ಕರ್ನಾಟಕ

karnataka

ETV Bharat / entertainment

ಬ್ಲೂ ಟಿಕ್ ಸೇವೆ​ ಕಳೆದು ಕೊಳ್ಳುತ್ತಿದ್ದಂತೆ ಮೆಮ್​ಗೆ ಒಳಗಾದ ಬಾಲಿವುಡ್​ ಸೆಲೆಬ್ರಿಟಿಗಳು - ಬ್ಲೂಟಿಕ್​ ಚಂದಾದಾರಿಕೆ

ಬಾಲಿವುಡ್​ ನಟ - ನಟಿಯರು ತಮ್ಮ ಬ್ಲೂಟಿಕ್​ ಸೇವೆ ಕಳೆದುಕೊಳ್ಳುತ್ತಿದ್ದಂತೆ, ಈ ಕುರಿತು ಮೆಮ್​ಗಳು ಹುಟ್ಟಿಕೊಂಡಿವೆ.

Shah Rukh, Salman, Alia and others lost Blue Tick service
Shah Rukh, Salman, Alia and others lost Blue Tick service

By

Published : Apr 21, 2023, 12:47 PM IST

ಬೆಂಗಳೂರು:ಎಲೋನ್​ ಮಸ್ಕ್​ ಟ್ವಿಟರ್​ ಸಂಸ್ಥೆ ಮಾಲೀಕರಾದ ಬಳಿಕ ಅನೇಕ ಹೊಸ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಅವುಗಳಲ್ಲಿ ಒಂದು ಬ್ಲೂಟಿಕ್​ ಚಂದಾದಾರಿಕೆ. ಅದರ ಕಟ್ಟು ನಿಷ್ಟಿನ ಅನುಷ್ಟಾನಕ್ಕೆ ಮುಂದಾಗಿರುವ ಅವರು, ಇದೀಗ ಅನೇಕ ಸೆಲೆಬ್ರಿಟಿಗಳ ಖಾತೆಯಲ್ಲಿದ್ದ ಬ್ಲೂಟಿಕ್​ ಅನ್ನು ತೆಗೆದು ಹಾಕಿದ್ದಾರೆ. ಟ್ವಿಟರ್​ ಬ್ಲೂಟಿಕ್​ ಸೇವೆ ಹಣ ಪಾವತಿ ಮಾಡದ ಹಿನ್ನಲೆ ಬಾಲಿವುಡ್​ ನಟರಾದ ಶಾರುಖ್​ ಖಾನ್​, ಸಲ್ಮಾನ್​ ಖಾನ್​ ಖಾತೆಯಲ್ಲಿದ್ದ ಈ ಬ್ಲೂ ಟಿಕ್​ ಕಣ್ಮರೆಯಾಗಿದೆ. ಸೆಲೆಬ್ರಿಟಿ, ಪತ್ರಕರ್ತರು ಮತ್ತು ಸಾರ್ವಜನಿಕ ವ್ಯಕ್ತಿಗಳ ಹೆಸರಿನಲ್ಲಿ ನಕಲಿ ಖಾತೆ ಹಾವಳಿ ತಡೆಯುವ ಉದ್ದೇಶದಿಂದ ಈ ಕಠಿಣ ಕ್ರಮ ತೆಗೆದು ಕೊಳ್ಳಲಾಗಿದೆ ಎಂದು ಸಂಸ್ಥೆ ಈ ಹಿಂದೆ ತಿಳಿಸಿತ್ತು.

ಎಲೋನ್​ ಮಸ್ಕ್​​ನ ಈ ಬಿಗಿ ನಿಯಮ ಪಾಲನೆಗೆ ಬಾಲಿವುಡ್​ನ ಅನೇಕ ಮಂದಿ ತಮ್ಮ ಬ್ಲೂ ಟಿಕ್ ಲೆಗಸಿಯನ್ನು ಕಳೆದುಕೊಂಡಿದ್ದಾರೆ. ಕೇವಲ ಶಾರುಖ್​ ಖಾನ್​, ಸಲ್ಮಾನ್​ ಖಾನ್​ ಮಾತ್ರವಲ್ಲದೇ, ಅಮಿತಾ ಬಚ್ಚನ್​, ದೀಪಿಕಾ ಪಡುಕೋಣೆ, ಎಆರ್ ರೆಹಮಾನ್​, ರಜಿನಿಕಾಂತ್​​ ಮತ್ತು ಆಲಿಯಾ ಸೇರಿದಂತೆ ಹಲವರು ಟ್ವಿಟರ್​ ಬ್ಲೂ ಟಿಕ್​ ಸೇವೆ ಕಳೆದುಕೊಂಡಿದ್ದಾರೆ. ಇನ್ನು ಬಾಲಿವುಡ್​ ಸೇರಿದಂತೆ ಭಾರತ ಚಿತ್ರೋದ್ಯಮದ ಅನೇಕ ಸ್ಟಾರ್​ಗಳು ತಮ್ಮ ಈ ಬ್ಲೂ ಟಿಕ್​ ಕಳೆದುಕೊಳ್ಳುತ್ತಿದ್ದಂತೆ ಅನೇಕ ಮೆಮ್​ಗಳು ಹುಟ್ಟಿಕೊಂಡಿದ್ದೆ. ಟ್ವಿಟರ್​ನಲ್ಲಿ ಈ ಸಂಬಂಧ ಕೆಲವು ಫನ್ನಿ ಪ್ರತಿಕ್ರಿಯೆಗಳು ಕೂಡ ವ್ಯಕ್ತವಾಗಿದೆ

ಮೈಕ್ರೋ ಬ್ಲಾಗಿಂಗ್​ ಫ್ಲಾಟ್​ಫಾರ್ಮ್​ ಆಗಿರುವ ಟ್ವಿಟರ್​ ಸಿಇಒ ಆಗಿರುವ ಎಲೋನ್​ ಮಸ್ಕ್​​​ ಈ ಹಿಂದೆಯೇ ಬ್ಲೂಟಿಕ್​ ಪಾವತಿ ಚೆಂದಾದಾರಿಕೆ ಬಗ್ಗೆ ತಿಳಿಸಿದ್ದರು. ಈ ನಿಯಮದ ಕುರಿತು ಆಕ್ಷೇಪಣೆ ಕೇಳಿ ಬಂದಿತ್ತು. ಇದನ್ನು ತಾತ್ಕಲಿಕವಾಗಿ ಹಿಂಪಡೆದ ಅವರು ಇದರ ಅನುಷ್ಠಾನಕ್ಕೆ ಅವರು ಮುಂದಾಗಿರಲಿಲ್ಲ. ಆದರೆ, ಇದೀಗ ಮತ್ತೊಮ್ಮೆ ಈ ನಿಯಮ ಅನುಷ್ಟಾನಕ್ಕೆ ತಂದ ಅವರು, ಏಪ್ರಿಲ್​ 20, 2023ರಿಂದ ಹೊಸ ನಿಯಮ ಪಾಲನೆ ಮುಂದಾದ ಅವರು ಹಣ ಪಾವತಿ ಮಾಡದ ಎಲ್ಲ ಸೆಲೆಬ್ರಿಟಿಗಳ ಬ್ಲೂಟಿಕ್​ ಸೇವೆ ಕಿತ್ತು ಹಾಕಲಾಗುವುದು ಎಂದಿದ್ದರು. ಅದರಂತೆ ಇದೀಗ ಟ್ವಿಟರ್​ ಕಾರ್ಯಾಚರಣೆ ನಡೆಸಿದೆ. ಇದರ ಜೊತೆಗೆ ಚಂದಾದಾರಿಕೆ ಪಾವತಿಸಿದ ಪರೀಶೀಲಿಸಿದ ಅಧಿಕೃತ ಪ್ರೂಫೈಲ್​ಗಳಿಗೆ ಮಾತ್ರ ಈ ಬ್ಲೂಟಿಕ್​ ಸೇವೆ ಲೆಗಸಿ ಮುಂದುವರೆಸಲಾಗಿದೆ.

ಈಗಾಗಲೇ ಯಾವು ಈ ಟ್ವಿಟರ್​​ ಬ್ಲೂ ಮೆಂಬರ್​ಶಿಪ್​ಗೆ ಪಾವತಿ ಮಾಡಿದ್ದಾರೋ ಅವರು ಪ್ರೊಫೈಲ್​ನಲ್ಲಿ ಮಾತ್ರ ಈ ಬ್ಲೂ ಟಿಕ್​ ಕಾಣಿಸುತ್ತಿದೆ. ಅನೇಕ ಮಂದಿ ಈ ಬ್ಲೂಟಿಕ್​ ಸೇವೆ ಕಳೆದು ಕೊಂಡಿರುವುದರಿಂದ ಬೇಸರ ಕೂಡ ವ್ಯಕ್ತಪಡಿಸಿದ್ದಾರೆ. ಬ್ಲೂ ಟಿಕ್​ ವೆರಿಫೈಡ್​ ಹೊಂದಿರುವ ಚಂದಾದಾರರು ಕೇವಲ ಬ್ಲೂ ಟಿಕ್​ ಮಾತ್ರವಲ್ಲದೇ, ಹಲವು ವೈಶಿಷ್ಟ್ಯಗಳನ್ನು ಕೂಡ ಪಡೆಯಬಹುದು. ಇದೀಗ ಬ್ಲೂಟಿಕ್​ ಸೇವೆ ಕಳೆದು ಕೊಂಡಿರುವವರು ಹೊಸದಾಗಿ ಪರಿಚಯಿಸಿದ ಅನೇಕ ಸೇವೆಗಳ ಬಳಕೆಯನ್ನು ಕೂಡ ಪಡೆಯಲು ಸಾಧ್ಯವಾಗುವುದಿಲ್ಲ. ಈ ಟ್ವಿಟರ್​ ಬ್ಲೂ ಟಿಕ್​ಗೆ ಐಫೋನ್​ ಬಳಕೆದಾರರು 11 ಡಾಲರ್​ ಮತ್ತು ಆ್ಯಂಡ್ರೋಯ್ಡ್​ಗೆ 8 ಡಾಲರ್​ ಪಾವತಿ ಮಾಡಬೇಕು.

ಇದನ್ನೂ ಓದಿ:ಚಂದಾದಾರಿಕೆ ಆಧಾರಿತ ಹಣಗಳಿಸುವ ಯೋಜನೆ ಅನಾವರಣ: ಟ್ವಿಟರ್ ಸಿಇಒ

ABOUT THE AUTHOR

...view details