ಕರ್ನಾಟಕ

karnataka

ETV Bharat / entertainment

ಭಾರಿ ಮಳೆಯಲ್ಲೇ ನಿರ್ಗತಿಕರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದ ನಯನತಾರಾ, ವಿಘ್ನೇಶ್ ಶಿವನ್.. - ನಿರ್ಗತಿಕರಿಗೆ ಅಗತ್ಯ ವಸ್ತುಗಳ ವಿತರಣೆ

ನಯನತಾರಾ ಮತ್ತು ವಿಘ್ನೇಶ್ ಶಿವನ್ ಶುಕ್ರವಾರ ರಾತ್ರಿ ರಸ್ತೆಯಲ್ಲಿರುವ ಜನರಿಗೆ ಅಗತ್ಯ ವಸ್ತುಗಳನ್ನು ನೀಡಲು ಮಳೆಯಲ್ಲೇ ಹೆಜ್ಜೆ ಹಾಕಿದರು. ದಂಪತಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅವರ ಔದಾರ್ಯಕ್ಕೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.

Nayanthara Vignesh distribute essentials to needy
ನಯನತಾರಾ ಮತ್ತು ವಿಘ್ನೇಶ್ ಶಿವನ್

By

Published : Apr 8, 2023, 10:59 PM IST

ಹೈದರಾಬಾದ್:ನಟಿ ನಯನತಾರಾ ಮತ್ತು ಅವರ ಪತಿ, ಚಲನಚಿತ್ರ ನಿರ್ಮಾಪಕ ವಿಘ್ನೇಶ್ ಶಿವನ್ ಶುಕ್ರವಾರ ರಾತ್ರಿ ಭಾರೀ ಮಳೆಯಲ್ಲಿ ಕಷ್ಟದಲ್ಲಿರುವವರಿಗೆ ಅಗತ್ಯ ವಸ್ತುಗಳನ್ನು ವಿತರಿಸಿದರು. ಈ ಜೋಡಿ ರಸ್ತೆಯಲ್ಲಿರುವ ಜನರಿಗೆ ಬ್ಯಾಗ್ ಹಂಚುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಸದ್ಯ ಭಾರಿ ವೈರಲ್ ಆಗುತ್ತಿದೆ. ನಯನತಾರಾ ಮತ್ತು ವಿಘ್ನೇಶ್ ಬೀದಿ ಬದಿಯ ಕೆಲವು ಅಂಗಡಿಗಳ ಬಳಿ ಆಶ್ರಯ ಪಡೆದ ಕೆಲವು ಜನರ ಕಡೆಗೆ ಹೋಗುತ್ತಿರುವುದನ್ನು ದೃಶ್ಯಗಳು ಸೆರೆಯಾಗಿವೆ. ಅವರ ಔದಾರ್ಯಕ್ಕೆ ಇಬ್ಬರ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ:41ನೇ ವಸಂತಕ್ಕೆ ಕಾಲಿಟ್ಟ 'ಸ್ಟೈಲಿಶ್​ ಪುಷ್ಪರಾಜ್​'; ನಟ ಅಲ್ಲು ಅರ್ಜುನ್​ ಹುಟ್ಟುಹಬ್ಬಕ್ಕೆ ಶುಭಾಶಯಗಳ ಮಹಾಪೂರ

ನಯನತಾರಾ- ವಿಘ್ನೇಶ್ ಶಿವನ್ ಸ್ಫೂರ್ತಿದಾಯಕ ದಂಪತಿ- ಟ್ವೀಟ್​:ವಿಡಿಯೋದಲ್ಲಿ ವಿಘ್ನೇಶ್ ಒಂದು ಕೈಯಲ್ಲಿ ಬ್ಯಾಗ್‌ಗಳನ್ನು ಮತ್ತು ಇನ್ನೊಂದು ಕೈಯಲ್ಲಿ ನೀಲಿ ಛತ್ರಿ ಹಿಡಿದಿರುವುದನ್ನು ಕಾಣಬಹುದು. ಆದರೆ ನಯನತಾರಾ ಜನರಿಗೆ ಬ್ಯಾಗ್‌ಗಳನ್ನು ಹಸ್ತಾಂತರಿಸಿದರು. ಅವರು ಟಿ-ಶರ್ಟ್ ಮತ್ತು ಒಂದು ಜೊತೆ ನೀಲಿ ರಿಪ್ಡ್ ಜೀನ್ಸ್ ಧರಿಸಿದ್ದರು. ವಿಘ್ನೇಶ್ ಅವರು ಬೀಜ್ ಪ್ಯಾಂಟ್ ಮತ್ತು ಕೆನೆ ಬಣ್ಣದ ಶರ್ಟ್ ಅನ್ನು ಧರಿಸಿದ್ದರು.

ಟ್ವಿಟ್ಟರ್ ಬಳಕೆದಾರರು ಈ ವಿಡಿಯೋವನ್ನು ಶೀರ್ಷಿಕೆಯೊಂದಿಗೆ ಹಂಚಿಕೊಂಡಿದ್ದಾರೆ. "ಮಳೆಯಿಂದ ಬಳಲುತ್ತಿರುವ ಬೀದಿಗಳಲ್ಲಿ ನಿರಾಶ್ರಿತರಿಗೆ ಸಹಾಯ ಮಾಡಲು ಇದು ನಿಜವಾಗಿಯೂ ಲೇಡಿ ಸೂಪರ್‌ಸ್ಟಾರ್ ನಯನತಾರಾ ಮತ್ತು ವಿಘ್ನೇಶ್ ಶಿವನ್ ಸ್ಫೂರ್ತಿದಾಯಕ ದಂಪತಿ." ಎಂದು ಬರೆಯಲಾಗಿದೆ.

ಇದನ್ನು ಓದಿ:'ಶಾಂತಿ ಮತ್ತು ನೆಮ್ಮದಿ ಅನುಭವಿಸಿದೆ': ಕಾಮಾಖ್ಯ ದೇವಿಯ ದರ್ಶನ ಪಡೆದ ಪ್ರೀತಿ ಜಿಂಟಾ

ತಮಿಳು ಹಾರರ್ ಚಿತ್ರ ಕನೆಕ್ಟ್‌: ಏತನ್ಮಧ್ಯೆ, ನಯನತಾರಾ ಇತ್ತೀಚೆಗೆ ತಮಿಳು ಹಾರರ್ ಚಿತ್ರ ಕನೆಕ್ಟ್‌ನಲ್ಲಿ ಕಾಣಿಸಿಕೊಂಡರು. ಕಳೆದ ವಾರ ಈ ಸಿನಿಮಾ ಹಿಂದಿಗೆ ಡಬ್ ಆಗಿ ರಿಲೀಸ್ ಆಗಿತ್ತು. ಅಶ್ವಿನ್ ಸರವಣನ್ ನಿರ್ದೇಶನದ ಚಿತ್ರದಲ್ಲಿ, ನಯನತಾರಾ ತಾಯಿಯ ಪಾತ್ರವನ್ನು ನಿರ್ವಹಿಸಿದ್ದು, ತನ್ನ ಮಗಳನ್ನು ನೋಡಿಕೊಳ್ಳಬೇಕು. ಚಿತ್ರದಲ್ಲಿ ವಿನಯ್ ರೈ, ಸತ್ಯರಾಜ್ ಮತ್ತು ಅನುಪಮ್ ಖೇರ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನು ಓದಿ:ನೂರು ಕೋಟಿ ವೆಚ್ಚದಲ್ಲಿ ವೆಬ್ ಸೀರಿಸ್ ನಿರ್ಮಾಣ ಮಾಡುವ ಯೋಜನೆಯಲ್ಲಿ ನಿರ್ದೇಶಕ ಕೆ.ಎಸ್ ರಾಮ್ ಜಿ

ಮದುವೆ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಇದೇ ಮೊದಲು:ಕಳೆದ ವರ್ಷ ಡಿಸೆಂಬರ್‌ನಲ್ಲಿ, ಚೆನ್ನೈನಲ್ಲಿ ನಡೆದ ಕನೆಕ್ಟ್‌ನ ವಿಶೇಷ ಪ್ರಥಮ ಪ್ರದರ್ಶನಕ್ಕಾಗಿ ನಯನತಾರಾ ಮತ್ತು ವಿಘ್ನೇಶ್ ಮದುವೆ ನಂತರ, ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಇದೇ ಮೊದಲು. ಕಳೆದ ವರ್ಷ ಜೂನ್‌ನಲ್ಲಿ ಚೆನ್ನೈನಲ್ಲಿ ನಡೆದ ಆತ್ಮೀಯ ಸಮಾರಂಭದಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತ್ತು. ಅವರ ಕುಟುಂಬಗಳು ಮತ್ತು ಚಿತ್ರರಂಗದ ಆಯ್ದ ಆತ್ಮೀಯ ಗೆಳೆಯರ ಬಳಗ ಮದುವೆಯಲ್ಲಿ ಪಾಲ್ಗೊಂಡಿದ್ದರು.

ಇದನ್ನು ಓದಿ:'ಮಾನಾಡು' ಸಿನಿಮಾದ ಮೂಲಕ ಬಾಲಿವುಡ್​ಗೆ ಎಂಟ್ರಿ ಕೊಡಲಿದ್ದಾರಾ ಮಾಸ್​ ಮಹಾರಾಜ?

ABOUT THE AUTHOR

...view details