'ಜವಾನ್' 2023ರ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದು. ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅಭಿನಯದ ಆ್ಯಕ್ಷನ್ ಥ್ರಿಲ್ಲರ್ ಚಿತ್ರ. ಮೊದಲ ಬಾರಿಗೆ ದಕ್ಷಿಣ ಚಿತ್ರರಂಗದ ಸ್ಟಾರ್ ಡೈರೆಕ್ಟರ್ ಜೊತೆಗೂಡಿ ಮಾಡುತ್ತಿರುವ ಸಿನಿಮಾ. ಜವಾನ್ ಬಿಡುಗಡೆಗೆ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ.
ಬಾಲಿವುಡ್ ನಟ ಶಾರುಖ್ ಖಾನ್ ಅವರ ಮುಂಬರುವ ಚಿತ್ರ 'ಜವಾನ್'ನ ಟೀಸರ್ ಬಿಡುಗಡೆಗೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಸಿನಿಮಾ ಸಾಕಷ್ಟು ಸದ್ದು ಮಾಡಿದೆ. ಚಿತ್ರದ ಕುರಿತ ಪ್ರಚಾರ ಮತ್ತು ಅಭಿಮಾನಿಗಳ ಕುತೂಹಲ ನಿರಂತರವಾಗಿ ಹೆಚ್ಚುತ್ತಿವೆ. ಟ್ವಿಟರ್‌ನಲ್ಲಿ ನಟ ನಡೆಸಿದ #AskSRK ಸೆಷನ್‌ನಲ್ಲಿ ಜವಾನ್ ಟೀಸರ್ ಸಿದ್ಧವಾಗಿದೆ ಎಂದು ಸುಳಿವು ನೀಡಿದಾಗಿನಿಂದ ಅಭಿಮಾನಿಗಳು ಟೀಸರ್ ಬಗ್ಗೆ ಕಲ್ಪನೆ ಮಾಡುತ್ತಲೇ ಇದ್ದಾರೆ, ಚಿತ್ರದ ಕುರಿತು ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ. ಇತ್ತೀಚಿನ ಮಾಹಿತಿ ಪ್ರಕಾರ, ಜವಾನ್ ಟೀಸರ್ ಬಿಡುಗಡೆಗೆ ಚಿತ್ರ ತಯಾರಕರ ಎದುರಲ್ಲಿ ಎರಡು ದಿನಾಂಕಗಳಿವೆ.
ಜವಾನ್ ಸಿನಿಮಾ ಸೆಪ್ಟೆಂಬರ್ 7ರಂದು ತೆರೆ ಕಾಣಲು ಸಜ್ಜಾಗಿದೆ. ಈ ಹಿನ್ನೆಲೆಯಲ್ಲಿ ಎರಡು ತಿಂಗಳ ಸುದೀರ್ಘ ಪ್ರಚಾರ ಕೈಗೊಳ್ಳಲು ಚಿತ್ರತಂಡ ಮುಂದಾಗಿದೆ. ಮೊದಲ ಹಂತವಾಗಿ ಸಿನಿಮಾದ ಟೀಸರ್ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಜವಾನ್ ಟೀಸರ್ ಜುಲೈನಲ್ಲಿ ಅನಾವರಣಗೊಳ್ಳುವ ಸಾಧ್ಯತೆ ಇದೆ. ನಾಯಕ ನಟ ಎಸ್‌ಆರ್‌ಕೆ ಮತ್ತು ನಿರ್ದೇಶಕ ಅಟ್ಲೀ ಕುಮಾರ್ ಅವರು ಜವಾನ್ ಟೀಸರ್ ಅನ್ನು ಬಿಡುಗಡೆ ಮಾಡಲು ಜುಲೈನಲ್ಲಿ ಎರಡು ದಿನಾಂಕಗಳ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ವರದಿಗಳು ಸೂಚಿಸಿವೆ.
ಜವಾನ್ ಟೀಸರ್‌ನ ಗ್ರ್ಯಾಂಡ್ ಲಾಂಚ್‌ಗಾಗಿ ಜುಲೈ 7 ಅಥವಾ 15 ದಿನಾಂಕ ಈ ತಂಡದ ಮುಂದಿವೆ. ಫೈನಲ್ ಕ್ಲಿಪ್ ಸಿದ್ಧವಾಗಿದ್ದರೂ, ಹೆಚ್ಚಿನ ಅಭಿಮಾನಿಗಳ ನಡುವೆ ಜವಾನ್ ಟೀಸರ್ ಅನ್ನು ಚೆನ್ನೈನಲ್ಲಿ ಅನಾವರಣಗೊಳಿಸುವ ನಿಟ್ಟಿನಲ್ಲಿ "ವಿಶೇಷ ಅತಿಥಿ" ಇಂದ ಒಪ್ಪಿಗೆ ಪಡೆದ ನಂತರವೇ ದಿನಾಂಕವನ್ನು ಅಂತಿಮಗೊಳಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.