ಪ್ರೇಕ್ಷಕರಿಗೆ ಮನರಂಜನೆ ನೀಡುವುದರಲ್ಲಿ ಜೀ ಕನ್ನಡ ವಾಹಿನಿ ಸದಾ ಮುಂದಿರುತ್ತದೆ. ವಾರದ ಐದು ದಿನ ಸೂಪರ್ ಹಿಟ್ ಧಾರಾವಾಹಿಗಳ ಮೂಲಕ ಕನ್ನಡಿಗರನ್ನು ರಂಜಿಸಿದರೆ, ವಾರಾಂತ್ಯದಲ್ಲಿ ರಿಯಾಲಿಟಿ ಶೋಗಳು ಜನರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಅಂತಹ ಕಾರ್ಯಕ್ರಮಗಳಲ್ಲಿ ಸೂಪರ್ ಕ್ವೀನ್ ಎಲ್ಲರಿಗೂ ಇಷ್ಟವಾಗಿತ್ತು. ಸ್ತ್ರೀ ಪ್ರಧಾನವಾಗಿರಿಸಿಕೊಂಡಿದ್ದ ಈ ಶೋ ಕರ್ನಾಟಕದ ಜನತೆಯನ್ನು ವಿಶೇಷವಾಗಿ ಆಕರ್ಷಿಸಿತು. ಬಣ್ಣದ ಲೋಕದಲ್ಲಿ ಮಿಂಚುತ್ತಿದ್ದ ತಾರೆಯರನ್ನು ಕರೆಸಿ ಅವರ ಕರಾಳ ದಿನಗಳನ್ನು ತೆರೆದಿಟ್ಟಿತು. ಹೀಗಾಗಿಯೇ ಈ ಕಾರ್ಯಕ್ರಮವು ಹಲವರಿಗೆ ಸ್ಫೂರ್ತಿ ನೀಡಿದೆ.
ಹೆಣ್ಣು ಮಕ್ಳೇ ಸ್ಟ್ರಾಂಗ್ ಗುರು ಅಂತಾ ಮನರಂಜಿಸುತ್ತಿದ್ದ ಈ ಶೋನ ತೀರ್ಪಿಗಾಗಿ ಚಿನ್ನಾರಿ ಮುತ್ತಾ ವಿಜಯ ರಾಘವೇಂದ್ರ ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ ಇದ್ದರು. ಕುರಿ ಪ್ರತಾಪ್ ಮತ್ತು ಶ್ವೇತಾ ಚಂಗಪ್ಪ ಕಾರ್ಯಕ್ರಮ ನಿರೂಪಿಸುತ್ತಿದ್ದರು. ಗೀತಾ, ಅಪೂರ್ವ, ಚಂದ್ರಕಲಾ, ರೆಮೋ, ರಜನಿ, ನೀತು, ಐಶ್ವರ್ಯ, ಗೇಬ್ರಿಯೆಲಾ ಸೇರಿದಂತೆ 10 ಮಂದಿ ಸ್ಪರ್ಧಿಗಳು ಇದ್ದರು. ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಈ ಕಲಾವಿದರ ಇಡೀ ಜೀವನದ ಕಥೆಯನ್ನು ಈ ಶೋ ಹೇಳಿತ್ತು. ಪ್ರತಿ ವಾರವೂ ಎಲ್ಲ ಸ್ಪರ್ಧಿಗಳು ಒಂದಲ್ಲಾ ಒಂದು ವಿಷಯದಲ್ಲಿ ಸೂಪರ್ ಕ್ವೀನ್ಗಳಾಗಿಯೇ ಕಾಣಿಸಿಕೊಳ್ಳುತ್ತಿದ್ದರು.
ಇದನ್ನೂ ಓದಿ:'ಡಾಲಿ ನಟ ರಾಕ್ಷಸ, ನವೀನ್ ಹೊಸ ರಾಕ್ಷಸ': 'ಗುರುದೇವ್ ಹೊಯ್ಸಳ'ನಿಗೆ ಸಿನಿ ತಾರೆಗಳ ಮೆಚ್ಚುಗೆ