ಕಂಟೆಂಟ್ ಒಳಗೊಂಡ, ಹೊಸತನವುಳ್ಳ ಸಿನಿಮಾಗಳು ಯಾವತ್ತೂ ಗೆಲ್ಲುತ್ತೆ, ಸಪೋರ್ಟ್ ಸಿಗುತ್ತೆ ಅನ್ನೋದಕ್ಕೆ ‘ಕಂಬ್ಳಿಹುಳ’ ಸಿನಿಮಾ ಸಾಕ್ಷಿಯಾಗಿದೆ. ಸ್ಯಾಂಡಲ್ವುಡ್ ಅಂಗಳದಲ್ಲಿ ಕಳೆದೊಂದು ವಾರದಿಂದ ಸಖತ್ ಸುದ್ದಿಯಲ್ಲಿರುವ ಸಿನಿಮಾ ಹೊಸ ಪ್ರತಿಭೆಗಳೇ ಸೇರಿ ಮಾಡಿರುವ ಕಂಬ್ಳಿಹುಳ. ನ. 4ರಂದು ರಾಜ್ಯಾದ್ಯಂತ ತೆರೆಕಂಡ ಈ ಚಿತ್ರಕ್ಕೆ ಪ್ರೇಕ್ಷಕ ಪ್ರಭುಗಳು ಮಾತ್ರವಲ್ಲ, ಚಂದನವನದ ಸಿನಿ ತಾರೆಯರ ಮೆಚ್ಚುಗೆ ಗಳಿಸುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.
ಹೌದು, ಸೋಶಿಯಲ್ ಮೀಡಿಯಾದಲ್ಲಿ ಎಲ್ಲೆಲ್ಲೂ ‘ಕಂಬ್ಳಿಹುಳ’ ಸಿನಿಮಾದ್ದೇ ಮಾತು. ಚಿತ್ರ ನೋಡಿದ ಸಿನಿಪ್ರಿಯರು ಹೊಸತನವನ್ನು ಒಪ್ಪಿ ಅಪ್ಪಿಕೊಂಡಿದ್ದು, ಮಾತ್ರವಲ್ಲದೇ ಹೊಸಬರ ಪ್ರಯತ್ನವಿರುವ ಚಿತ್ರವನ್ನು ಇನ್ನಷ್ಟು ಜನ ನೋಡಬೇಕು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಾರೆ. ಸಪೋರ್ಟ್ ಕಂಬ್ಳಿಹುಳ, ನಮ್ಮ ಮಣ್ಣಿನ ಸಿನಿಮಾ ಎಂಬ ಹ್ಯಾಶ್ ಟ್ಯಾಗ್ ಬಳಸಿ ಟ್ರೆಂಡ್ ಮಾಡುತ್ತಿದ್ದಾರೆ. ಇದು ಕನ್ನಡ ಸಿನಿ ಪ್ರೇಮಿಗಳು ಹೊಸಬರ ಸಿನಿಮಾಗೆ ನೀಡುತ್ತಿರೋ ಬೆಂಬಲ. ಆದ್ರೆ ಇತ್ತ ಚಂದನವನ ಕೂಡ ಕಂಬ್ಳಿಹುಳ ಸಿನಿಮಾ ತಂಡಕ್ಕೆ ಬೆನ್ನೆಲುಬಾಗಿ ನಿಂತಿದೆ.
ಹೀಗಾಗಿ ಚಂದನವನದ ಸಿನಿ ತಾರೆಯರು, ನಿರ್ಮಾಪಕರು, ನಿರ್ದೇಶಕರು ಸಿನಿಮಾ ಬಗ್ಗೆ ಕೇಳಿ ಬರ್ತಿರೋ ಪ್ರಶಂಸೆ ಕಂಡು ಸ್ವತಃ ಸಿನಿಮಾ ನೋಡಿ ಸಿನಿಮಾ ತಂಡಕ್ಕೆ ಸಾಥ್ ನೀಡುತ್ತಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ ಸಿನಿಮಾ ತಂಡಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆ. ಸಿನಿಮಾವೊಂದರ ಗೆಲುವಿಗಾಗಿ ಚಿತ್ರರಂಗ ಒಗ್ಗಟ್ಟಾಗಿ ನಿಂತಿರೋದರ ಬಗ್ಗೆ ಎಲ್ಲೆಡೆಯಿಂದ ಮೆಚ್ಚುಗೆ ಮಾತುಗಳು ಕೇಳಿ ಬರ್ತಿವೆ.