ಕರ್ನಾಟಕ

karnataka

By

Published : Nov 20, 2020, 12:42 PM IST

ETV Bharat / international

30 ವರ್ಷಗಳ ಬಳಿಕ ಡೆಮಾಕ್ರಟಿಕ್ ತೆಕ್ಕೆಗೆ ಯುಎಸ್ ಸ್ಟೇಟ್ ಆಫ್ ಜಾರ್ಜಿಯಾ

ಯುಎಸ್ ಸ್ಟೇಟ್ ಆಫ್ ಜಾರ್ಜಿಯಾದಲ್ಲಿ ಮತಗಳನ್ನು ಮರು ಎಣಿಕೆಗೆ ಹಾಕಿದ ವೇಳೆ 30 ವರ್ಷಗಳ ಸುದೀರ್ಘ ಅವಧಿಯ ಬಳಿಕ ಡೆಮಾಕ್ರಟಿಕ್ ಪಕ್ಷ ಗೆಲುವು ದಾಖಲಿಸಿದೆ.

ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್
ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್

ವಾಷಿಂಗ್ಟನ್​:ಯುಎಸ್ ಸ್ಟೇಟ್ ಆಫ್ ಜಾರ್ಜಿಯಾದಲ್ಲಿ ಅಧ್ಯಕ್ಷೀಯ ಚುನಾವಣೆಗೆ ಮತಗಳನ್ನು ಮರು ಎಣಿಕೆ ಮಾಡಲಾಗಿದೆ. ಡೆಮಾಕ್ರಟಿಕ್ ಅಭ್ಯರ್ಥಿ ಜೋ ಬೈಡನ್ ಅವರು ಗೆಲುವು ದಾಖಲಿಸಿದ್ದಾರೆ.

ಸುಮಾರು 30 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಡೆಮಾಕ್ರಟಿಕ್ ಪಕ್ಷ ಜಾರ್ಜಿಯಾದಲ್ಲಿ ಗೆಲುವು ಕಂಡಿದೆ. ಮೂರು ದಶಕಗಳ ಬಳಿಕ ಈ ರಾಜ್ಯವನ್ನು ಗೆದ್ದ ಮೊದಲ ಡೆಮಾಕ್ರಟಿಕ್ ಅಭ್ಯರ್ಥಿ ಎಂಬ ಹೆಗ್ಗಳಿಕೆಗೆ ಬೈಡನ್ ಪಾತ್ರರಾಗಿದ್ದಾರೆ.

ಯುಎಸ್ ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಲನ್ನು ಒಪ್ಪಿಕೊಳ್ಳಲು ನಿರಾಕರಿಸಿದ್ದಾರೆ ಮತ್ತು ಯುಎಸ್ ಚುನಾವಣೆಗಳಲ್ಲಿ ಭಾರಿ ಮತದಾರರ ವಂಚನೆ ಮತ್ತು ಚುನಾವಣಾ ದುಷ್ಕೃತ್ಯ ನಡೆದಿದೆ ಎಂದು ಆರೋಪಿಸಿದ್ದಾರೆ. ಜಾರ್ಜಿಯಾ ಜೊತೆಗೆ, ಟ್ರಂಪ್ ಪೆನ್ಸಿಲ್ವೇನಿಯಾ, ಮಿಚಿಗನ್, ನೆವಾಡಾ, ಅರಿಝೋನಾ ರಾಜ್ಯಗಳಲ್ಲಿ ಮೊಕದ್ದಮೆ ಹೂಡಿದ್ದಾರೆ ಮತ್ತು ವಿಸ್ಕಾನ್ಸಿನ್‌ನಲ್ಲಿ ಮತಗಳನ್ನು ಮರು ಎಣಿಕೆಗೆ ಕೋರಿದ್ದಾರೆ.

ನಿಯೋಜಿತ ಅಧ್ಯಕ್ಷ ಜೋ ಬೈಡನ್, ನಿರ್ಗಮಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗಿಂತ 14,000 ಕ್ಕಿಂತಲೂ ಅಧಿಕ ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details