಅಮೆರಿಕ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸದಸ್ಯ ರಾಷ್ಟ್ರಗಳನ್ನು ಕೋರಿದೆ

By

Published : Mar 28, 2019, 11:37 AM IST

ಉಗ್ರ ಅಜರ್​ನಿಗೆ ನಿರ್ಬಂಧ ಹೇರಲು ಹೊಸ ಹೆಜ್ಜೆ ಇಟ್ಟ ಅಮೆರಿಕ

ನ್ಯೂಯಾರ್ಕ್​: ಉಗ್ರ ಸಂಘಟನೆ ಜೈಷೆ ಮೊಹಮ್ಮದ್​ನ ಮುಖ್ಯಸ್ಥ ಮಸೂದ್​ ಅಜರ್​ನನ್ನು ಜಾಗತಿಕ ಉಗ್ರ ಪಟ್ಟಿಗೆ ಸೇರಿಸಬೇಕೆಂದು ಅಮೆರಿಕ ಪಣ ತೊಟ್ಟಿದೆ. ಇದಕ್ಕಾಗಿ ಬ್ರಿಟನ್​ ಹಾಗೂ ಫ್ರಾನ್ಸ್​ ಸಹಕಾರದೊಂದಿಗೆ ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಲು ಮುಂದಾಗಿದೆ.

ಮೂರು ರಾಷ್ಟ್ರಗಳು ಸೇರಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 15 ಸದಸ್ಯ ರಾಷ್ಟ್ರಗಳಿಗೆ ಈ ಸಂಬಂಧ ನಿರ್ಣಯವೊಂದನ್ನು ಕಳುಹಿಸಿವೆ. ಉಗ್ರ ಅಜರ್​ಗೆ ಶಸ್ತ್ರಾಸ್ತ್ರ ಪೂರೈಕೆ , ಪ್ರಯಾಣ ನಿರ್ಬಂಧ ಹಾಗೂ ಆಸ್ತಿ ಮುಟ್ಟಗೋಲು ಹಾಕಿಕೊಳ್ಳಬೇಕೆಂದು ಈ ಮೂಲಕ ವಿಶ್ವಸಂಸ್ಥೆ ಮೇಲೆ ಒತ್ತಡ ಹೇರಲು ಅಮೆರಿಕ ಮುಂದಾಗಿದೆ.

ಪಾಕಿಸ್ತಾನದ ಬೆನ್ನಿಗೆ ನಿಂತು, ಅಜರ್​ನನ್ನು ಉಗ್ರ ಪಟ್ಟಿಗೆ ಸೇರಿಸಲು ಹಿಂದೇಟು ಹಾಕುತ್ತಿರುವ ಚೀನಾಕ್ಕೆ ಈ ಮೂಲಕ ಠಕ್ಕರ್​ ಕೊಡಲು ಅಮೆರಿಕ ಸಿದ್ಧವಾಗಿದೆ ಎನ್ನಲಾಗ್ತಿದೆ. ಚೀನಾದ ವಿರೋಧವಿದ್ದರೂ ಅಜರ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಲೇಬೇಕು ಎಂದು ಭದ್ರತಾ ಮಂಡಳಿ ಮೇಲೆ ಒತ್ತಡ ತರಲಾಗುತ್ತಿದೆ.

ಈ ನಿರ್ಣಯ ಅಂಗೀಕಾರವಾಗಲು ಭದ್ರತಾ ಮಂಡಳಿಯಲ್ಲಿ ಕನಿಷ್ಠ 9 ಮತಗಳು ಹಾಗೂ ಕಾಯಂ ಸದಸ್ಯರಾಷ್ಟ್ರಗಳಿಂದ ವಿಟೋ ಜಾರಿಯಾಗಬಾರದು. ಅಮೆರಿಕ, ಫ್ರಾನ್ಸ್​, ಬ್ರಿಟನ್​, ರಷ್ಯಾದೊಂದಿಗೆ ಚೀನಾಕ್ಕೂ ವಿಟೋ ಅಧಿಕಾರ ಇರುವುದರಿಂದ ನಿರ್ಣಯ ಅಂಗೀಕಾರ ಕಷ್ಟಸಾಧ್ಯ ಎನ್ನಲಾಗ್ತಿದೆ.

ಫೆಬ್ರವರಿ 14ರಂದು ಪುಲ್ವಾಮದಲ್ಲಿ ಜೈಷ್​- ಇ- ಮೊಹಮ್ಮದ್​ ಉಗ್ರ ನಡೆಸಿದ ಭೀಕರ ದಾಳಿಯಲ್ಲಿ 40ಕ್ಕೂ ಹೆಚ್ಚು ಸಿಆರ್​ಪಿಎಫ್​ ಯೋಧರು ಹುತಾತ್ಮರಾದ ಘಟನೆ ಬಳಿಕ ಮಸೂದ್​ನ ವಿಚಾರ ಹೆಚ್ಚಾಗಿ ಚರ್ಚೆಯಾಗುತ್ತಿದೆ. ಉಗ್ರ ಮಸೂದ್​ನನ್ನು ಜಾಗತಿಕ ಉಗ್ರ ಎಂದು ಘೋಷಿಸಬೇಕೆಂಬುದು ಭಾರತದ ಬೇಡಿಕೆ ಸಹ ಆಗಿದೆ.

ABOUT THE AUTHOR

...view details