ಕರ್ನಾಟಕ

karnataka

ETV Bharat / entertainment

'ರಾಣಿ-ಪೂ' ಒಂದೇ ಫ್ರೇಮ್​ನಲ್ಲಿ.. ಕರೀನಾ ಜೊತೆ ನಟಿಸಲು ಅವಕಾಶ ಕೇಳಿದ ಆಲಿಯಾ ಭಟ್​ - ಕರೀನಾ ಕಪೂರ್​

ಬಾಲಿವುಡ್​ ತಾರೆಯರಾದ ಆಲಿಯಾ ಮತ್ತು ಕರೀನಾ ಕಪೂರ್​ ಒಟ್ಟಿಗೆ ಫೋಟೋ ತೆಗೆದಿದ್ದು, ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

ಆಲಿಯಾ ಭಟ್​ ಕರೀನಾ ಕಪೂರ್
ಆಲಿಯಾ ಭಟ್​ ಕರೀನಾ ಕಪೂರ್

By

Published : Aug 19, 2023, 2:08 PM IST

ಮುಂಬೈ:ಬಾಲಿವುಡ್​ನ ಅಪ್ಸರೆಯರಾದ ಆಲಿಯಾ ಭಟ್​ ಹಾಗೂ ಕರೀನಾ ಕಪೂರ್ ಖಾನ್ ಒಟ್ಟಿಗೆ ಒಂದೇ ಫೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ತೆಗೆದುಕೊಂಡಿರುವ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಇವರಿಬ್ಬರ ಜೊತೆಗಿನ ಫೋಟೋ ಬಿ-ಟೌನ್​ನಲ್ಲಿ ಸದ್ದು ಮಾಡುತ್ತಿದೆ. ಲಕ್ಷಕ್ಕಿಂತಲೂ ಅಧಿಕ ಲೈಕ್ಸ್​ ಹಾಗೂ ಸಾವಿರಾರು ಕಮೆಂಟ್​ಗಳ ಸುರಿಮಳೆಯೇ ಆಗುತ್ತಿದೆ.

ಫೋಟೋದಲ್ಲಿ ಆಲಿಯಾ ಲೈಟ್​ ಪಿಂಕ್​ ಬಣ್ಣದ ಹೂವಿನ ಕಸೂತಿ ಮಾಡಿರುವ ಕ್ರಾಪ್​ ಟಾಪ್​ ತೊಟ್ಟು, ಅದಕ್ಕೆ ಸರಿಹೊಂದುವ ತಿಳಿ ಪಿಂಕ್​ ಬಣ್ಣದ ಮೇಕಪ್​ನಲ್ಲಿ ಕಂಗೊಳಿಸಿದ್ದಾರೆ. ಇನ್ನು ಎಲ್ಲಾ ಜನರೇಶನ್​ಗೂ ಸೆಟ್ಟಾಗುವ ಅಭಿಮಾನಿಗಳ ನೆಚ್ಚಿನ ಪೂ ಎಂದೇ ಕರೆಸಿಕೊಳ್ಳುವ ಕರೀನಾ ಕಪೂರ್ ಬೀಜ್​ ಬಣ್ಣದ, ಚಿಕ್ಕ ಕನ್ನಡಿಗಳಿಂದ ವಿನ್ಯಾಸಗೊಳಿಸಿರುವ ಸಾಂಪ್ರದಾಯಿಕ ಉಡುಗೆಯನ್ನು ತೊಟ್ಟಿದ್ದು, ತಾನಿನ್ನು 20 ರ ಹರೆಯದ ಯುವತಿಯಂತೆ ಶೈನ್​ ಆಗಿದ್ದಾರೆ.

ಒಟ್ಟು 3 ಫೋಟೋವನ್ನು ಹಂಚಿಕೊಂಡಿದ್ದಾರೆ. ಮೊದಲನೇ ಪೋಸ್ಟ್​ನಲ್ಲಿ ಇಬ್ಬರು ಸ್ಟೈಲ್​ ಐಕಾನ್​ನಂತೆ ಫೋಸ್ ನೀಡಿದರೆ, 2ನೇ ಪಿಕ್​ನಲ್ಲಿ ಇಬ್ಬರು ಕನ್ನಡಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹಾಗೆ ಕೊನೆ ಫೋಟೋದಲ್ಲಿ ಜೊತೆಗೆ ನಿಂತು ಆಲಿಯಾ ಕ್ಯೂಟ್​ ಸ್ಮೈಲ್​ ನೀಡಿದರೇ, ಕರೀನಾ ಮುದ್ದಾಗಿ ಕ್ಯಾಮರಾಗೆ ಪೋಸ್​ ಕೊಟ್ಟಿದ್ದಾರೆ. ಒಟ್ಟಾರೆ ಇವರಿಬ್ಬರು ಯಾವುದೋ ಚಿತ್ರೀಕರಣಕ್ಕೆ ತಯಾರಾದಂತೆ ಕಾಣಿಸಿದೆ. ​

ಒಟ್ಟಿಗೆ ನಟಿಸಲು ಅವಕಾಶ ಕೇಳಿದ ಆಲಿಯಾ: ಪೋಸ್ಟ್​ ಹಂಚಿಕೊಂಡಿರುವ ಆಲಿಯಾ ನಮ್ಮಿಬ್ಬರನ್ನು ಒಟ್ಟಿಗೆ ಒಂದೇ ಸಿನಿಮಾದಲ್ಲಿ ನಟಿಸಲು ಅವಕಾಶ ಮಾಡಿಕೊಡಿ. ನಾವಿಬ್ಬರು ಒಂದೇ ಸೆಟ್​ನಲ್ಲಿ ಕಾಲ ಕಳೆಯಬಹುದು ಎಂದಿದ್ದಾರೆ. ಅಲ್ಲದೆ, ತಮ್ಮಿಬ್ಬರ ಜೋಡಿಗಿಂತ ಉತ್ತಮವಾದ್ದು ಬೇರೆಯೇನಾದರೂ ಇದೆಯಾ ಎಂದು ಕಣ್ಣು ಹೊಡೆಯುವ ಇಮೋಜಿ ಹಾಕಿಕೊಂಡಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಕರಣ್​ ಜೋಹರ್​, ಈ ಜೋಡಿಯೊಂದಿಗಿನ ಒಂದು ಫಿಲ್ಮ್​ ಬೇಕು ಎಂದು ಕಮೆಂಟ್​ ಮಾಡಿದ್ದಾರೆ. ಹಾಗೆ ಅಭಿಮಾನಿಯೊಬ್ಬರು, ಬೆಬೋ ಮತ್ತು ರಾಣಿ ಇಬ್ಬರು ಒಂದೇ ಪರದೆ ಮೇಲೆ ಬಂದರೆ ಬೆಂಕಿ ಎಂದು ಬಯಕೆ ವ್ಯಕ್ತಪಡಿಸಿದ್ದಾರೆ.

ಇನ್ನು ತಿಳಿದಿರುವಂತೆ ಆಲಿಯಾ ಇತ್ತೀಚೆಗೆ ಬಿಡುಗಡೆಯಾಗಿ ಧೂಳ್​​ ಎಬ್ಬಿಸಿದ್ದ ಕರಣ್ ಜೋಹರ್ ಅವರ 'ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ' ನಲ್ಲಿ ರಣವೀರ್ ಸಿಂಗ್ ಅವರಿಗೆ ನಾಯಕಿಯಾಗಿ ಅಭಿನಯಿಸಿದ್ದರು. ಇದರ ಜೊತೆ ಆಲಿಯಾ ಮೊದಲನೇ ಬಾರಿಗೆ ಆಕ್ಷನ್ ಥ್ರಿಲ್ಲರ್ ಚಿತ್ರ 'ಹಾರ್ಟ್ ಆಫ್ ಸ್ಟೋನ್' ಮೂಲಕ ಹಾಲಿವುಡ್‌ಗೆ ಪದಾರ್ಪಣೆ ಮಾಡಿದ್ದಾರೆ. ಹಾಗೆ ಮುಂದಿನ ಪ್ರಾಜೆಕ್ಟ್​ ನೋಡುವುದಾದರೆ, ನಿರ್ದೇಶಕ ಫರ್ಹಾನ್ ಅಖ್ತರ್ ಅವರ ಮುಂಬರುವ ಚಿತ್ರ 'ಜೀ ಲೇ ಜರಾ'ದಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ಕತ್ರಿನಾ ಕೈಫ್ ಅವರೊಂದಿಗೆ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಇನ್ನು ಕರೀನಾ ಕಪೂರ್​, ನಿರ್ದೇಶಕ ಸುಜೋಯ್ ಘೋಷ್ ಅವರ ಥ್ರಿಲ್ಲರ್‌ ಚಿತ್ರಕತೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ, ಇದು 'ದಿ ಡಿವೋಷನ್ ಆಫ್ ಸಸ್ಪೆಕ್ಟ್ ಎಕ್ಸ್' ಪುಸ್ತಕವನ್ನು ಆಧರಿಸಿದೆ. ಇದರಲ್ಲಿ ವಿಜಯ್ ವರ್ಮಾ ಮತ್ತು ಜೈದೀಪ್ ಅಹ್ಲಾವತ್ ಕೂಡ ನಟಿಸಿದ್ದಾರೆ.

ಇದನ್ನೂ ಓದಿ;'ಬೇಬಿ' ಸಿನಿಮಾ ಇನ್ನೂ ನೋಡಿಲ್ವಾ? ಹಾಗಿದ್ರೆ OTTನಲ್ಲಿ ವೀಕ್ಷಿಸಿ, ಎಲ್ಲಿ? ಯಾವಾಗ?

ABOUT THE AUTHOR

...view details