ಕರ್ನಾಟಕ

karnataka

ETV Bharat / entertainment

ಕಟೌಟ್​ ಸುಂದರಿ ಉರ್ಫಿ ಜಾವೇದ್ ಗುಣಗಾನ ಮಾಡಿದ ಬಾಲಿವುಡ್​ ಬೇಬೋ - Uorfi Javed photos

ಸೋಶಿಯಲ್​ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಡ್ರೆಸ್ಸಿಂಗ್​ ಸ್ಟೈಲ್ ಬಗ್ಗೆ ನಟಿ ಕರೀನಾ ಕಪೂರ್ ಖಾನ್ ಮಾತನಾಡಿದ್ದಾರೆ.

kareena kapoor compliments to Uorfi Javed
ಉರ್ಫಿ ಜಾವೇದ್ ಗುಣಗಾನ ಮಾಡಿದ ಬಾಲಿವುಡ್​ ಬೇಬೋ

By

Published : Mar 29, 2023, 5:47 PM IST

ವಿಭಿನ್ನ, ವಿಚಿತ್ರ ಡ್ರೆಸ್ ಹಾಗೂ ಹೇಳಿಕೆಗಳಿಂದ ಸಾಮಾಜಿಕ ಜಾಲತಾಣದಲ್ಲಿ ಸದಾ ಸದ್ದು ಮಾಡುವ ಉರ್ಫಿ ಜಾವೇದ್ ಅವರಿಗೆ ಇಂದು ಬಹಳ ಸಂತಸದ ದಿನ. ಇವರ ಉಡುಗೆ ಶೈಲಿಗೆ ಸಹಜವಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ಪ್ರತೀ ಫೋಟೋ ಕೂಡ ಟ್ರೋಲಿಗರನ್ನು ಆಹ್ವಾನಿಸುತ್ತದೆ. ವಿಚಿತ್ರ ಉಡುಗೆ ಶೈಲಿಗೆ ಹೆಸರಾಗಿರುವ ಇವರನ್ನು ಬಾಲಿವುಡ್​ ಬೇಬೋ ಹಾಡಿ ಹೊಗಳಿದ್ದು, ಈ ಬಗ್ಗೆ ಉರ್ಫಿ ಸಂತಸ ವ್ಯಕ್ತಪಡಿಸಿದ್ದಾರೆ.

ಉರ್ಫಿ ಜಾವೇದ್ ಟ್ವೀಟ್:''ಏನು, ಈಗಷ್ಟೇ ಕರೀನಾ ನನ್ನನ್ನು ಇಷ್ಟಪಡುತ್ತೇನೆಂದು ತಿಳಿಸಿದರು, ನಾನು ಸತ್ತಂತೆ ಅನುಭವ ಆಗುತ್ತಿದೆ, ಬೈ, ನನ್ನಿಂದ ಇದನ್ನು ತಡೆಯಲು ಸಾಧ್ಯವಿಲ್ಲ. ವಾವ್​​, ನಿಜವಾಗಿಯೂ ಇದು ನಡೆಯುತ್ತಿದೆಯಾ?'' ಎಂದು ಸೋಶಿಯಲ್ ಮೀಡಿಯಾ ಸ್ಟಾರ್ ಉರ್ಫಿ ಜಾವೇದ್ ಟ್ವೀಟ್ ಮಾಡಿದ್ದಾರೆ.

ನಟಿ ಕರೀನಾ ಕಪೂರ್ ಹೇಳಿದ್ದೇನು?: ನಟಿ ಕರೀನಾ ಕಪೂರ್ ಖಾನ್ ಸ್ವತಃ ಬಾಲಿವುಡ್‌ನಲ್ಲಿ ತಮ್ಮ ಫ್ಯಾಷನ್ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಸಮಾರಂಭವೊಂದಲ್ಲಿ ಕರೀನಾ ಕಪೂರ್ ಖಾನ್ ಅವರಲ್ಲಿ ಉರ್ಫಿ ಜಾವೇದ್ ಅವರ ಫ್ಯಾಷನ್ ಸೆನ್ಸ್ ಬಗ್ಗೆ ಕೇಳಿದಾಗ, ಉರ್ಫಿ ಜಾವೇದ್ ಬಗ್ಗೆ ಗುಣಗಾನ ಮಾಡಿದರು. 'ಉರ್ಫಿ ಜಾವೇದ್ ಅವರು ಬಯಸಿದ್ದನ್ನು ಧರಿಸಲು ಇಷ್ಟಪಡುತ್ತಾರೆ, ನಾವು ನಮ್ಮ ಫಿಗರ್‌ನೊಂದಿಗೆ ಕಂಫರ್ಟೆಬಲ್​ ಆಗಿದ್ದಾಗ ನಾವು ಇಷ್ಟ ಪಟ್ಟ ದಿರಿಸು ಧರಿಸಲು ಇಚ್ಛಿಸುತ್ತೇವೆ, ಅಷ್ಟೇ ಅಲ್ಲ ಉರ್ಫಿ ಅವರಿಗೆ ಆ ವಿಶ್ವಾಸವಿದೆ, ಆ ಧೈರ್ಯವಿದೆ, ಅವರ ಧೈರ್ಯಕ್ಕೆ ನನ್ನ ಸೆಲ್ಯೂಟ್ ಎಂದು ಹೊಗಳಿದ್ದಾರೆ.

ಟ್ವೀಟ್ ಮೂಲಕ ಸಂತಸ ವ್ಯಕ್ತಪಡಿಸಿದ ಉರ್ಫಿ : ಬಾಲಿವುಡ್‌ನ ಖ್ಯಾತ ನಟಿಯೋರ್ವರು ಸಾಮಾನ್ಯ, ಬೆಳೆಯುತ್ತಿರುವ ತಾರೆಯರನ್ನು ಈ ಮಟ್ಟಿಗೆ ಹೊಗಳಿದರೆ ಅದು ಅವರಿಗೆ ದೊಡ್ಡ ವಿಷಯ ಅಲ್ಲವೇ?. ಹಾಗಾಗಿ ಟ್ವೀಟ್ ಮೂಲಕ ಉರ್ಫಿ ಜಾವೇದ್ ತಮ್ಮ ಸಂತಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಶ್ವೇತ ವರ್ಣದ ಉಡುಗೆಯಲ್ಲಿ ಸ್ಯಾಂಡಲ್​ವುಡ್​ ಗೊಂಬೆ.. ಅಭಿಮಾನಿಗಳ ಮನ ಸೆಳೆದ ಚೆಲುವೆಯ ಫೋಟೋ

ಬಾಲಿವುಡ್‌ನಲ್ಲಿ ಅವಕಾಶ ಸಿಗುತ್ತಾ?ಉರ್ಫಿ ಜಾವೇದ್ ತಮ್ಮ ವಿಚಿತ್ರ ವೇಷಭೂಷಣದಲ್ಲಿ ಪಾಪರಾಜಿಗಳ ಮುಂದೆ ಎಷ್ಟು ದಿನ ಬರುತ್ತಾರೆ ಎಂಬುದನ್ನು ಕಾದು ನೋಡಬೇಕು. ಅವರಿಗೆ ಬಾಲಿವುಡ್‌ನಲ್ಲಿ ದೊಡ್ಡ ಅವಕಾಶ ಸಿಗುತ್ತದೆಯೇ ಎಂದು ಅವರ ಅಭಿಮಾನಿಗಳು ಮತ್ತು ಸ್ವತಃ ಉರ್ಫಿ ಜಾವೇದ್ ಕಾಯುತ್ತಿದ್ದಾರೆ.

ಇದನ್ನೂ ಓದಿ:ಜನ್ಮದಿನಕ್ಕೆ ಒಂದು ವಾರವಿರುವಾಗಲೇ ರಶ್ಮಿಕಾ ಮಂದಣ್ಣಗೆ ಸರ್​ಪ್ರೈಸ್ ಕೊಟ್ಟ ಫ್ಯಾನ್ಸ್!

ರಣ್​ಬೀರ್ ಕಪೂರ್ ಹೀಗಂದ್ರು..ಈ ಹಿಂದೆ ಕರೀನಾ ಕಪೂರ್ ಸಂಬಂಧಿ, ನಟ ರಣ್​ಬೀರ್ ಕಪೂರ್ ಅವರು ಉರ್ಫಿ ಜಾವೇದ್ ಅವರ ಫ್ಯಾಷನ್ ಸೆನ್ಸ್ ನಿಷ್ಪ್ರಯೋಜಕ ಎಂದು ಜರಿದಿದ್ದರು. ಈ ರೀತಿಯ ಫ್ಯಾಷನ್ ನನಗೆ ಸ್ವಲ್ಪವೂ ಇಷ್ಟವಿಲ್ಲ ಎಂದು ಹೇಳಿದ್ದ ಅವರು ಉರ್ಫಿ ಅವರ ಆಯ್ಕೆಯನ್ನು ಬ್ಯಾಡ್​ ಟೇಸ್ಟ್ ಎಂದು ಕರೆದಿದ್ದರು. ಆದ್ರೀಗ ಸಂಬಂಧಿ, ನಟಿ ಕರೀನಾ ಕಪೂರ್ ಖಾನ್ ಅವರು ಉರ್ಫಿ ಜಾವೇದ್ ಉಡುಗೆ ಶೈಲಿ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.​​

ABOUT THE AUTHOR

...view details