ಕರ್ನಾಟಕ

karnataka

ETV Bharat / entertainment

ಪ್ರಧಾನಿ ಭೇಟಿ ಮಾಡಿದ ಖುಷಿ ಹಂಚಿಕೊಂಡ ಆರ್​ಜೆ ಶ್ರದ್ಧಾ: 'ಅಯ್ಯೋ' ಎಂದ ಮೋದಿ

ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳ ಜೊತೆ ಆರ್​ಜೆ ಅಯ್ಯೋ ಶ್ರದ್ಧಾ ಅವರೂ ಪ್ರಧಾನಿ ಮೋದಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

By

Published : Feb 14, 2023, 8:05 PM IST

RJ Shraddha Met PM Modi
ಪ್ರಧಾನಿ ಭೇಟಿ ಮಾಡಿದ ಆರ್​ಜೆ ಶ್ರದ್ಧಾ

ಅಯ್ಯೋ ಶ್ರದ್ಧಾ

ನಿನ್ನೆ ಬೆಂಗಳೂರಿನಲ್ಲಿ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ಉದ್ಘಾಟನೆ ಮಾಡಲು ಒಂದು ದಿನ ಮುಂಚಿತವಾಗಿಯೇ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ರಾತ್ರಿ ಔತಣಕೂಟದಲ್ಲಿ ಕನ್ನಡ ಚಿತ್ರರಂಗದ ಸೆಲೆಬ್ರಿಟಿಗಳಿಗೆ ಆಹ್ವಾನ ನೀಡಿ, ಅವರ ಜೊತೆ ಕೆಲಹೊತ್ತು ಮಾತುಕತೆ ನಡೆಸಿದ್ದರು. ಈ ವೇಳೆ ರಾಕಿಂಗ್​ ಸ್ಟಾರ್​ ಯಶ್, ನಟ ರಿಷಬ್​ ಶೆಟ್ಟಿ, ಅಶ್ವಿನಿ ಪುನೀತ್​ ರಾಜ್​ಕುಮಾರ್​ ಹೊಂಬಾಳೆಯ ವಿಜಯ್​ ಕಿರಗಂದೂರ್​ ಜೊತೆಗೆ ನಮ್ಮ ಹಾಸ್ಯನಟಿ, ನಟಿ, ಆರ್​ಜೆ ಅಯ್ಯೋ ಶ್ರದ್ಧಾ ಕೂಡ ಪ್ರಧಾನಿ ಮೋದಿಯನ್ನು ಭೇಟಿ ಮಾಡಿದ್ದಾರೆ.

ಪ್ರಧಾನಿ ಮೋದಿಯನ್ನು ಭೇಟಿ ಮಾಡಿರುವ ಕುರಿತು ಆರ್​ಜೆ ಶ್ರದ್ಧಾ ಜೈನ್​ ತಮ್ಮ ಇನ್​ಸ್ಟಾಗ್ರಾಂ ಹಾಗೂ ಟ್ವಿಟರ್​ನಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಮೋದಿ ಜೊತೆ ತಾವು ನಿಂತಿರುವ ಒಂದು ಫೋಟೋ ಹಾಗೂ ಯಶ್​, ರಿಷಬ್​ ಶೆಟ್ಟಿ, ಅಶ್ವಿನಿ ಪುನೀತ್​ ರಾಜ್​ಕುಮಾರ್​, ವಿಜಯ್​ ಕಿರಗಂದೂರು ಇರುವ ಗ್ರೂಪ್​ ಫೋಟೋ ಶೇರ್​ ಮಾಡಿಕೊಂಡಿದ್ದಾರೆ. ಫೋಟೋ ಜೊತೆ ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಖುಷಿಯನ್ನೂ ಪದಗಳಲ್ಲಿ ಹಾಗೂ ಮಾಧ್ಯಮಗಳ ಜೊತೆಗೂ ಹಂಚಿಕೊಂಡಿದ್ದಾರೆ.

'ಪ್ರಧಾನಿ ಮೋದಿಯನ್ನು ಭೇಟಿ ಮಾಡಲು ಕೊಠಡಿಯೊಳಗೆ ಪ್ರವೇಶಿಸುತ್ತಿದ್ದಂತೆ ಕೈ ಕುಲುಕಿದರು, ಆಗ ಪ್ರಧಾನಿ ಆಡಿದ ಮೊದಲ ಮಾತು 'ಅಯ್ಯೋ'. ಅಯ್ಯೋ ಎನ್ನುವುದು ನನ್ನ ಸೋಶಿಯಲ್​ ಮೀಡಿಯಾ ಹ್ಯಾಂಡಲ್​ನ ಮೊದಲ ಪದ. ನನ್ನ ಶೋಷಿಯಲ್​ ಮೀಡಿಯಾ ಅಕೌಂಟ್​ಗಳೆಲ್ಲಾ ಅಯ್ಯೋ ಶ್ರದ್ಧಾ ಎಂದೇ ಇದೆ. ಆ ಪದವನ್ನು ಪ್ರಧಾನಿ ಆಡಿದಾಗ ನನ್ನಲ್ಲಾದ ಖುಷಿ ಅಷ್ಟಿಷ್ಟಲ್ಲ. ನಾನು ಕಣ್ಣು ಮಿಟುಕಿಸದೆ ಅವರನ್ನೇ ನೋಡಿದೆ. ಆ ಪದವನ್ನು, ನನ್ನ ಮುಖವನ್ನು ನೆನಪಿಸಿಕೊಂಡು ದೇಶದ ಪ್ರಧಾನಿಯೊಬ್ಬರು ನನ್ನನ್ನು ವಿಷ್​ ಮಾಡಿದ್ರು ಎಂದರೆ ಆ ಖುಷಿಯನ್ನು ನಾನು ಪದಗಳಲ್ಲಿ ಸೆರೆ ಹಿಡಿಯಲು ಸಾಧ್ಯವಿಲ್ಲ ಎಂದು ತಮ್ಮ ಸೋಶಿಯಲ್​ ಮೀಡಿಯಾಗಳಲ್ಲಿ ಹಾಗೂ ಮಾಧ್ಯಮಗಳಿಗೆ ನೀಡಿದ ಪ್ರತಿಕ್ರಿಯೆಗಳಲ್ಲಿ ಹೇಳಿಕೊಂಡಿದ್ದಾರೆ.

'ಪ್ರಧಾನಿಯೊಂದಿಗಿನ ಮಾತುಕತೆಯೇ ಅದ್ಭುತವಾಗಿತ್ತು. ನಮ್ಮ ದಕ್ಷಿಣ ಭಾರತದ ಸಿನಿಮಾಗಳು ನಮ್ಮ ಭಾರತದ ಸಂಸ್ಕೃತಿಯನ್ನು, ನಮ್ಮ ದೇಶದ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುತ್ತಿರುವ ರೀತಿಯ ಕುರಿತು ಅವರು ಎಷ್ಟು ಹೆಮ್ಮೆ ಪಡುತ್ತಿದ್ದಾರೆ ಎಂಬುದರ ಕುರಿತು ವಿವರಿಸಿದರು' ಎಂದರು. ಶ್ರದ್ಧಾ ಅವರ ಸೋಷಿಯಲ್​ ಮೀಡಿಯಾ ಪೋಸ್ಟ್​ಗಳಿಗೆ ಸಾಕಷ್ಟು ಕಮೆಂಟ್​ಗಳು ಹರಿದು ಬಂದಿದ್ದು, ಹಲವು ಶ್ರದ್ಧಾ ಅವರಿಗೆ ಪ್ರಧಾನಿಯನ್ನು ಭೇಟಿ ಮಾಡಲು ಸಿಕ್ಕ ಅವಕಾಶಕ್ಕಾಗಿ ಅಭಿನಂದಿಸಿದ್ದಾರೆ.

ಆರ್​ಜೆ ಶ್ರದ್ಧಾ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಅದಕ್ಕಿಂತಲೂ ಹೆಚ್ಚಾಗಿ ಶ್ರದ್ಧಾ ತಮ್ಮಾ ಸೋಶಿಯಲ್​ ಮೀಡಿಯಾ ಕಾಮಿಡಿ ರೀಲ್ಸ್​, ವಿಡಿಯೋಗಳಿಂದಾನೆ ಫೇಮಸ್​ ಆಗಿದ್ದಾರೆ. ಫೇಸ್​ಬುಕ್​, ಇನ್​ಸ್ಟಾಗ್ರಾಂನಲ್ಲಿ ತುಳು, ಕನ್ನಡ, ಹಿಂದಿ, ಮರಾಠಿ, ಇಂಗ್ಲಿಷ್​ ಸೇರಿದಂತೆ ಐದು ಭಾಷೆಗಳಲ್ಲಿ ವಿಭಿನ್ನವಾದ ವಿಡಿಯೋಗಳನ್ನು ಅಪ್​ಲೋಡ್​ ಮಾಡುತ್ತಿರುತ್ತಾರೆ. ಐಟಿ ಉದ್ಯೋಗಿಯಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದ ಶ್ರದ್ಧಾ ಅವರು 2008ರಲ್ಲಿ ಐಟಿ ಕೆಲಸಕ್ಕೆ ಗುಡ್​ ಬೈ ಹೇಳಿ ರೇಡಿಯೋ ಜಾಕಿಯಾಗಿ ಕೆಲಸ ಪ್ರಾರಂಭಿಸಿದರು. ಸುಮಾರು 9 ವರ್ಷಗಳ ಕಾಲ ರೇಡಿಯೋ ಜಾಕಿಯಾಗಿಯೇ ಕೆಲಸ ಮಾಡಿದ್ದ ಶ್ರದ್ಧಾ ಅಕುಲ್​ ಬಾಲಾಜಿ ಜೊತೆ ಸೇರಿ ಡ್ಯಾನ್ಸಿಂಗ್​ ಸ್ಟಾರ್​ ಕನ್ನಡ ರಿಯಾಲಿಟಿ ಶೋ ಕಾರ್ಯಕ್ರಮವನ್ನು ಹೋಸ್ಟ್​ ಮಾಡಿದ್ದಾರೆ. 2017ರಲ್ಲಿ 'ಪುಷ್ಪವಲ್ಲಿ' ಎಂಬ ಅಮೇಜಾನ್​ ಪ್ರೈಮ್​ ವೆಬ್​ ಸಿರೀಸ್​ ಮೂಲಕ ಶ್ರದ್ಧಾ ಜೈನ್​ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು.

ಆದರೆ, ಶ್ರದ್ಧಾ ಅವರು ಬಿಗ್​ ಸ್ಕ್ರೀನ್​ಗಳಲ್ಲಿ ಮಿಂಚಿದ್ದಕ್ಕಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮಗಳ ಸ್ಕೀನ್​ಗಳಲ್ಲಿ ಮಿಂಚಿದ್ದೇ ಹೆಚ್ಚು. ಕರಾವಳಿ ಕರ್ನಾಟಕದ ಶೈಲಿಯ ಮಾತುಗಾರಿಕೆಯಲ್ಲಿ, ಅಲ್ಲಿನ ಜೀವನಶೈಲಿಯನ್ನು ಬಿಂಬಿಸುವಂತಹ ವಿಡಿಯೋಗಳಲ್ಲಿ ಅಭಿನಯಿಸುವ ಶ್ರದ್ಧಾ ಅವರಿಗೆ, ಅವರ ಟಾಕಿಂಗ್​ ಸ್ಟೈಲ್​ಗೆ ಅವರದ್ದೇ ಆದ ಫ್ಯಾನ್​ ಫಾಲೋವರ್ಸ್​ ಇದ್ದಾರೆ. ಪ್ರಧಾನಿ ಆಡಿದ 'ಅಯ್ಯೋ' ಪದ ಬಹಳಷ್ಟು ಪೇಮಸ್​, ಶ್ರದ್ಧಾ ಅವರು ಮಾಡುವ ಬಹುತೇಕ ವಿಡಿಯೋಗಳಲ್ಲಿ 'ಅಯ್ಯೋ' ಪದಗಳಿರುತ್ತವೆ​. ಇದೀಗ ಆ ಪದವನ್ನು ಹೇಳಿ ಪ್ರಧಾನಿ ಮೋದಿ ವಿಷ್​ ಮಾಡಿರುವುದು ಆ ಪದ ಇನ್ನಷ್ಟು ಹೆಸರುವಾಸಿಯಾಗಿದೆ.

ಇದನ್ನೂ ಓದಿ:ಮೋದಿ ಔತಣಕೂಟದಲ್ಲಿ ಸ್ಯಾಂಡಲ್​ವುಡ್​ ಸೆಲೆಬ್ರಿಟಿಗಳು​: ಯಶ್, ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್‌ಕುಮಾರ್ ಭಾಗಿ

ABOUT THE AUTHOR

...view details