ಕರ್ನಾಟಕ

karnataka

ETV Bharat / headlines

ಪುತ್ತೂರು ಸಂಚಾರಿ ಪೊಲೀಸರ ಮಾನವೀಯತೆ: ಲಾಕ್ ಆದ ಜಾಯಿಂಟ್ ವ್ಹೀಲ್​ ಕುಟುಂಬಕ್ಕೆ ಸಹಕಾರ

ಕರ್ಫ್ಯೂವಿನಿಂದ ಇಲ್ಲೇ ಲಾಕ್ ಆಗಿರುವ ಜಾಯಿಂಟ್ ವ್ಹೀಲ್​ ಕುಟುಂಬದ ಹಸಿವಿನ ನೋವಿಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಪೊಲೀಸರು ಸ್ಪಂದಿಸಿದ್ದಾರೆ.

 police help people who stuck in lockdown
police help people who stuck in lockdown

By

Published : May 13, 2021, 7:00 PM IST

Updated : May 13, 2021, 8:35 PM IST

ಪುತ್ತೂರು: ಜಾತ್ರೆಯಲ್ಲಿ ಮನರಂಜನೆ ತೋರಿಸಲು ಬಂದು ಕರ್ಫ್ಯೂವಿನಿಂದ ಇಲ್ಲೇ ಲಾಕ್ ಆಗಿರುವ ಜಾಯಿಂಟ್ ವ್ಹೀಲ್​ ಕುಟುಂಬದ ಹಸಿವಿನ ನೋವಿಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎಸ್.ಐ ರಾಮ ನಾಯ್ಕ್ ಅವರು ಸ್ಪಂದಿಸಿ ಮೇ.13ರಂದು ಅಗತ್ಯ ದಿನಸಿ ಸಾಮಗ್ರಿಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪುತ್ತೂರು ಸಂಚಾರಿ ಪೊಲೀಸರ ಮಾನವೀಯತೆ

ಬಿಸಿಲಿರಲಿ, ಮಳೆಯಿರಲಿ ನಿತ್ಯ ಸಂಚಾರ ನಿಯಂತ್ರಣ ಉಲ್ಲಂಘನೆ ಮಾಡದಂತೆ ಎಚ್ಚರಿಕೆ ನೀಡುತ್ತಿರುವ ಸಂಚಾರ ಪೊಲೀಸರು ಈಗ ಹೊಸದೊಂದು ಕಾಯಕ ಮಾಡಿದ್ದಾರೆ. ಪುತ್ತೂರು ಜಾತ್ರಾ ಗದ್ದೆಯ ಬದಿಯಲ್ಲಿರುವ ಖಾಸಗಿ ಗದ್ದೆಯಲ್ಲಿ ಬೀಡು ಬಿಟ್ಟಿರುವ ಸುಮಾರು 36 ಮಂದಿಯ 4 ಕುಟುಂಬದ ಹಸಿವನ್ನು ನೀಗಿಸುವಲ್ಲಿ ಮುಂದಾಗಿದ್ದಾರೆ.

ಪುತ್ತೂರು ಸಂಚಾರಿ ಪೊಲೀಸರು 50 ಕೆ.ಜಿ ಅಕ್ಕಿ, 20 ಕೆ.ಜಿ ಗೋದಿ, ಉಪ್ಪಿನಕಾಯಿ, ತರಕಾರಿ, ನೀರುಳ್ಳಿ, ಉಪ್ಪು, ಬಿಸ್ಕಟ್ ಸೇರಿದಂತೆ ಹಲವು ಅಗತ್ಯ ಸಾಮಗ್ರಿಗಳನ್ನು ಪೂರೈಸಿದ್ದಾರೆ. ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಚಿದಾನಂದ್, ಹೆಡ್‌ಕಾನ್‌ಸ್ಟೇಬಲ್‌ಗಳಾದ ಚಂದ್ರಶೇಖರ್, ಸ್ಕರೀಯ, ಪ್ರಶಾಂತ್ ರೈ, ಗೃಹ ರಕ್ಷಕ ದಳದ ಸಿಬ್ಬಂದಿ ಉಪಸ್ಥಿತರಿದ್ದರು.

Last Updated : May 13, 2021, 8:35 PM IST

ABOUT THE AUTHOR

...view details