ಸ್ಯಾಂಡಲ್ವುಡ್ ನಟ, ಕಿಚ್ಚ ಸುದೀಪ್ ಸಿನಿಮಾ ಪ್ರಪಂಚಕ್ಕೆ ಮಾತ್ರ ಸೀಮಿತರಾದವರಲ್ಲ. ಅದರ ಹೊರತು ಕ್ರಿಕೆಟ್ ಲೋಕಕ್ಕೂ ತುಂಬಾ ಹತ್ತಿರವಾದವರು. ಕ್ರಿಕೆಟ್ನ ದೊಡ್ಡ ಅಭಿಮಾನಿಯಾಗಿರುವ ಸುದೀಪ್, ಆಗಾಗ ಕ್ರಿಕೆಟ್ ಪಟುಗಳನ್ನು ಭೇಟಿ ಮಾಡುವುದು ಅಥವಾ ಕ್ರಿಕೆಟ್ ಪಟುಗಳೇ ಅವರನ್ನು ಭೇಟಿ ಮಾಡುವ ಸನ್ನಿವೇಶಗಳು ನಡೆಯುತ್ತಲೇ ಇರುತ್ತವೆ. ಇಂತಹದ್ದೊಂದು ಪ್ರೀತಿಯ ಸನ್ನಿವೇಶಕ್ಕೆ ಅವರು ಮತ್ತೆ ಸಾಕ್ಷಿಯಾಗಿದ್ದಾರೆ. ಈ ಮೂಲಕ ತಾನೂ ಕೂಡ ಓರ್ವ ಅಪ್ಪಟ ಕ್ರಿಕೆಟ್ ಪಟು ಎಂದು ಸುದೀಪ್ ತೋರಿಸಿಕೊಟ್ಟಿದ್ದಾರೆ.
ಕಿಚ್ಚನನ್ನು ಭೇಟಿ ಮಾಡಿದ ಕ್ರಿಕೆಟ್ ತಾರೆ ಹೌದು, ಕ್ರಿಕೆಟ್ಗೂ ನಟ ಸುದೀಪ್ಗೂ ಅವಿನಾಭಾವ ಸಂಬಂಧವಿದೆ ಅನ್ನೋದರಲ್ಲಿ ಎರಡು ಮಾತಿಲ್ಲ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಪಟುಗಳ ಜೊತೆ ಅವರು ಉತ್ತಮ ಸ್ನೇಹ ಸಂಬಂಧ ಹೊಂದಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಸ್ನೇಹ ಸಂಬಂಧ ಸುದೀಪ್ ಮತ್ತು ಕ್ರಿಕೆಟ್ ಪಟುಗಳ ನಡುವಿನ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದು ಸುಳ್ಳಲ್ಲ. ಇದೇ ಕಾರಣದಿಂದ ಸುದೀಪ್ ಅವರನ್ನು ರಾಜಸ್ಥಾನ್ ರಾಯಲ್ಸ್ ತಂಡದ ಕೆಲ ಆಟಗಾರರು ಭೇಟಿಯಾಗಿ ಸ್ನೇಹ ಸಮ್ಮಿಲನಕ್ಕೆ ಸಾಕ್ಷಿಯಾಗಿದ್ದಾರೆ.
ಕಿಚ್ಚನನ್ನು ಭೇಟಿ ಮಾಡಿದ ಕ್ರಿಕೆಟ್ ತಾರೆ ರಾಜಸ್ಥಾನ್ ರಾಯಲ್ಸ್ ತಂಡದ ಸಂದೀಪ್ ಶರ್ಮಾ, ಕೆಸಿ ಕರಿಯಪ್ಪ, ಡೆಲ್ಲಿ ಕ್ಯಾಪಿಟಲ್ಸ್ನ ಪೃಥ್ವಿ ಶಾ, ಚಿತ್ರ ನಿರ್ದೇಶಕ ಕೃಷ್ಣ ಸೇರಿ ಮೊದಲಾದವರು ಸುದೀಪ್ ಅವರನ್ನು ಭೇಟಿ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿವೆ. ರಾಜಸ್ಥಾನ್ ರಾಯಲ್ಸ್ ತಂಡ ತನ್ನ ಟ್ವಿಟರ್ ಖಾತೆಯಲ್ಲಿ ಸುದೀಪ್ ಅವರನ್ನು ಭೇಟಿ ಮಾಡಿದ ಫೋಟೋವನ್ನು ಹಂಚಿಕೊಂಡಿದೆ. ಈ ಫೋಟೋ ನೋಡಿದ ಅಭಿಮಾನಿಗಳು ಹಾಗೂ ನೆಟಿಜನ್ಗಳು ಲೈಕ್ಸ್ ಮತ್ತು ಕಾಮೆಂಟ್ ಮಾಡುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ.
ಮತ್ತೊಂದು ಫೋಟೋದಲ್ಲಿ ಪೃಥ್ವಿ ಶಾ ಅವರನ್ನು ಸುದೀಪ್ ತಬ್ಬಿಕೊಂಡಿದ್ದು, ಈ ಖುಷಿ ಕ್ಷಣವನ್ನು ಶಾ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಬೆಂಗಳೂರಿನಲ್ಲಿರುವ ಸುದೀಪ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿರುವ ಫೋಟೋಗಳು ಇವಾಗಿವೆ. ಯಾವ ಉದ್ದೇಶಕ್ಕಾಗಿ ಭೇಟಿಯಾಗಿದ್ದು ಎಂಬುದರ ಬಗ್ಗೆ ತಿಳಿದು ಬಂದಿಲ್ಲ. ಆದರೆ, ಇದೊಂದು ಸೌಹಾರ್ದ ಭೇಟಿ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಹಲವು ಕ್ರಿಕೆಟಿಗರು ಸುದೀಪ್ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದು ಇತ್ತೀಚೆಗೆ ಭಾರತ ತಂಡದ ಯುವ ಆಟಗಾರ ಸಂಜು ಸ್ಯಾಮ್ಸನ್ ಕೂಡ ಬೆಂಗಳೂರಿನಲ್ಲಿ ಸುದೀಪ್ ಅವರನ್ನು ಅವರ ನಿವಾಸದಲ್ಲಿ ಭೇಟಿ ಮಾಡಿದ್ದರು. ಭೇಟಿಯ ಕ್ಷಣವನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಇನ್ನು ಇವರಷ್ಟೇ ಅಲ್ಲದೇ ಅನೇಕ ಕ್ರಿಕೆಟ್ ಪಟುಗಳು ಸುದೀಪ್ ಅವರನ್ನು ಭೇಟಿ ಮಾಡಿದ್ದುಂಟು.
ಇತ್ತೀಚೆಗೆ ಸ್ಯಾಂಡಲ್‌ವುಡ್‌ನ ತಾರೆಯರು, ತಂತ್ರಜ್ಞರು, ಚಲನಚಿತ್ರ ನಿರ್ಮಾಪಕರು ಮುಂತಾದವರನ್ನು ಒಳಗೊಂಡ ಸೆಲೆಬ್ರಿಟಿ ಕ್ರಿಕೆಟ್ ಲೀಗ್ ಪಂದ್ಯಾವಳಿ ನಡೆಸಲಾಯಿತು. ಎರಡು ದಿನಗಳ ಈವೆಂಟ್ನಲ್ಲಿ ಸಿನಿಮಾ ಕ್ಷೇತ್ರದ ಆರು ತಂಡಗಳು ಭಾಗವಹಿಸಿದ್ದವು. ಸೆಲೆಬ್ರಿಟಿ ಕ್ರಿಕೆಟ್ ಲೀಗ್‌ನಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವನ್ನು ಮುನ್ನಡೆಸಿದ್ದ ಸುದೀಪ್, ವಿಕೆಟ್ ಕೀಪರ್ ಆಗಿ ಕಣಕ್ಕಿಳಿದಿದ್ದರು. ಕ್ರಿಕೆಟ್ ಮೈದಾನದಲ್ಲಿ ಪಟ ಪಟನೆ ಓಡಾಡುವ ಮತ್ತು ಸ್ನೇಹಿತರೊಂದಿಗೆ ಎಂಜಾಯ್ ಮಾಡುವ ಸುದೀಪ್ ಅವರನ್ನು ಕಂಡು ಅಭಿಮಾನಿಗಳು ಖುಷಿಯಾಗಿದ್ದರು.
ಇದನ್ನೂ ಓದಿ:ಕಿಚ್ಚ- ಕುಮಾರ್ ವಾರ್: ಕೊನೆಗೂ ಮೌನ ಮುರಿದ ನಟ ರವಿಚಂದ್ರನ್ ಹೇಳಿದ್ದಿಷ್ಟು..!