ನಿರ್ದೇಶನದ ಜೊತೆ ಹೀರೋ ಆಗಿ ಸಿಲ್ವರ್ ಸ್ಕ್ರೀನ್ ಮೇಲೆ ಕಮಾಲ್ ಮಾಡುತ್ತಿರುವ ನಟ ಹಾಗೂ ನಿರ್ದೇಶಕ ರಿಷಬ್ ಶೆಟ್ಟಿ ಗರುಡ ಗಮನ ವೃಷಭ ವಾಹನ ಸಿನಿಮಾ ಯಶಸ್ಸಿನ ಬಳಿಕ ಗಾಂಧಿನಗರದ ನಿರ್ದೇಶಕರ ಕಷ್ಟ- ಸುಖಗಳ ಬಗ್ಗೆ ಹೇಳೋದಿಕ್ಕೆ ಬರ್ತಾ ಇದ್ದಾರೆ.
ಸದ್ಯ ರಿಷಬ್ ಶೆಟ್ಟಿ ಮತ್ತೆ ನಾಯಕರಾಗಿ ನಟಿಸಿರುವ ಚಿತ್ರ 'ಹರಿಕಥೆ ಅಲ್ಲ ಗಿರಿಕಥೆ' ಸದ್ಯ ಶೀರ್ಷಿಕೆಯಿಂದಲೇ ಸ್ಯಾಂಡಲ್ವುಡ್ನಲ್ಲಿ ಸದ್ದು ಮಾಡುತ್ತಿದೆ. 'ಹರಿಕಥೆ ಅಲ್ಲ ಗಿರಿಕಥೆ' ಚಿತ್ರದ ಟ್ರೇಲರ್ ಬಿಡುಗಡೆ ಆಗಿ, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೀಕ್ಷಣೆಯಾಗುತ್ತಿದ್ದು, ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ.
ಸದ್ಯ ಅನಾವರಣಗೊಂಡಿರುವ ಚಿತ್ರದ ಟ್ರೈಲರ್ ಹೇಳಿರುವಂತೆ ಸಿನಿಮಾ ನಿರ್ದೇಶಕನಾಗುವ ಆಸೆ ಹೊತ್ತ ಮಧ್ಯಮವರ್ಗದ ಯವಕನೊಬ್ಬನ ಸುತ್ತ ನಡೆಯುವ ಕಥೆ ಇದಾಗಿದೆ. ಈ ಚಿತ್ರದಲ್ಲಿ ಗಿರಿಕೃಷ್ಣ ಎಂಬ ಹೆಸರಿನ ಪಾತ್ರ ಮಾಡಿರುವ ರಿಷಬ್ ಶೆಟ್ಟಿ ಗಿರಿ ಅಂದರೆ ನನ್ನೊಬ್ಬನ ಹೆಸರಲ್ಲ, ಹೀರೋಯಿನ್ ಹೆಸರು ಗಿರಿಜಾ ಥಾಮಸ್ ಹಾಗೂ ವಿಲನ್ ಹೆಸರು ಗಿರಿ ಅಂತಾ. ಹೀಗೆ ನಮ್ಮ ಚಿತ್ರದಲ್ಲಿ ಹಲವು ಗಿರಿಗಳ ಸಂಗಮವಾಗಿದೆ ಎಂದಿದ್ದಾರೆ.