ಲಾಸ್ ಏಂಜಲೀಸ್( ಅಮೆರಿಕ): ಸಿನಿಮಾ ನಿರ್ಮಾಪಕ ಯಾನ್ ಡೆಮಾಂಗೆ ತಮ್ಮ ಬಹು ನಿರೀಕ್ಷಿತ 'ಬ್ಲೇಡ್'ಗಾಗಿ ಮಾರ್ವೆಲ್ ಸ್ಟುಡಿಯೋ ಜೊತೆ ಸಹಿ ಹಾಕಿದ್ದಾರೆ. 2014ರಲ್ಲಿ '71' ಮತ್ತು 2018 'ವೈಟ್ ಬಾಯ್ ರಿಕ್' ಎಂಬ ಸಿನಿಮಾಗಳನ್ನು ಡೆಮೊಂಗೆ ಚಿತ್ರ ನಿರ್ದೇಶನ ಮಾಡಿದ್ದರು. ಇನ್ನು ಈ ಸಿನಿಮಾಗೆ ಕಥೆಯನ್ನು ಮೈಕೆಲ್ ಸ್ಟಾರ್ಬರಿ ಮಾಡಲಿದ್ದಾರೆ ಎಂದು ಮನರಂಜನೆ ನ್ಯೂಸ್ ವೆಬ್ಸೈಟ್ ಡೆಡ್ಲೈನ್ ವರದಿ ಮಾಡಿದೆ.
ನಿರ್ದೇಶನ ಬಸ್ಸಮ್ ತರಿಖ್ ಈ ಪ್ರಾಜೆಕ್ಟ್ನಿಂದ ಹೊರ ನಡೆದು ತಿಂಗಳ ಬಳಿಕ ಈ ತಂಡ ಸೇರಲಿದ್ದಾರೆ. ಚಿತ್ರ ನಿರ್ದೇಶಕರು ಇನ್ನೂ ಕೂಡ ಈ ಚಿತ್ರದ ಕಾರ್ಯ ನಿರ್ವಹಕ ನಿರ್ಮಾಪಕರೊಂದಿಗೆ ಸಂಪರ್ಕದಲ್ಲಿದೆ. ಇನ್ನು ಈ 'ಬ್ಲೇಡ್' ಸಿನಿಮಾ ವಾಂಪೈರ್ ಸ್ಲೈರ್ ಅವರ ಕಾಮಿಕ್ ಬುಕ್ ಕೇಂದ್ರಿತವಾಗಿದೆ.