ಕರ್ನಾಟಕ

karnataka

ETV Bharat / entertainment

ಹೊಸ ವರ್ಷಕ್ಕೆ ತಮ್ಮ ಬಹುನಿರೀಕ್ಷಿತ ಚಿತ್ರದ ಬಗ್ಗೆ ಸರ್​ಪ್ರೈಸ್​ ನೀಡಿದ ಉಪೇಂದ್ರ - ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲಿ

ಹೊಸ ವರ್ಷಕ್ಕೆ ಜನರಿಗೆ ವಿನೂತನ ಉಡುಗೊರೆ ನೀಡಿದ ಉಪೇಂದ್ರ - ಯುಐ ಚಿತ್ರದ ಮೇಕಿಂಗ್​ ಹಂಚಿಕೊಂಡ ನಟ - ನಿರ್ದೇಶಕನ ಸರ್​ಪ್ರೈಸ್​ಗೆ ಅಭಿಮಾನಿಗಳು ಖುಷ್​​

ಹೊಸ ವರ್ಷಕ್ಕೆ ತಮ್ಮ ಬಹುನಿರೀಕ್ಷಿತ ನಿರ್ದೇಶನದ ಚಿತ್ರದ ಬಗ್ಗೆ ಸರ್​ಪ್ರೈಸ್​ ನೀಡಿದ ಉಪೇಂದ್ರ
http://10.10.50.85:6060/reg-lowres/02-January-2023/kn-bng-02-hosa-varushakke-ui-cinema-bhagge-upendra-kotta-surprise-7204735_02012023104246_0201f_1672636366_664.jpg

By

Published : Jan 2, 2023, 11:48 AM IST

ಬೆಂಗಳೂರು: ಕನ್ನಡ ಚಿತ್ರರಂಗ ಅಲ್ಲದೇ ದಕ್ಷಿಣ ಸಿನಿಮಾ ಇಂಡಸ್ಟ್ರಿಯಲ್ಲಿ ಬುದ್ದಿವಂತ ನಿರ್ದೇಶಕ ಹಾಗೂ ನಟ ಎಂದು ಸಾಬೀತು ಮಾಡಿರುವ ನಟ ರಿಯಲ್ ಸ್ಟಾರ್ ಉಪೇಂದ್ರ. ಸದ್ಯ 'ಕಬ್ಜ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ, ಉಪೇಂದ್ರ ಏಳು ವರ್ಷಗಳ ಬಳಿಕ ಆ್ಯಕ್ಷನ್ ಕಟ್ ಹೇಳುತ್ತಿರುವುದು ಗೊತ್ತಿರುವ ವಿಚಾರ. ಈ ಚಿತ್ರದ ಟೈಟಲ್ ಹಾಗೂ ಅದ್ದೂರಿ ಚಿತ್ರದ ಮುಹೂರ್ತವನ್ನು ಕಳೆದ ವರ್ಷ ನೆರವೇರಿಸಲಾಯಿತು. ಸದಾ ಡಿಫ್ರೆಂಟ್ ಅಂತಾ ಗುರುತಿಸಿಕೊಳ್ಳುವ, ರಿಯಲ್ ಸ್ಟಾರ್ ಉಪೇಂದ್ರ 'ಯು ಐ' ಎಂಬ ಹೆಸರಿನ ಟೈಟಲ್ ಇಟ್ಟು, ಅಭಿಮಾನಿಗಳಿಗೆ ಹಾಗೂ ಗಾಂಧಿನಗರದ ಮಂದಿ ತಲೆಗೆ ಹುಳ ಬಿಟ್ಟಿದ್ದಾರೆ. ಸದ್ಯ 'ಯು ಐ' ಎನ್ನುವುದು 'ನೀನು ನಾನು' ಎನ್ನುವ ಶೀರ್ಷಿಕೆ ಅಡಿಯಲ್ಲಿ ಹೊಸ ಕಥೆ ಹೇಳಲು ಬರುತ್ತಿರುವುದು ಗೊತ್ತಿರುವ ವಿಚಾರ.

ಸದ್ದಿಲ್ಲದೆ 'ಯು ಐ' ಸಿನಿಮಾದ ಚಿತ್ರೀಕರಣ ಮಾಡ್ತಾ ಇರುವ ಉಪೇಂದ್ರ, ಅದ್ದೂರಿ ಸೆಟ್​ಗಳನ್ನ ಹಾಕಿ ಈ‌ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾರೆ. ಹೊಸ ವರ್ಷ 2023ಕ್ಕೆ ರಿಯಲ್ ಸ್ಟಾರ್ ತಮ್ಮ 'ಯು ಐ' ಚಿತ್ರದ ಕಲರ್ ಫುಲ್ ಮೇಕಿಂಗ್​ ಅನ್ನು ಅನಾವರಣ ಮಾಡುವ ಮೂಲಕ ಕನ್ನಡ, ತೆಲುಗು, ತಮಿಳು, ಹಿಂದಿ ಹಾಗೂ ಮಲೆಯಾಳಂ ಭಾಷೆಯಲ್ಲಿ ಹೊಸ ವರ್ಷಕ್ಕೆ ತಮ್ಮದೇ ಸ್ಟೈಲ್ ನಲ್ಲಿ ವಿಶ್ ಮಾಡಿದ್ದಾರೆ.

ಸದ್ಯ ರಿವೀಲ್ ಆಗಿರುವ ಮೇಕಿಂಗ್ ನಲ್ಲಿ ಉಪೇಂದ್ರ ತಂತ್ರಜ್ಞರು, ತಾವು ಬಳಸುತ್ತಿರುವ ಹೈ ಟೆಕ್ನಾಲಜಿ ಕ್ಯಾಮರಾ ಹಾಗೂ ಮೇಕಿಂಗ್ ವಿಡಿಯೋವನ್ನ ಒಳಗೊಂಡಿದೆ. ಈಗಾಗಲೇ ಮಿನರ್ವ ಮಿಲ್‌ನಲ್ಲಿ ಸೆಟ್ಟು ಹಾಕಿ ಚಿತ್ರೀಕರಣ ಮಾಡಲಾಗುತ್ತಿದೆ. ಕ್ಯಾಚೀ ಟೈಟಲ್ ಇಟ್ಟುಕೊಂಡು ಈ ಸಿನಿಮಾ ಮಾಡುವ ಮೂಲಕ ಸಮಾಜಕ್ಕೆ ಮೆಸೇಜ್ ನೀಡುತ್ತಿದ್ದಾರೆ ಎನ್ನುವುದು ಈ ಚಿತ್ರದ ಶೀರ್ಷಿಕೆಯಿಂದ ಗೊತ್ತಾಗಿದೆ.

ಇನ್ನು 'ಯು ಐ' ಸಿನಿಮಾದ ಚಿತ್ರಕ್ಕೆ ನಾಯಕಿ ಯಾರಾಗಬಹುದು ಎಂಬ ಕುತೂಹಲ ಸಹಜವಾಗಿ ಇದೆ. ಇಲ್ಲಿವರೆಗೂ ಉಪೇಂದ್ರ ಆಗಲಿ ಚಿತ್ರದ ನಿರ್ಮಾಪಕರಾದ ಕೆ.ಪಿ ಶ್ರೀಕಾಂತ್ ಮತ್ತು ಜಿ ಮನೋಹರ್ ಸುಳಿವು ಬಿಟ್ಟುಕೊಟ್ಟಿಲ್ಲ. ಹೀಗಾಗಿ ಈ‌ ಸಿನಿಮಾ ಮೇಲೆ ಅಭಿಮಾನಿಗಳಿಗೆ ದೊಡ್ಡ ನಿರೀಕ್ಷೆ ಇದೆ. ಲಹರಿ ಫಿಲಂಸ್, ವೀನಸ್ ಎಂಟರ್ಪ್ರೈಸಸ್ ಜಂಟಿಯಾಗಿ ನಿರ್ಮಿಸುತ್ತಿರುವ ಯುಐ ಚಿತ್ರಕ್ಕೆ ಎಲ್ಲ ಯುವ ತಂತ್ರಜ್ಞರು‌ ಕೆಲಸ ಮಾಡ್ತಿರೋದು ವಿಶೇಷ.

ಇದನ್ನೂ ಓದಿ: ಶಿವಣ್ಣನ ಘೋಸ್ಟ್ ಮೋಷನ್​ ಪೋಸ್ಟರ್​ ಬಿಡುಗಡೆ

ABOUT THE AUTHOR

...view details