ಕರ್ನಾಟಕ

karnataka

ETV Bharat / entertainment

'ಟ್ಯಾಕ್ಸಿ ಡ್ರೈವರ್​ಗೆ ಹಣ ಕೊಡದೇ ಓಡಿ ಹೋಗಿದ್ದೆ': ಕಷ್ಟದ ದಿನಗಳನ್ನು ಸ್ಮರಿಸಿದ ಸಲ್ಮಾನ್​ ಖಾನ್​​ - ಸಲ್ಮಾನ್​ ಖಾನ್ ಕಾಲೇಜು ದಿನಗಳು

ಕಪಿಲ್​ ಶರ್ಮಾ ಶೋನಲ್ಲಿ ನಟ ಸಲ್ಮಾನ್​ ಖಾನ್​ ಭಾಗಿಯಾಗಿ ತಮ್ಮ ಕಾಲೇಜು ದಿನಗಳನ್ನು ನೆನಪಿಸಿಕೊಂಡರು.

salman Khan
ಸಲ್ಮಾನ್​ ಖಾನ್​​

By

Published : Apr 16, 2023, 5:38 PM IST

ಬಾಲಿವುಡ್ ಸೂಪರ್‌ ಸ್ಟಾರ್ ಸಲ್ಮಾನ್ ಖಾನ್ ವಿಶ್ವಾದ್ಯಂತ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಂಪಾದಿಸಿರುವ ಬಹುಬೇಡಿಕೆಯ ತಾರೆ. ಭಾರತದ ಶ್ರೀಮಂತ ನಟರ ಪೈಕಿ ಇವರು ಪ್ರಮುಖರು. ಆದ್ರೆ ಇವರೂ ಕೂಡ ಕೈಯಲ್ಲಿ ಬಿಡುಗಾಸಿಲ್ಲದ ದಿನಗಳನ್ನು ನೋಡಿದ್ದಾರೆ. ಟ್ಯಾಕ್ಸಿ ಡ್ರೈವರ್‌ಗೆ ಪಾವತಿಸಲು ಹಣವಿಲ್ಲದ ತಮ್ಮ ಕಾಲೇಜು ದಿನಗಳ ಪರಿಸ್ಥಿತಿಯನ್ನು ಕಾರ್ಯಕ್ರಮವೊಂದರಲ್ಲಿ ನೆನಪಿಸಿಕೊಂಡರು. ಆದರೆ, ಹಲವು ವರ್ಷಗಳ ನಂತರ ಮತ್ತೆ ಭೇಟಿಯಾದಾಗ ಬಡ್ಡಿ ಸಮೇತ ಸಂಪೂರ್ಣ ಹಣ ಪಾವತಿಸಿದರಂತೆ.

ಈ ವಾರದ ಕಪಿಲ್​ ಶರ್ಮಾ ಶೋನಲ್ಲಿ ಸಲ್ಮಾನ್​ ಖಾನ್​ ಭಾಗಿಯಾಗಿದ್ದಾರೆ. ಸೋನಿ ಎಂಟರ್​​ಟೈನ್​ಮೆಂಟ್ ಟಿವಿಯಲ್ಲಿ ನಿನ್ನೆ ರಾತ್ರಿ ಒಂದು ಎಪಿಸೋಡ್​ ಪ್ರಸಾರವಾಗಿದ್ದು, ಮತ್ತೊಂದು ಸಂಚಿಕೆ ಇಂದು ರಾತ್ರಿ ಪ್ರಸಾರವಾಗಲಿದೆ. ತಮ್ಮ ಮುಂದಿನ ಬಹುನಿರೀಕ್ಷಿತ ಚಿತ್ರ ಕಿಸಿ ಕಾ ಭಾಯ್​ ಕಿಸಿ ಕಿ ಜಾನ್​​ ಪ್ರಚಾರದ ಸಲುವಾಗಿ ಭಾರತದ ಜನಪ್ರಿಯ ಕಾರ್ಯಕ್ರಮದಲ್ಲಿ ಸಲ್ಲು ಕಾಣಿಸಿಕೊಂಡಿದ್ದಾರೆ. ಈ ಶೋನಲ್ಲಿ ಕೆಲ ಕುತೂಹಲಕಾರಿ ಸಂಗತಿಗಳನ್ನು ಅವರು ಬಹಿರಂಗಪಡಿಸಿದ್ದಾರೆ.

"ನಾವು ಸಾಮಾನ್ಯವಾಗಿ ಕಾಲೇಜಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆವು. ಕೆಲವೊಮ್ಮೆ ಆರಾಮವಾಗಿ ಪ್ರಯಾಣಿಸಬೇಕೆಂದು ಅನಿಸುತ್ತಿತ್ತು. ಒಂದು ದಿನ ನಾನು ನನ್ನ ಕಾಲೇಜಿಗೆ ಟ್ಯಾಕ್ಸಿಯಲ್ಲಿ ಹೋಗಲು ನಿರ್ಧರಿಸಿದೆ. ಆದರೆ ಮೋಜಿನ ವಿಷಯವೆಂದರೆ, ಟ್ಯಾಕ್ಸಿಗೆ ಪಾವತಿಸಲು ನನ್ನ ಬಳಿ ಹಣವಿರಲಿಲ್ಲ. ಹಾಗಾಗಿ, ಕಾಲೇಜಿನ ಬಳಿ ಟ್ಯಾಕ್ಸಿ ಚಾಲಕನನ್ನು ನಿಲ್ಲಿಸಿದೆ. ನಾನು ಹಣವನ್ನು ಒಂದು ಸ್ಥಳದಿಂದ ಪಡೆದು ನಿಮಗೆ ಕೊಡುತ್ತೇನೆ ಎಂದು ಹೇಳಿ ವಾಹನ ಹತ್ತಿದೆ. ಆದರೆ ನಾನು ಹಣ ಕೊಡಲಿಲ್ಲ" ಎಂದು ಖಾನ್​ ತಿಳಿಸಿದ್ದಾರೆ.

ಸಲ್ಮಾನ್​ ಖಾನ್​​ ಮೈನೆ ಪ್ಯಾರ್ ಕಿಯಾ, ಹಮ್ ಆಪ್ಕೆ ಹೈ ಕೌನ್, ಹಮ್ ಸಾಥ್ ಸಾಥ್ ಹೈ, ಕರಣ್ ಅರ್ಜುನ್, ಬಿವಿ ನಂ 1, ವಾಂಟೆಡ್, ದಬಾಂಗ್, ರೆಡಿ, ಬಾಡಿಗಾರ್ಡ್, ಏಕ್ ಥಾ ಟೈಗರ್, ದಬಾಂಗ್ 2 ಸೇರಿದಂತೆ ಅನೇಕ ಹಿಟ್​ ಚಿತ್ರಗಳನ್ನು ಮನೋರಂಜನಾ ಕ್ಷೇತ್ರಕ್ಕೆ ನೀಡಿದ್ದಾರೆ. ತಮ್ಮ ಮುಂದಿನ ಬಹು ನಿರೀಕ್ಷಿತ ಚಿತ್ರ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಪ್ರಚಾರದಲ್ಲಿ ಈಗ ನಿರತರಾಗಿದ್ದಾರೆ. ಪೂಜಾ ಹೆಗ್ಡೆ, ಶೆಹನಾಜ್ ಗಿಲ್, ರಾಘವ್ ಜುಯಲ್, ಪಲಕ್ ತಿವಾರಿ, ಜಸ್ಸಿ ಗಿಲ್, ಸಿದ್ಧಾರ್ಥ್ ನಿಗಮ್, ವಿನಾಲಿ ಭಟ್ನಾಗರ್ ಮತ್ತು ಸುಖ್ಬೀರ್ ಸೇರಿದಂತೆ ಸಲ್ಮಾನ್ ತಮ್ಮ ಚಿತ್ರದ ಪಾತ್ರವರ್ಗದೊಂದಿಗೆ ತಮ್ಮ ಚಿತ್ರದ ಪ್ರಚಾರಕ್ಕಾಗಿ ಕಪಿಲ್ ಶರ್ಮಾ ಶೋನಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ:ಅಬ್ಬಬ್ಬಾ, 10 ಭಾಷೆಗಳಲ್ಲಿ ನಿರ್ಮಾಣವಾಗಲಿದೆ ನಟ ಸೂರ್ಯ ಸಿನಿಮಾ: ಟೈಟಲ್​ ಫಿಕ್ಸ್​​

ನಿರೂಪಕ ಕಪಿಲ್ ಶರ್ಮಾ ಅವರೊಂದಿಗೆ ಸಂಭಾಷಣೆಯ ಸಮಯದಲ್ಲಿ ಸಲ್ಮಾನ್ ಖಾನ್​ ತಮ್ಮ ಕಾಲೇಜು ದಿನಗಳ ಬಗ್ಗೆ ಮಾತನಾಡಿದರು. ಪ್ರತಿದಿನ ಟ್ಯಾಕ್ಸಿಗೆ ಕೊಡುವಷ್ಟು ಹಣವಿಲ್ಲದ ಕಾರಣ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆವು. ಆದಾಗ್ಯೂ, ಒಮ್ಮೆ ಟ್ಯಾಕ್ಸಿ ಹಣ ಪಾವತಿಸದೇ (ಈ ಮೇಲೆ ತಿಳಿಸಿದ ಘಟನೆ) ಓಡಿ ಹೋಗಿದ್ದೆ. ವರ್ಷಗಳ ನಂತರ, ಸಿನಿಮಾ ಇಂಡಸ್ಟ್ರಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ ವೇಳೆ ಆ ಚಾಲಕನನ್ನು ಭೇಟಿಯಾದೆ. ಆ ಸಂದರ್ಭ ಟ್ಯಾಕ್ಸಿ ಶುಲ್ಕವನ್ನು ಬಡ್ಡಿಯೊಂದಿಗೆ ಪಾವತಿಸಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಶೂಟಿಂಗ್​ ಸೆಟ್​ನಲ್ಲಿ ಸಲ್ಮಾನ್​​ ಖಾನ್​ ಡ್ರೆಸ್ ರೂಲ್ಸ್​: ಸ್ಪಷ್ಟನೆ ಕೊಟ್ಟ ಪಲಕ್​ ತಿವಾರಿ

"ನಾನು ಮಾಡೆಲಿಂಗ್‌ ಕ್ಷೇತ್ರದಲ್ಲಿ ತೊಡಗಿಸಿಕೊಂಡೆ ಮತ್ತು ಹಣ ಸಂಪಾದಿಸಲು ಪ್ರಾರಂಭಿಸಿದೆ. ಆ ಸಂದರ್ಭ ನಾನು ಮನೆಗೆ ಟ್ಯಾಕ್ಸಿಯಲ್ಲಿ ಹೋಗಲು ನಿರ್ಧರಿಸಿದೆ. ಒಮ್ಮೆ ನಾನು ಒಂದು ಟ್ಯಾಕ್ಸಿ ನಿಲ್ಲಿಸಿ ಅದರೊಳಗೆ ಕುಳಿತುಕೊಂಡೆ. ಆದರೆ ಪ್ರಯಾಣದುದ್ದಕ್ಕೂ, ಟ್ಯಾಕ್ಸಿ ಡ್ರೈವರ್ ನಿಮ್ಮನ್ನು ಎಲ್ಲೋ ನೋಡಿದ್ದೇನೆ ಎಂದು ಹೇಳುತ್ತಲೇ ಇದ್ದರು. ನಾನು ಮನೆಗೆ ತಲುಪಿದಾಗ, ನಾನು ಹಣವನ್ನು ತಂದು ಕೊಡುತ್ತೇನೆ ಎಂದು ಅವರಿಗೆ ಹೇಳಿದೆ. ಕೂಡಲೇ ಅವರು ನನ್ನನ್ನು ಗುರುತಿಸಿದರು. ಆ ಕ್ಷಣ ನಾವು ನಗೆಗಡಲಿನಲ್ಲಿ ತೇಲಿದೆವು. ಬಡ್ಡಿಯೊಂದಿಗೆ ಅವರ ಹಣ ಪಾವತಿಸಿದೆ'' ಎಂದು ಸಲ್ಮಾನ್​ ಖಾನ್ ತಿಳಿಸಿದರು.

ABOUT THE AUTHOR

...view details