ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ವರುಣ್ ಧವನ್ ಜೊತೆ ಮಾಡೆಲ್ ಗಿಗಿ ಹಡಿದ್ ಗಮನ ಸೆಳೆದಿದ್ದರು. ಇವರ ಆ ಒಂದು ಭೇಟಿ ಅನೇಕ ಟ್ರೋಲ್ಗಳಿಗೂ ಕಾರಣವಾಗಿತ್ತು. ಜೊತೆಗೆ ಇವರಿಬ್ಬರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ ಎಂಬುದಕ್ಕೆ ಆ ವೇದಿಕೆ ಸಾಕ್ಷಿಯಾಗಿತ್ತು. ಇದೀಗ ಭಾನುವಾರ ಗಿಗಿ ಹಡಿದ್ ಅವರ ಹುಟ್ಟುಹಬ್ಬವಿತ್ತು. ಸೋಶಿಯಲ್ ಮೀಡಿಯಾದ ಮೂಲಕ ನಟಿಗೆ ವರುಣ್ ಸಿಹಿ ಸಂದೇಶ ರವಾನಿಸಿದ್ದಾರೆ. ಈ ಪೋಸ್ಟ್ ಸದ್ಯ ಸಖತ್ ವೈರಲ್ ಆಗಿದೆ.
ಎನ್ಎಂಎಸಿಸಿ ಈವೆಂಟ್ನಲ್ಲಿನ ಒಂದು ಫೋಟೋವನ್ನು ನಟ ವರುಣ್ ಧವನ್ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ವರುಣ್ ಅವರು ಗಿಗಿಯನ್ನು ತಮ್ಮ ತೋಳಿನಲ್ಲಿ ಎತ್ತಿಕೊಂಡಿದ್ದಾರೆ. ಈ ಚಿತ್ರವನ್ನು ಸ್ಟೋರಿ ಹಾಕಿರುವ ನಟ, "ಹ್ಯಾಪಿ ಬರ್ತ್ಡೇ ಗಿಗಿ ಹಡಿದ್. ಕೀಪ್ ಶೈನಿಂಗ್, ಕೀಪ್ ಸ್ಮೈಲಿಂಗ್" ಎಂಬ ಶೀರ್ಷಿಕೆ ಜೊತೆ ಆರೆಂಜ್ ಹಾರ್ಟ್ ಎಮೋಜಿ ಅನ್ನು ಕೈ ಬಿಟ್ಟಿದ್ದಾರೆ.
ಗಿಗಿ ಹಡಿದ್ ಹುಟ್ಟುಹಬ್ಬಕ್ಕೆ ಶುಭಕೋರಿದ ನಟ ವರುಣ್ ಧವನ್
ಗಿಗಿ ಹಡಿದ್ಗೆ ಕಿಸ್ ಮಾಡಿದ ವರುಣ್: ಮಾರ್ಚ್ 31 ರಂದು ಮುಂಬೈನಲ್ಲಿ ನೀತಾ ಮುಖೇಶ್ ಅಂಬಾನಿ ಕಲ್ಚರಲ್ ಸೆಂಟರ್ ಉದ್ಘಾಟನಾ ಸಮಾರಂಭ ಅದ್ದೂರಿಯಾಗಿ ನಡೆದಿತ್ತು. ಈ ವೇಳೆ ಸ್ಟಾರ್ ನಟ ನಟಿಯರು ಹೆಜ್ಜೆ ಹಾಕಿ ಸಮಾರಂಭದ ಮೆರುಗನ್ನು ಹೆಚ್ಚಿಸಿದ್ದರು. ವರುಣ್ ಧವನ್ ಸಹ ಭರ್ಜರಿ ಸ್ಟೆಪ್ ಹಾಕಿದ್ದರು. ತಮ್ಮ ನೃತ್ಯ ಪ್ರದರ್ಶನದ ವೇಳೆ ಮಾಡೆಲ್ ಗಿಗಿ ಹಡಿದ್ ಅವರನ್ನು ವೇದಿಕೆಗೆ ಆಹ್ವಾನಿಸಿದ್ದ ನಟ ಅವರನ್ನು ಎತ್ತಿ ಅವರ ಕೆನ್ನೆಗೆ ಮುತ್ತಿಟ್ಟಿದ್ದರು. ಇದು ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುವುದರ ಜೊತೆಗೆ ಭಾರೀ ಟೀಕೆಯನ್ನು ಎದುರಿಸಿತ್ತು.
ನಟನ ವಿರುದ್ಧ ಕೆಲ ನೆಟ್ಟಿಗರು ಅಸಮಾಧಾನ ಹೊರಹಾಕಿ ಟ್ರೋಲ್ ಮಾಡಿದ್ದರು. ಸಾಕಷ್ಟು ಟೀಕೆಗಳನ್ನು ಸ್ವೀಕರಿಸಿದ ನಂತರ ನಟ ವರುಣ್ ಧವನ್ ಇದು ಯೋಜಿತ ಎಂದು ಹೇಳಿದ್ದರು. ಮೊದಲೇ ಪ್ಲಾನ್ ಮಾಡಿ ಹಾಗೆ ಮಾಡಿದೆವು ಎಂದು ಸ್ಪಷ್ಟಪಡಿಸಿದ್ದರು. ಮಾಡೆಲ್ ಗಿಗಿ ಹಡಿದ್ ಕೂಡ ನಟನ ಪರ ನಿಂತರು. ತಮ್ಮ ಬಾಲಿವುಡ್ ಕನಸುಗಳನ್ನು ಪೂರೈಸಲು ಅವಕಾಶ ಸಿಕ್ಕಿತು ಎಂದು ತಮ್ಮ ಇನ್ಸ್ಟಾ ಸ್ಟೋರಿಯಲ್ಲಿ ತಿಳಿಸಿದ್ದರು.
ವರುಣ್ ಧವನ್ ಹುಟ್ಟುಹಬ್ಬಕ್ಕೆ ಶುಭಕೋರಿದ ಜಾಹ್ನವಿ ಕಪೂರ್
ವರುಣ್ ಧವನ್ಗೆ ಹುಟ್ಟುಹಬ್ಬದ ಸಂಭ್ರಮ:ಇಂದು ವರುಣ್ ಧವನ್ ಅವರ 36ನೇ ವರ್ಷದ ಹುಟ್ಟುಹಬ್ಬ. ಇವರ ಬರ್ತ್ಡೇಗೆ ಬಾಲಿವುಡ್ ಸುಂದರಿ ಜಾಹ್ನವಿ ಕಪೂರ್ ವಿಶೇಷವಾಗಿಯೇ ಶುಭಾಶಯ ಕೋರಿದ್ದಾರೆ. ವರುಣ್ ಅವರೊಂದಿಗಿನ ಸರಣಿ ಫೋಟೋಗಳನ್ನು ಹಂಚಿಕೊಂಡಿರುವ ಜಾಹ್ನವಿ ಕಪೂರ್ ತಮಾಷೆಯ ರೀತಿಯಲ್ಲೇ ವಿಶ್ ಮಾಡಿದ್ದಾರೆ. ಮೊದಲ ಚಿತ್ರದಲ್ಲಿ ವರುಣ್ ಗುಲಾಬಿ ಬಣ್ಣದ ಶರ್ಟ್ ಧರಿಸಿದ್ದು, ಐಸ್ ಕ್ರೀಂ ತುಂಬಿದ ಫುಲ್ ಗ್ಲಾಸಿನೊಂದಿಗೆ ಪೋಸ್ ನೀಡುತ್ತಿರುವುದನ್ನು ಕಾಣಬಹುದು.
ಎರಡನೇ ಚಿತ್ರದಲ್ಲಿ ವರುಣ್ ಮತ್ತು ಜಾಹ್ನವಿ ಕೈಯಲ್ಲಿ ಚಾಕಲೇಟ್ ಪ್ಲೇವರ್ ಐಸ್ ಕ್ರೀಂ ಹಿಡಿದುಕೊಂಡು ಐಸ್ ಕ್ರೀಂ ಪಾರ್ಲರ್ ಎದುರು ಪೋಸ್ ನೀಡಿದ್ದಾರೆ. ಮತ್ತೊಂದು ಚಿತ್ರದಲ್ಲಿ ವರುಣ್ ಭುಜದಲ್ಲಿ ಜಾನ್ವಿ ತಲೆಯಿಟ್ಟು ಮಲಗಿ ಫೋನ್ ನೋಡುತ್ತಿದ್ದಾರೆ. ವರುಣ್ ಬಾಯಿ ತೆರೆದು ಜಾಹ್ನವಿಯನ್ನು ತಿನ್ನಲು ಬಯಸುತ್ತಿರುವಂತೆ ಪೋಸ್ ಕೊಟ್ಟಿದ್ದಾರೆ. ಈ ಮಧ್ಯೆ ವರುಣ್ ಮತ್ತು ಜಾಹ್ನವಿ ನಟನೆಯ ಬವಾಲ್ ಚಿತ್ರ ಅಕ್ಟೋಬರ್ 6 ರಂದು ಬಿಡುಗಡೆಯಾಗಲಿದೆ.
ಇದನ್ನೂ ಓದಿ:ಹೆರಿಗೆ ಆಸ್ಪತ್ರೆ ಮುಂದೆ ಕಾಣಿಸಿಕೊಂಡ ದಂಪತಿ.. ತಂದೆಯಾಗಲಿದ್ದಾರಾ ನಟ ವರುಣ್ ಧವನ್?