ಕರ್ನಾಟಕ

karnataka

ETV Bharat / entertainment

ಸಿನಿಮಾ ಆಫರ್​ಗಾಗಿ ಸಲ್ಮಾನ್​ ಖಾನ್​ ಕರೆ; ನಂಬರ್​ ಬ್ಲಾಕ್​ ಮಾಡಿದ ಶೆಹನಾಜ್​ ಗಿಲ್!​ - ಈಟಿವಿ ಭಾರತ ಕನ್ನಡ

ನಟ ಸಲ್ಮಾನ್​ ಖಾನ್​ ಅವರ ನಂಬರ್​ ಅನ್ನು ಬ್ಲಾಕ್​ ಮಾಡಿದ್ದೆ ಎಂಬ ವಿಷಯವನ್ನು ನಟಿ ಶೆಹನಾಜ್​ ಗಿಲ್​ ಬಹಿರಂಗಪಡಿಸಿದ್ದಾರೆ.

Shehnaaz Gill
ಸಿನಿಮಾ ಆಫರ್​ಗಾಗಿ ಸಲ್ಮಾನ್​ ಖಾನ್​ ಕರೆ

By

Published : Apr 14, 2023, 1:23 PM IST

ನಟಿ, ಗಾಯಕಿ ಶೆಹನಾಜ್​ ಗಿಲ್​ ಅವರು ಸಲ್ಮಾನ್​ ಖಾನ್​ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಬಿಗ್​ ಬಾಸ್​ 13ರಲ್ಲಿ ಶೆಹನಾಜ್​ ಕಾಣಿಸಿಕೊಂಡ ನಂತರ ಅವರಿಬ್ಬರು ನಿರಂತರ ಸಂಪರ್ಕದಲ್ಲಿದ್ದಾರೆ. ಇದೀಗ 'ಕಿಸಿ ಕಾ ಬಾಯ್​ ಕಿಸಿ ಕಿ ಜಾನ್​' ಸಿನಿಮಾದ ಮೂಲಕವು ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲು ಸಿದ್ಧರಾಗಿದ್ದಾರೆ. ಸಿನಿಮಾದ ಪ್ರಚಾರಕ್ಕಾಗಿ ಶೆಹನಾಜ್​ ಸೇರಿದಂತೆ ಚಿತ್ರತಂಡ ಕಪಿಲ್​ ಶರ್ಮಾ ಶೋನಲ್ಲಿ ಇತ್ತೀಚೆಗೆ ಕಾಣಿಸಿಕೊಂಡರು. ಈ ವೇಳೆ ಒಮ್ಮೆ ಆಕಸ್ಮಿಕವಾಗಿ ಸಲ್ಮಾನ್​ ಖಾನ್​ ಅವರ ನಂಬರ್​ ಅನ್ನು ಬ್ಲಾಕ್​ ಮಾಡಿದ್ದೆ ಎಂಬ ವಿಷಯವನ್ನು ಗಿಲ್​ ಬಹಿರಂಗಪಡಿಸಿದರು. ಈ ಸಿನಿಮಾಗೆ ಆಫರ್​ ಬರುವ ಮೊದಲು ಸಲ್ಲು ಮೊಬೈಲ್​ ಸಂಖ್ಯೆಯನ್ನು ಬ್ಲಾಕ್​ ಮಾಡಿದ್ದೆ ಎಂದು ಹೇಳಿದರು.

"ನಾನು ಅಮೃತಸರಕ್ಕೆ ಹೋಗಿದ್ದೆ. ಅಲ್ಲಿಂದ ಗುರುದ್ವಾರಕ್ಕೆ ತೆರಳುತ್ತಿದ್ದಾಗ ಅಪರಿಚಿತ ಸಂಖ್ಯೆಯಿಂದ ನನಗೆ ಕರೆ ಬಂತು. ಯಾವುದಾದರೂ ಅನ್​ನೋನ್​ ನಂಬರ್​ನಿಂದ ಕರೆ ಬಂದರೆ ನಿರ್ಬಂಧಿಸುವ ಅಭ್ಯಾಸ ನನಗಿದೆ. ಹಾಗಾಗಿ ತಕ್ಷಣವೇ ನಾನು ಆ ಸಂಖ್ಯೆಯನ್ನು ಬ್ಲಾಕ್​ ಮಾಡಿದೆ. ನಂತರ ಸ್ವಲ್ಪ ಸಮಯದ ಬಳಿಕ ಸಲ್ಮಾನ್​ ಸರ್​ ನನ್ನನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ಮೆಸೇಜ್​ ನನಗೆ ಬಂತು. ನಾನು ಖಚಿತ ಪಡಿಸಿಕೊಳ್ಳಲು ಟ್ರೂ ಕಾಲರ್​ ಆ್ಯಪ್​ನಲ್ಲಿ ನಂಬರ್​ ಅನ್ನು ಪರಿಶೀಲಿಸಿದೆ. ಅದು ನಿಜವಾಗಿಯೂ ಸಲ್ಮಾನ್​ ಖಾನ್​ ಅವರ ಮೊಬೈಲ್​ ನಂಬರ್​ ಎಂಬುದು ಗೊತ್ತಾಯಿತು. ಬಳಿಕ ಅವರನ್ನು ಅನ್​ಬ್ಲಾಕ್​ ಮಾಡಿ ಅವರಿಗೆ ಕರೆ ಮಾಡಿದೆ. ಅವರು ಈ ಸಿನಿಮಾದ ಆಫರ್​ ನೀಡಿದರು. ಹೀಗಾಗಿ 'ಕಿಸಿ ಕಾ ಬಾಯ್​ ಕಿಸಿ ಕಿ ಜಾನ್​' ಚಿತ್ರದಲ್ಲಿ ನಟಿಸುವ ಅವಕಾಶವನ್ನು ಪಡೆದುಕೊಂಡೆ" ಎಂದು ಹೇಳಿದರು.

ಇತ್ತೀಚೆಗೆ ಸಂವಾದವೊಂದರಲ್ಲಿ ಶೆಹನಾಜ್​ ತಮ್ಮ ಮೊದಲ ಮ್ಯೂಸಿಕ್​ ವಿಡಿಯೋಗಾಗಿ ತಿರಸ್ಕರಿಸಲ್ಪಟ್ಟದ್ದನ್ನು ನೆನಪಿಸಿಕೊಂಡಿದ್ದರು. "ಇಷ್ಟು ಸಣ್ಣ ಹುಡುಗಿ ನಮಗೆ ಬೇಡ, ಅವಳನ್ನು ಹಿಂದಕ್ಕೆ ಕರೆದುಕೊಂಡು ಹೋಗಿ ಎಂದು ಹೇಳಿದ್ದರು. ನಾನು ಮನೆಗೆ ಬಂದು ಜೋರಾಗಿ ಅತ್ತಿದ್ದೆ. ಆಗ ನನ್ನ ತಾಯಿ, ನೀನು ಯಾಕೆ ಅಳುತ್ತಿದ್ದೀಯಾ? ಒಂದು ದಿನ ನೀನು ಸಲ್ಮಾನ್​ ಖಾನ್​ ಜೊತೆ ಚಿತ್ರದಲ್ಲಿ ಅಭಿನಯಿಸುತ್ತೀಯಾ ಎಂದು ಹೇಳಿದ್ದರು. ಅದರಂತೆ ಸರ್​ ನನಗೆ ಒಂದು ಅವಕಾಶ ನೀಡಿದರು. ಅಮ್ಮನ ಮಾತು ಯಾವಾಗಲೂ ನಿಜವಾಗುತ್ತದೆ ಎಂಬುದು ಸಾಬೀತಾಗಿದೆ" ಎಂದು ಹೇಳಿದ್ದರು.

ಟ್ರೇಲರ್​ಗೆ ಎಲ್ಲೆಡೆ ಮೆಚ್ಚುಗೆ: 'ಕಿಸಿ ಕಾ ಬಾಯ್​ ಕಿಸಿ ಕಿ ಜಾನ್​' ಚಿತ್ರದ ಟ್ರೇಲರ್​ ಏಪ್ರಿಲ್​ 10 ರಂದು ಬಿಡುಗಡೆಗೊಂಡಿದೆ. ಸಿನಿಮಾ ಟ್ರೇಲರ್​ ನೋಡಿದ ಪ್ರೇಕ್ಷಕರು ಸಲ್ಲು ಆ್ಯಕ್ಟಿಂಗ್​ಗೆ ಫಿದಾ ಆಗಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ಗಳಿಸಿದೆ. ಫರ್ಹಾದ್​ ಸಾಮ್​ಜಿ ನಿರ್ದೇಶನದ ಈ ಚಿತ್ರದಲ್ಲಿ ಸಲ್ಮಾನ್​ ಖಾನ್​, ಪೂಜಾ ಹೆಗ್ಡೆ, ವೆಂಕಟೇಶ್​ ದಗ್ಗುಬಾಟಿ, ಜಗಪತಿ ಬಾಬು, ಭೂಮಿಕಾ ಚಾವ್ಲಾ, ವಿಜೇಂದರ್​ ಸಿಂಗ್​, ಅಭಿಮನ್ಯು ಸಿಂಗ್​, ರಾಘವ್​ ಜುಯಲ್​, ಸಿದ್ದಾರ್ಥ್​ ನಿಗಮ್​, ಜಸ್ಸಿ ಗಿಲ್​, ಶೆಹನಾಜ್​ ಗಿಲ್​, ಪಾಲಕ್​ ತಿವಾರಿ ಮತ್ತು ವಿನಾಲಿ ಭಟ್ನಾಗರ್​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. 'ಕಿಸಿ ಕಾ ಬಾಯ್​ ಕಿಸಿ ಕಿ ಜಾನ್​' ಏಪ್ರಿಲ್​ 21ರಂದು ತೆರೆ ಕಾಣಲಿದೆ.

ಇದನ್ನೂ ಓದಿ:"ಅರ್ಹಾಳ ನಟನೆ ನಿಮಗೆ ಇಷ್ಟವಾಗುತ್ತದೆ": 'ಶಾಕುಂತಲಂ' ಚಿತ್ರತಂಡಕ್ಕೆ ಅಲ್ಲು ಅರ್ಜುನ್​ ಶುಭಹಾರೈಕೆ

ABOUT THE AUTHOR

...view details