ಕರ್ನಾಟಕ

karnataka

ETV Bharat / entertainment

ನಟಿ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ: ಎಲ್ಲೆಡೆ ಹರಡಿದ ಸುಳ್ಳು ಸುದ್ದಿ

Pooja Hegde: ದುಬೈ ಕ್ಲಬ್​​ ಉದ್ಘಾಟನಾ ಸಮಾರಂಭದಲ್ಲಿ ನಡೆದ ಮಾತಿನ ಚಕಮಕಿಯಲ್ಲಿ ನಟಿಗೆ ಕೊಲೆ ಬೆದರಿಕೆ ಬಂದಿದೆ ಎಂಬ ಸುದ್ದಿ ಹರಡಿದೆ.

By ETV Bharat Karnataka Team

Published : Dec 13, 2023, 5:02 PM IST

Poojas team has refuted the reports of actor receiving death threats
Poojas team has refuted the reports of actor receiving death threats

ಹೈದರಾಬಾದ್​:ಕನ್ನಡತಿ, ಸ್ಟಾರ್​ ನಟಿಯಾಗಿರುವ ಪೂಜಾ ಹೆಗ್ಡೆಗೆ ಕೊಲೆ ಬೆದರಿಕೆ ಹಾಕಲಾಗಿದೆ ಎಂಬ ಸುದ್ದಿ ಎಲ್ಲೆಡೆ ಹರಡಿದ್ದು, ಅಭಿಮಾನಿಗಳಲ್ಲಿ ಆತಂಕ ಮೂಡಿಸಿದೆ. ದುಬೈನ ಕಾರ್ಯಕ್ರಮದಲ್ಲಿ ನಡೆದ ಮಾತಿನ ಚಕಮಕಿಯಲ್ಲಿ ಈ ರೀತಿಯ ಹತ್ಯೆ ಬೆದರಿಕೆ ಬಂದಿದೆ ಎಂಬ ಸುದ್ದಿ ಬುಧವಾರ ಹರಿದಾಡಿದೆ.

ದುಬೈ ಕ್ಲಬ್​​ ಉದ್ಘಾಟನಾ ಸಮಾರಂಭದಲ್ಲಿ ನಡೆದ ಮಾತಿನ ಚಕಮಕಿ ವೇಳೆ ನಟಿಗೆ ಕೊಲೆ ಬೆದರಿಕೆ ಬಂದಿದೆ ಎಂದು ಬಾಲಿವುಡ್​ನ ಪ್ರಮುಖ ಪ್ಯಾಪಾರಾಜಿಗಳಲ್ಲಿ ಒಬ್ಬರಾಗಿರುವ ವೈರಲ್​​ ಬಯಾನಿ ತಮ್ಮ ಇನ್​ಸ್ಟಾ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆದರೆ, ಇದೀಗ ನಟಿ ಕಾರ್ಯಕ್ರಮ ಮುಗಿಸಿಕೊಂಡು ದುಬೈನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದಾರೆ. ಈ ಸುದ್ದಿ ಕೇಳಿದ ಅಭಿಮಾನಿಗಳು, ಕಳವಳ ವ್ಯಕ್ತಪಡಿಸಿದ್ದು, ನಟಿ ಸುರಕ್ಷಿತವಾಗಿರಲಿ ಎಂದು ಹಾರೈಸಿದ್ದಾರೆ.

ನಟಿಗೆ ಕೊಲೆ ಬೆದರಿಕೆ ಇದೆ ಎಂಬ ಸುದ್ದಿ ವೈರಲ್​ ಆಗುತ್ತಿದ್ದಂತೆ ಈ ಕುರಿತು ವೆಬ್ಲಾಯ್ಡ್ ಸತ್ಯಾಸತ್ಯತೆ ಪರಿಶೀಲನೆಗೆ ನಟಿಯ ತಂಡವನ್ನು ಸಂಪರ್ಕಿಸಿದ್ದಾರೆ. 'ಇದು ತಪ್ಪು ಮಾಹಿತಿಯಾಗಿದ್ದು, ಈ ವಿಚಾರದ ಬಗ್ಗೆ ತಮಗೆ ತಿಳಿದಿಲ್ಲ. ಯಾರು ಈ ಸುದ್ದಿ ಹರಡಿದರು ಎಂದು ತಿಳಿದಿಲ್ಲ. ಇದು ಸಂಪೂರ್ಣವಾಗಿ ಆಧಾರ ರಹಿತವಾಗಿದೆ. ನಟಿಗೆ ಈ ರೀತಿಯ ಯಾವುದೇ ಬೆದರಿಕೆ ಇಲ್ಲ' ಎಂದಿದ್ದಾರೆ.

ಬಾಲಿವುಡ್​​ ಅಂಗಳದಲ್ಲಿ ಇದೀಗ ನಟಿಯ ಕೊಲೆ ಬೆದರಿಕೆ ಸುದ್ದಿ ಕಾಳ್ಗಿಚ್ಚಿನಂತೆ ಹರಡಿದೆಯಾದರೂ, ಈ ಸಂಬಂಧ ನಟಿ ಯಾವುದೇ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿಲ್ಲ. ಈ ನಡುವೆ ವೈರಲ್​ ಬಯಾನಿ ಕೂಡ ತಮ್ಮ ಸಾಮಾಜಿಕ ಜಾಲತಾಣದಿಂದ ಈ ಮುಂಚೆ ಪೋಸ್ಟ್​ ಮಾಡಿದ್ದ ಸುದ್ದಿಯನ್ನು ತೆಗೆದು ಹಾಕಿದ್ದಾರೆ. ಬುಧವಾರ ಮುಂಬೈನಿಂದ ನಿರ್ಗಮಿಸುವ ವೇಳೆ ಮಹಿಳೆ. ಮೊಮೊ ಜೀನ್ಸ್​ ಜೊತೆಗೆ ಕ್ರಾಪ್​ ಟಾಪ್​ ಧರಿಸಿ ಗಮನ ಸಳೆದರು.

ಬಾಲಿವುಡ್​ನಲ್ಲಿ ನಟ ಸಲ್ಮಾನ್​ ಖಾನ್​ ಜೊತೆಗೆ ಕಿಸಿ ಕಾ ಬಾಯ್​ ಕಿಸಿ ಕಿ ಜಾನ್​ ಚಿತ್ರದಲ್ಲಿ ನಟಿ ಪೂಜಾ ಗಾಂಧಿ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಮುಂದಿನ ಚಿತ್ರವಾದ ದೇವಾದಲ್ಲಿ ನಟ ಶಹೀದ್​ ಜಪೂರ್​ ಜೊತೆಗೆ ಅವರು ನಟಿಸುತ್ತಿದ್ದು, ಈ ಚಿತ್ರಕ್ಕೆ ರೋಶನ್​ ಆ್ಯಂಡ್ರ್ಯೂ ನಿರ್ದೇಶನವಿದೆ, ಸಿದ್ಧಾರ್ಥ್​ ರಾಯ್​ ಕಪೂರ್​ ಮತ್ತು ಜೀ ಸ್ಟುಡಿಯೋ ಇದರ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಇದರ ಹೊರತಾಗಿ ನಟ ಅಕ್ಷಯ್​​ ಕುಮಾರ್​​ ಜೊತೆಗೆ ಹೌಸ್​ಫುಲ್​ 5ನಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: 'ಅನಿಮಲ್​'ನಲ್ಲಿದ್ದ ರಣ್​​​ಬೀರ್ ಕಪೂರ್ - ಬಾಬಿ ಡಿಯೋಲ್​ ಕಿಸ್ಸಿಂಗ್​ ಸೀನ್​ ಕಟ್​

ABOUT THE AUTHOR

...view details