ಕರ್ನಾಟಕ

karnataka

ETV Bharat / entertainment

ಬಾಯ್ಕಾಟ್​ ಬಿಸಿ ನಡುವೆ ಬಾಲಿವುಡ್​ನಲ್ಲಿ ಭರವಸೆ ಮೂಡಿಸಿದ ವಿಕ್ರಮ್ ವೇದ ಟೀಸರ್ - ನಟ ಹೃತಿಕ್ ರೋಷನ್

ಸಿನಿಮಾಗಳ ಹಿನ್ನೆಡೆ, ಬಾಯ್ಕಾಟ್​ ಬಿಸಿಯಲ್ಲಿರುವ ಬಾಲಿವುಡ್‌ ಚಿತ್ರರಂಗಕ್ಕೆ ವಿಕ್ರಮ್ ವೇದ ಸಿನಿಮಾ ಟೀಸರ್ ಗೆಲುವಿನ ಭರವಸೆ ಮೂಡಿಸಿದೆ.

Vikram Vedha teaser
ವಿಕ್ರಮ್ ವೇದ ಟೀಸರ್

By

Published : Aug 24, 2022, 4:57 PM IST

ನಟ ಹೃತಿಕ್ ರೋಷನ್ ಮತ್ತು ನಟ ಸೈಫ್ ಅಲಿ ಖಾನ್ ಅಭಿನಯದ ವಿಕ್ರಮ್ ವೇದ ಸಿನಿಮಾ ಟೀಸರ್ ಬಾಲಿವುಡ್‌ನಲ್ಲಿ ಭರವಸೆ ಮೂಡಿಸಿದೆ. ಟೀಸರ್ ಬಿಡುಗಡೆ ಆಗಿ 5 ಗಂಟೆಗಳಲ್ಲಿ 58 ಲಕ್ಷಕ್ಕೂ ಅಧಿಕ ವೀಕ್ಷಣೆ ಆಗಿದೆ. ವಿಕ್ರಮ್ ವೇದ ತಮಿಳು ಚಿತ್ರದ ಹಿಂದಿ ರಿಮೇಕ್. ಮೂಲ ಚಿತ್ರವನ್ನು ನಿರ್ದೇಶಿಸಿದ ಪುಷ್ಕರ್ ಮತ್ತು ಗಾಯತ್ರಿ ಅವರೇ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ.

ಸೌತ್​​ ನಟರಾದ ಆರ್ ಮಾಧವನ್ ಮತ್ತು ವಿಜಯ್ ಸೇತುಪತಿ ಅಭಿನಯದ ಕಾಲಿವುಡ್​ನ ಬ್ಲಾಕ್​ಬಸ್ಟರ್, ಸೂಪರ್​ ಹಿಟ್ ವಿಕ್ರಮ್ ವೇದ ಹಿಂದಿಗೆ ರಿಮೇಕ್ ಆಗಿದ್ದು ಸೆಪ್ಟೆಂಬರ್ 30ರಂದು ದೇಶಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ಹೃತಿಕ್ ರೋಷನ್ ವೇದ ಪಾತ್ರದಲ್ಲಿ, ಸೈಫ್ ಅಲಿ ಖಾನ್ ವಿಕ್ರಮ್ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ವಿಕ್ರಮ್ ವೇದ ಟೀಸರ್ 1 ನಿಮಿಷ ಮತ್ತು 54 ಸೆಕೆಂಡ್‌ ಇದ್ದು ದರೋಡೆಕೋರನನ್ನು ಪತ್ತೆಹಚ್ಚಲು ಹೊರಡುವ ಕಠಿಣ ಪೊಲೀಸ್ ಅಧಿಕಾರಿಯಾಗಿ ಸೈಫ್ ಅಲಿ ಖಾನ್ ಕಾಣಿಸಿಕೊಂಡಿದ್ದಾರೆ. ದರೋಡೆಕೋರನ ಪಾತ್ರವನ್ನು ಹೃತಿಕ್ ರೋಷನ್ ನಿರ್ವಹಿಸಿದ್ದಾರೆ.

ಇದನ್ನೂ ಓದಿ:ಚೆನ್ನೈನಲ್ಲಿ ಬ್ರಹ್ಮಾಸ್ತ್ರ ​ಸಿನಿಮಾ ಪ್ರಚಾರ - ದಕ್ಷಿಣ ಭಾರತದ ಆಹಾರ ಸವಿದ ರಣ್​​ಬೀರ್ ಕಪೂರ್

ಭಾರತದ ಜಾನಪದ ಕಥೆಯಾದ ವಿಕ್ರಮ ಮತ್ತು ಬೇತಾಳ ಕಥೆಯನ್ನು ಆಧರಿಸಿದೆ. ಈ ಚಿತ್ರದಲ್ಲಿ ರಾಧಿಕಾ ಆಪ್ಟೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ತಮಿಳು ಚಿತ್ರವನ್ನು ನಿರ್ದೇಶಿಸಿದ ಪುಷ್ಕರ್ ಮತ್ತು ಗಾಯತ್ರಿ ಹಿಂದಿ ರಿಮೇಕ್‌ನ ನಿರ್ದೇಶಕರೂ ಆಗಿದ್ದಾರೆ. ಚಿತ್ರವನ್ನು ಎಸ್ ಶಶಿಕಾಂತ್ ಮತ್ತು ಭೂಷಣ್ ಕುಮಾರ್ ನಿರ್ಮಿಸಿದ್ದಾರೆ.

ABOUT THE AUTHOR

...view details