ಬಾಲಿವುಡ್ ದೇಸಿ ಗರ್ಲ್ ಪ್ರಿಯಾಂಕಾ ಚೋಪ್ರಾ ನಟಿಸಿರುವ ಆಕ್ಷನ್ ಸ್ಪೈ ಥ್ರಿಲ್ಲರ್ ಸರಣಿ 'ಸಿಟಾಡೆಲ್' ಟ್ರೇಲರ್ ಸೋಮವಾರ ಬಿಡುಗಡೆಯಾಗಿದೆ. ಪ್ರಿಯಾಂಕಾ ಹೊಸ ಲುಕ್ ಸಿನಿಪ್ರಿಯರ ಮೆಚ್ಚುಗೆ ಪಡೆದಿದೆ. ಟ್ರೇಲರ್ ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಗಳಿಸಿದೆ. ಫ್ಯಾನ್ಸ್ ಪ್ರಿಯಾಂಕಾ ನಟನೆ ನೋಡಿ 'ಬಾಲಿವುಡ್ ರಿಯಲ್ ಕ್ವೀನ್' ಎಂದು ಕರೆಯುತ್ತಿದ್ದಾರೆ.
ಅಂತೆಯೇ ಪ್ರಿಯಾಂಕಾ ಅವರ ಪತಿ ಅಮೆರಿಕನ್ ಗಾಯಕ ಮತ್ತು ನಟ ನಿಕ್ ಜೋನಾಸ್ ಅವರು ಪತ್ನಿ ನಟಿಸಿರುವ ಸಿಟಾಡೆಲ್ ಸರಣಿಯ ಟ್ರೇಲರ್ ನೋಡಿ ಉತ್ಸಾಹವನ್ನು ಕಮೆಂಟ್ ಮೂಲಕ ವ್ಯಕ್ತಪಡಿಸುತ್ತಿದ್ದಾರೆ. ಪ್ರಿಯಾಂಕಾ ಅವರು ತಮ್ಮ ಟ್ರೇಲರ್ ವಿಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಜಾಗತಿಕ ತಾರೆ ವಿಡಿಯೋವನ್ನು ಕೈಬಿಟ್ಟ ಕೂಡಲೇ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳು ಕಮೆಂಟ್ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಪೋಸ್ಟ್ಗೆ ಪ್ರತಿಕ್ರಿಯಿಸಿರುವ ನಿಕ್ ಜೋನಾಸ್ ಫೈರ್ ಎಮೋಜಿಯೊಂದಿಗೆ ಪ್ರಿಯಾಂಕಾ ಚೋಪ್ರಾ ನಟನೆಗೆ ಕಮೆಂಟ್ ಮಾಡಿದ್ದಾರೆ. ಜೊತೆಗೆ ಹುಮಾ ಖುರೇಷಿ ಹೃದಯದ ಎಮೋಜಿನೊಂದಿಗೆ 'ವಾವ್' ಎಂದು ಬರೆದಿದ್ದಾರೆ.
ಇದನ್ನೂ ಓದಿ:ಮೈ ಬೇಬಿ ಗರ್ಲ್ ಜಾಕಿ.. ಜೈಲಿನಿಂದಲೇ ಪತ್ರ ಬರೆದು ಜಾಕ್ವೆಲಿನ್ಗೆ ಹೋಳಿ ಶುಭಾಶಯ ಹೇಳಿದ ಸುಕೇಶ್
ಸಿನಿಪ್ರಿಯರ ಮೆಚ್ಚುಗೆ ಗಳಿಸಿದ ಟ್ರೇಲರ್: ಗ್ಲೋಬಾಲ್ ಐಕಾನ್ ಪ್ರಿಯಾಂಕಾ ಚೋಪ್ರಾ ನಟನೆಯ ಬಹು ನಿರೀಕ್ಷಿತ ಸರಣಿ 'ಸಿಟಾಡೆಲ್' ಫಸ್ಟ್ ಲುಕ್ನಿಂದಲೇ ಕ್ರೇಜ್ ಹೆಚ್ಚಿಸಿಕೊಂಡಿತ್ತು. ಇದೀಗ ಟ್ರೇಲರ್ ರಿಲೀಸ್ ಆದ ಮೇಲಂತೂ ಮತ್ತಷ್ಟು ಸಿನಿ ಪ್ರಿಯರು ಮೆಚ್ಚಿಕೊಂಡಿದ್ದಾರೆ. ಸಿಟಾಡೆಲ್ ಟ್ರೇಲರ್ನಲ್ಲಿ ಬಾಲಿವುಡ್ ತಾರೆ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಸಿಟಾಡೆಲ್ ಸೀರಿಸ್ ರುಸ್ಸೋ ಬ್ರದರ್ಸ್‌ನ ಎಜಿಬಿಒ ಬ್ಯಾನರ್‌ನಿಂದ ರೆಡಿಯಾಗಿದೆ. ಏಪ್ರಿಲ್ 28ರಂದು ಪ್ರೈಮ್ ವಿಡಿಯೋದಲ್ಲಿ ಎರಡು ಸಂಚಿಕೆಗಳೊಂದಿಗೆ ಪ್ರಥಮ ಪ್ರದರ್ಶನಗೊಳ್ಳಲಿದೆ. ಉಳಿದ ಸಂಚಿಕೆಗಳು ಪ್ರತಿ ಶುಕ್ರವಾರದಂದು ಮೇ. 26 ರವರೆಗೆ ವಾರಕ್ಕೊಮ್ಮೆ ಪ್ರಸಾರವಾಗಲಿದೆ.
ಸಿಟಾಡೆಲ್‌ನ ಹಿಂದಿ ಆವೃತ್ತಿಯಲ್ಲಿ ಸಮಂತಾ: ಇನ್ನು, ಪ್ರಿಯಾಂಕಾ ಚೋಪ್ರಾ ಅವರ ವಿದೇಶಿ ಸೀರಿಸ್ ಸಿಟಾಡೆಲ್‌ನ ಹಿಂದಿ ಆವೃತ್ತಿಯಲ್ಲಿ ನಟಿ ಸಮಂತಾ ರುತ್ ಪ್ರಭು ಅಭಿನಯಿಸುತ್ತಿದ್ದಾರೆ. ಆದ್ರೆ ಈ ಸೀರಿಸ್ಗೆ ಟೈಟಲ್ ಫೈನಲ್ ಆಗಿಲ್ಲ. ನಟಿ ಸಮಂತಾ ಜೊತೆಗೆ ಬಾಲಿವುಡ್ ನಟ ವರುಣ್ ಧವನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ . ಸಮಂತಾ ಈ ಸರಣಿಯ ಶೂಟಿಂಗ್ಗೆ ಬೇಕಾದ ತಯಾರಿಯನ್ನು ಬಹಳ ಹಿಂದೆಯೇ ಪ್ರಾರಂಭಿಸಿದ್ದಾರೆ.
ಸಿಟಾಡೆಲ್ ಸರಣಿಯಲ್ಲಿ ನಟಿ ಸಮಂತಾ ಪತ್ತೇದಾರಿ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಅವರ ಈ ಪಾತ್ರವು ಸಾಕಷ್ಟು ಕಠಿಣ ಆ್ಯಕ್ಷನ್ ಸೀಕ್ವೆನ್ಸ್‌ಗಳನ್ನು ಹೊಂದಿದೆ. ಈ ಆ್ಯಕ್ಷನ್ ಸೀರಿಸ್ ಶೂಟಿಂಗ್ ಸಮಯದಲ್ಲಿ ಸಮಂತಾ ಗಾಯಗೊಂಡಿದ್ದರು. ಆ ಗಾಯಗಳ ಚಿತ್ರಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.ಸಾಹಸ ನಿರ್ದೇಶಕ ಯಾಂಚಿಕ್ ಬೆನ್ ಅವರ ಮಾರ್ಗದರ್ಶನದಲ್ಲಿ ಸಮಂತಾ ಈ ಸಾಹಸಗಳನ್ನು ಮಾಡಿದ್ದಾರೆ.
ಇದನ್ನೂ ಓದಿ:'ನೋವಿನಿಂದ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ': ಅಮಿತಾಭ್ ಬಚ್ಚನ್