ಕರ್ನಾಟಕ

karnataka

ETV Bharat / international

ಇಸ್ರೇಲ್​ನ ರ್ಯುವೆನ್ ರಿವ್ಲಿನ್-ಯುಎಸ್​ ಅಧ್ಯಕ್ಷರ​ ಭೇಟಿ : ಇಸ್ರೇಲ್​ಗೆ​ ಬೈಡನ್​ ಬೆಂಬಲ ಘೋಷಣೆ

ಬೈಡನ್ ಮತ್ತು ರುವೆನ್ ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ. ಪ್ಯಾಲೆಸ್ತೇನಿಯನ್ ಜನರಿಗೆ ಹೆಚ್ಚಿನ ಆರ್ಥಿಕ ಅವಕಾಶಗಳನ್ನು ಒದಗಿಸಲು ಮಧ್ಯಮ ಧ್ವನಿಗಳನ್ನು ಬಲಪಡಿಸುವ ಪ್ರಯತ್ನಗಳನ್ನು ಹೆಚ್ಚಿಸುವುದರ ಪ್ರಾಮುಖ್ಯತೆ, ದ್ವೇಷ ಮತ್ತು ಹಿಂಸಾಚಾರಕ್ಕಾಗಿ ಪ್ರತಿಪಾದಿಸುವ ಉಗ್ರಗಾಮಿಗಳನ್ನು ದುರ್ಬಲಗೊಳಿಸಿ, ಸಹಬಾಳ್ವೆಯನ್ನು ಉತ್ತೇಜಿಸುವುದು ಅವರ ಚರ್ಚೆಯಲ್ಲಿ ಸೇರಿದೆ..

Biden meets Israeli counterpart
ಇಸ್ರೇಲ್​ಗೆ​ ಬೈಡನ್​ ಬೆಂಬಲ

By

Published : Jun 29, 2021, 8:43 PM IST

ವಾಷಿಂಗ್​ಟನ್​ :ಅಮೆರಿಕ ಅಧ್ಯಕ್ಷ ಜೋ ಬೈಡನ್ ಇಸ್ರೇಲ್​ನ ಭದ್ರತೆ ಹಾಗೂ ರಕ್ಷಣೆಗೆ ತಮ್ಮ ತಮ್ಮ ಬೆಂಬಲವಿದೆ ಎಂದು ಹೇಳಿದ್ದಾರೆ. ಇಸ್ರೇಲ್​ನ ರ್ಯುವೆನ್ ರಿವ್ಲಿನ್ ಅವರೊಂದಿಗಿನ ಸಭೆಯಲ್ಲಿ ಉಭಯ ದೇಶಗಳ ನಡುವಿನ ಸಹಕಾರವನ್ನು ಹೆಚ್ಚಿಸಲು ಬದ್ಧರಾಗಿರುವುದಾಗಿ ಬೈಡನ್​ ತಿಳಿಸಿದ್ದಾರೆ.

ಸೋಮವಾರ ಶ್ವೇತಭವನದಲ್ಲಿ ನಡೆದ ಸಭೆಯಲ್ಲಿ, ಉಭಯ ನಾಯಕರು "ಇರಾನ್‌ನಿಂದ ಇರುವ ಬೆದರಿಕೆ ಸೇರಿದಂತೆ ಈ ಪ್ರದೇಶವು ಎದುರಿಸುತ್ತಿರುವ ಹಲವು ಸವಾಲುಗಳ ಬಗ್ಗೆ ಚರ್ಚಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ತನ್ನ ಆಡಳಿತದಲ್ಲಿ ಇರಾನ್‌ಗೆ ಎಂದಿಗೂ ಪರಮಾಣು ಶಸ್ತ್ರಾಸ್ತ್ರ ಸಿಗುವುದಿಲ್ಲ ಎಂದು ಬೈಡನ್ ಒತ್ತಿ ಹೇಳಿದ್ದಾರೆ ಎಂದು ಶ್ವೇತಭವನದ ಮೂಲಗಳು ಹೇಳಿವೆ. ಮಧ್ಯಪ್ರಾಚ್ಯ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಹೆಚ್ಚಿಸಲು ಬೈಡನ್ ತಮ್ಮ ಬೆಂಬಲವನ್ನು ನೀಡುವುದಾಗಿ ಅಮೆರಿಕ ಅಧ್ಯಕ್ಷರು ಭರವಸೆ ನೀಡಿದ್ದಾರೆ.

ರಿವ್ಲಿನ್ ಅವರ ಏಳು ವರ್ಷಗಳ ಅಧಿಕಾರಾವಧಿ ಮುಗಿಯಲಿದ್ದು, ಮುಂದಿನ ತಿಂಗಳು ನಿವೃತ್ತಿ ಹೊಂದಲಿದ್ದಾರೆ. ಬೈಡನ್ ಮತ್ತು ರುವೆನ್ ಗಾಜಾ ಮತ್ತು ವೆಸ್ಟ್ ಬ್ಯಾಂಕ್‌ನಲ್ಲಿನ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ಚರ್ಚಿಸಿದ್ದಾರೆ. ಪ್ಯಾಲೆಸ್ತೇನಿಯನ್ ಜನರಿಗೆ ಹೆಚ್ಚಿನ ಆರ್ಥಿಕ ಅವಕಾಶಗಳನ್ನು ಒದಗಿಸಲು ಮಧ್ಯಮ ಧ್ವನಿಗಳನ್ನು ಬಲಪಡಿಸುವ ಪ್ರಯತ್ನಗಳನ್ನು ಹೆಚ್ಚಿಸುವುದರ ಪ್ರಾಮುಖ್ಯತೆ, ದ್ವೇಷ ಮತ್ತು ಹಿಂಸಾಚಾರಕ್ಕಾಗಿ ಪ್ರತಿಪಾದಿಸುವ ಉಗ್ರಗಾಮಿಗಳನ್ನು ದುರ್ಬಲಗೊಳಿಸಿ, ಸಹಬಾಳ್ವೆಯನ್ನು ಉತ್ತೇಜಿಸುವುದು ಅವರ ಚರ್ಚೆಯಲ್ಲಿ ಸೇರಿದೆ. ಇದೇ ವೇಳೆ ಇಸ್ರೇಲ್ ಹೊಸ ಪ್ರಧಾನಿ ನಫ್ತಾಲಿ ಬೆನೆಟ್ ಅವರು ಯುಎಸ್ ಭೇಟಿ ನೀಡಬೇಕೆಂದು ಬೈಡನ್​ ಆಹ್ವಾನವನ್ನು ನೀಡಿದ್ದಾರೆ.

ABOUT THE AUTHOR

...view details