ಕರ್ನಾಟಕ

karnataka

ETV Bharat / entertainment

ಪೃಥ್ವಿರಾಜ್​ ಹುಟ್ಟುಹಬ್ಬಕ್ಕೆ ಸಲಾರ್​ ಚಿತ್ರತಂಡದಿಂದ ಗಿಫ್ಟ್...ಹೊಸ ಪೋಸ್ಟರ್ ರಿಲೀಸ್ - actor prithviraj sukumaran birthday

ಸಲಾರ್​ ಚಿತ್ರದಲ್ಲಿ ಬಣ್ಣ ಹಚ್ಚಿರುವ ಮಲಯಾಳಂ ಸ್ಟಾರ್ ನಟ ಪೃಥ್ವಿರಾಜ್​ ಸುಕುಮಾರನ್ ಅವರ ಮೊದಲ ಪೋಸ್ಟರ್​ ಅನ್ನು ಹೊಂಬಾಳೆ ಫಿಲಂಸ್ ಅನಾವರಣಗೊಳಿಸಿದೆ. ಪೋಸ್ಟರ್​ನಲ್ಲಿ ಪೃಥ್ವಿರಾಜ್ ರಗಡ್​ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

Salaar movie poster release as actor prithviraj sukumaran birthday
ಪೃಥ್ವಿರಾಜ್​ ಹುಟ್ಟುಹಬ್ಬಕ್ಕೆ ಸಲಾರ್​ ಚಿತ್ರತಂಡದಿಂದ ಗಿಫ್ಟ್

By

Published : Oct 16, 2022, 10:46 AM IST

Updated : Oct 16, 2022, 11:18 AM IST

ಕೆಜಿಎಫ್ 1 ಮತ್ತು ಕೆಜಿಎಫ್ 2 ಚಿತ್ರಗಳ ನಿರ್ಮಾಪಕರಾದ ಹೊಂಬಾಳೆ ಫಿಲಂಸ್ ಸಂಸ್ಥೆಯಿಂದ ನಿರ್ಮಾಣವಾಗುತ್ತಿರುವ ಸಲಾರ್​ ಚಿತ್ರತಂಡ ಹೊಸ ಪೋಸ್ಟರ್ ಒಂದನ್ನು ಬಿಡುಗಡೆ ಮಾಡಿದೆ. ಮಲೆಯಾಳಂ ಚಿತ್ರಂಗದ ಸೂಪರ್​ಸ್ಟಾರ್, ಸಲಾರ್​ ಸಿನಿಮಾದ ಪಾತ್ರಧಾರಿಯೂ ಆಗಿರುವ ನಟ ಪೃಥ್ವಿರಾಜ್​ ಸುಕುಮಾರನ್​ ಹುಟ್ಟುಹಬ್ಬ ಹಿನ್ನೆಲೆ ಸಲಾರ್​ ಚಿತ್ರತಂಡ ಪೋಸ್ಟರ್ ಬಿಡುಗಡೆ ಮಾಡಿದೆ.

ವರ್ಧರಾಜ ಮನ್ನಾರ್​​ ಪಾತ್ರಧಾರಿ ಪೃಥ್ವಿರಾಜ್​ ಸುಕುಮಾರನ್ ಪೋಸ್ಟರ್ ಅನ್ನು ನಿರ್ಮಾಣ ಸಂಸ್ಥೆ ಇದೇ ಮೊದಲ ಬಾರಿಗೆ ಅನಾವರಣಗೊಳಿಸಿದೆ. ಈ ಮೂಲಕ ಬಹುಮುಖ ಪ್ರತಿಭೆಯ ನಟನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಟ್ವೀಟ್ ಮಾಡಿದೆ. ಇದಕ್ಕೆ ಧನ್ಯವಾದ ತಿಳಿಸಿರುವ ನಟ ಪೃಥ್ವಿರಾಜ್​ ಸುಕುಮಾರನ್​ 2023ರ ಸೆಪ್ಟೆಂಬರ್​ 23ರಂದು ಚಿತ್ರಮಂದಿಗಳಲ್ಲಿ ವರ್ಧರಾಜ ಮನ್ನಾರ್ ಅವರನ್ನು ನೋಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಬಾಹುಬಲಿ ಖ್ಯಾತಿಯ ಪ್ರಭಾಸ್ ನಟನೆಯ, ಕೆಜಿಎಫ್ ಖ್ಯಾತಿಯ ಪ್ರಶಾಂತ್ ನಿರ್ದೇಶನದ ಸಲಾರ್ ಚಿತ್ರದಲ್ಲಿ ಬಹು ತಾರಾಗಣವಿದೆ. ಪ್ಯಾನ್ ಇಂಡಿಯಾ ಚಿತ್ರವಾಗಿರುವ ಸಲಾರ್ ಮೇಲೆ ಸಿನಿಮಾ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ.

ಇದನ್ನೂ ಓದಿ:ಕಾಂತಾರ ಹವಾ: ರಿಷಬ್ ಶೆಟ್ರನ್ನು ಅಪ್ಪಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ ನಟ ಕಾರ್ತಿ

ಮಲಯಾಳಂ ಚಿತ್ರರಂಗದಲ್ಲಿ ನಟ, ನಿರ್ದೇಶಕ, ನಿರ್ಮಾಪಕ ಮತ್ತು ಹಿನ್ನೆಲೆ ಗಾಯಕರಾಗಿ ಸಾಧನೆಗೈದಿರುವ ನಟ ಪೃಥ್ವಿರಾಜ್ ಸುಕುಮಾರನ್ 1982ರ ಅಕ್ಟೋಬರ್​ 16ರಂದು ಕೇರಳದ ತಿರುವನಂತಪುರಂನಲ್ಲಿ ಜನಿಸಿದರು. ಸುಕುಮಾರನ್​ ಮತ್ತು ಮಲ್ಲಿಕಾ ದಂಪತಿಯ ಸುಪುತ್ರ. 2002ರಲ್ಲಿ ನಂದನಂ ಚಿತ್ರದ ಮೂಲಕ ಅಭಿನಯ ಲೋಕಕ್ಕೆ ಪಾದಾರ್ಪಣೆ ಮಾಡಿದ ಅವರು ತಮಿಳು, ತೆಲುಗು ಮತ್ತು ಹಿಂದಿ ಚಲನಚಿತ್ರಗಳನ್ನೂ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ವಿವಿಧ ಪಾತ್ರಗಳಲ್ಲಿ 100ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿರುವ ಪೃಥ್ವಿರಾಜ್, ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಮೂರು ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿಗಳು, ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ ಮತ್ತು ಫಿಲ್ಮ್‌ಫೇರ್ ಅವಾರ್ಡ್ಸ್ ಸೌತ್ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಸಲಾರ್​ ಚಿತ್ರದ ಭಾಗವಾಗಿದ್ದು, ಸಿನಿಮಾ ಮೇಲೆ ನಿರೀಕ್ಷೆ ದುಪ್ಪಟ್ಟಾಗಿದೆ.

Last Updated : Oct 16, 2022, 11:18 AM IST

ABOUT THE AUTHOR

...view details