ಕರ್ನಾಟಕ

karnataka

ETV Bharat / entertainment

ಏಪ್ರಿಲ್ 7ಕ್ಕೆ ವೀರಂ ಚಲನಚಿತ್ರ ರಾಜ್ಯಾದ್ಯಂತ ಬಿಡುಗಡೆ: ನಟ ಪ್ರಜ್ವಲ್​ ದೇವರಾಜ್​

ಪ್ರಜ್ವಲ್ ದೇವರಾಜ್ ಅಭಿನಯದ ವೀರಂ ಚಲನಚಿತ್ರ ಏಪ್ರಿಲ್ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

By

Published : Mar 30, 2023, 5:38 PM IST

veeram
ವೀರಂ ಚಲನಚಿತ್ರ

ಪ್ರಜ್ವಲ್ ದೇವರಾಜ್ ಅಭಿನಯದ ವೀರಂ ಚಲನಚಿತ್ರ ಏಪ್ರಿಲ್ 7 ರಂದು ರಾಜ್ಯಾದ್ಯಂತ ಬಿಡುಗಡೆ

ಮೈಸೂರು :ಡಾ.ವಿಷ್ಣುವರ್ಧನ್ ಅಭಿಮಾನಿ ಪಾತ್ರದ ಕಥೆಯುಳ್ಳ "ವೀರಂ" ಚಲನಚಿತ್ರ, ಏಪ್ರಿಲ್ 7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು, ಚಿತ್ರದ ನಾಯಕ ಪ್ರಜ್ವಲ್ ದೇವರಾಜ್ ಹಾಗೂ ಚಿತ್ರತಂಡ ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾಧ್ಯಮಗೋಷ್ಟಿ ನಡೆಸಿ, ಸಿನಿಮಾದ ಬಗ್ಗೆ ವಿವರಣೆ ನೀಡಿದರು. ಇಂದು ಮೈಸೂರಿನ ಪತ್ರಕರ್ತರ ಭವನದಲ್ಲಿ ಮಾತನಾಡಿದ ವೀರಂ ಚಿತ್ರದ ನಾಯಕ ಪ್ರಜ್ವಲ್​ ದೇವರಾಜ್​, ಈ ಚಿತ್ರ ಏಪ್ರಿಲ್ 7 ರಂದು ರಾಜ್ಯಾದ್ಯಂತ ತೆರೆಗೆ ಬರಲಿದೆ ಎಂದು ಹೇಳಿದರು.

ನನಗೆ ಮಾಸ್ ಚಿತ್ರದ ಗ್ಯಾಪ್ ಇತ್ತು : ವೀರಂ ಎಂದರೆ ಯಾರಿಗೂ ಹೆದರದ ವ್ಯಕ್ತಿಯಾಗಿದ್ದು, ಈ ಕಥೆಯಲ್ಲಿ ಎಮೋಷನ್ ಇದೆ. ಅಕ್ಕ -ತಮ್ಮಂದಿರ ಪ್ರೀತಿ ಕಾಳಜಿ, ಆಕಾಂಕ್ಷೆಗಳನ್ನು ತೋರುವ ಭಾವನಾತ್ಮಕ ಚಿತ್ರ ವೀರಂ, ಡಾ.ವಿಷ್ಣುವರ್ಧನ್ ಅಭಿಮಾನಿಯಾಗಿ ವೀರಂ ಏನೆಲ್ಲಾ ಮಾಡುತ್ತಾನೆ ಎಂಬುದನ್ನು ಚಿತ್ರದಲ್ಲಿ ನೋಡಬಹುದು ಎಂದರು. ಇದೇ ವೇಳೆ ನಟ ಪ್ರಜ್ವಲ್ ದೇವರಾಜ್ ಎಲ್ಲರಿಗೂ ಶ್ರೀ ರಾಮ ನವಮಿಯ ಶುಭಾಶಯ ತಿಳಿಸಿದರು. ಮುಂದುವರಿದು ಮಾತನಾಡಿ ಅವರು, ಪ್ರತಿಯೊಬ್ಬರಿಗೂ ಜೀವನದಲ್ಲಿ ಅವರದ್ದೇ ಅದ ವೈಯಕ್ತಿಕ ವಿಚಾರಗಳು ಇರುತ್ತವೆ. ಆ ಬಗ್ಗೆ ಕೇಳುವುದರಲ್ಲಿ ಸರಿ ಇರಬಹುದು ಅಥವಾ ತಪ್ಪಿರಬಹುದು ಎಂಬ ಕಥೆಯನ್ನು ಹೊಂದಿರುವ ವೀರಂ ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ. ನನಗೆ ಮಾಸ್ ಚಿತ್ರದ ಗ್ಯಾಪ್ ಇತ್ತು. ಆ ಪಾತ್ರ ವೀರಂ ಚಿತ್ರದಲ್ಲಿ ಸಿಕ್ಕಿದೆ ಎಂದು ಹೇಳಿಕೊಂಡರು.

ಇದನ್ನೂ ಓದಿ:'ನಿಮ್ಮ ಅಭಿನಯ, ವ್ಯಕ್ತಿತ್ವ ಎರಡೂ ಅದ್ಭುತ': ಅನುಪಮ್​ ಖೇರ್ ಬಗ್ಗೆ ಶಿವಣ್ಣ ಗುಣಗಾನ

ಮಾಸ್ ಅವತಾರದಲ್ಲಿ ಜನರ ಮುಂದೆ ಬರಲಿದ್ದೇನೆ. ಈ ಚಿತ್ರವನ್ನು ನಿರ್ಮಾಪಕರು ಹಾಗೂ ನಿರ್ದೇಶಕರು ಅದ್ಧೂರಿಯಾಗಿ ನಿರ್ಮಾಣ ಮಾಡಿದ್ದು, ಒಳ್ಳೆ ಕಥೆಯಿರುವ ಸಿನಿಮಾ ಇದಾಗಿದೆ. ಇದರಲ್ಲಿ ಒಳ್ಳೆಯ ಹಾಡುಗಳಿವೆ, ಸಿನೆಮಾ ಜೀವನದಲ್ಲಿ ಕಷ್ಟದ ಪರಿಸ್ಥಿತಿಯಲ್ಲಿ ಅದರಿಂದ ಹೇಗೆ ಹೊರಬರಬಹುದು ಎಂಬ ಸಾರಾಂಶ ಇದ್ದು, ನಾನು ವಿಷ್ಣು ಅಭಿಮಾನಿಯಾಗಿ ಈ ಸಿನಿಮಾದಲ್ಲಿ ಮಾಡಿದ್ದೇನೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಅಲ್ಲ, ಇದೊಂದು ಜನರ ಸಿನಿಮಾ. ಕಥೆ ನಮ್ಮ ಸೊಗಡಿನಿಂದ ಮೂಡಿ ಬಂದಿದ್ದು, ಪ್ರತಿಯೊಬ್ಬರಿಗೂ ಈ ಸಿನಿಮಾ ತಲುಪಲಿ ಎಂದು ವೀರಂ ಚಿತ್ರ ಮಾಡಿದ್ದೇನೆ ಎಂದು ನಟ ಪ್ರಜ್ವಲ್ ದೇವರಾಜ್ ಹೇಳಿದರು. ಈ ವೇಳೆ ಚಿತ್ರದ ನಿರ್ದೇಶಕ ಖದರ್ ಕುಮಾರ್, ನಿರ್ಮಾಪಕ ಶಶಿಧರ್, ಶ್ರೀನಗರ ಕಿಟ್ಟಿ ಸೇರಿದಂತೆ ಹಲವರು ಹಾಜರಿದ್ದರು.

ಪಕ್ಕಾ ಮಾಸ್​ ಚಿತ್ರ "ವೀರಂ":ವಿಶೇಷ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕೂಡ ಮಿಂಚಿದ್ದು ಮೂವಿ ಪಕ್ಕಾ ಮಾಸ್​ ಆಗಿದ್ದು, ಪ್ರಿನ್ಸ್ ಪ್ರಜ್ವಲ್​ ದೇವರಾಜ್​ ಅಭಿಮಾನಿಗಳಲ್ಲಿ ಕುತೂಹಲ ಹುಟ್ಟಿಸಿದೆ. ಈ ಚಿತ್ರದಲ್ಲಿ ಶಿಷ್ಯ ದೀಪಕ್​ ನೆಗೆಟಿವ್​ ರೋಲ್​ನಲ್ಲಿ ಅಭಿನಯಿಸಿದ್ದಾರೆ. ಇನ್ನು ವಿಶೇಷವಾಗಿ ನಟಿ ಶೃತಿ ಮೊದಲ ಬಾರಿಗೆ ಪ್ರಜ್ವಲ್​ ದೇವರಾಜ್​ಗೆ ಅಕ್ಕನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಪ್ರಜ್ವಲ್​ಗೆ ಡಿಂಪಲ್​ ಕ್ವೀನ್​ ರಚಿತಾ ರಾಮ್​ ನಾಯಕಿ ನಟಿಯಾಗಿ ಅಭಿನಯಿಸಿದ್ದಾರೆ.

ಇದನ್ನೂ ಓದಿ:'ರಾಮನ'ವಮಿಯಂದು 'ಅವತಾರ' ಎತ್ತಿದ ರಿಷಿ..

For All Latest Updates

ABOUT THE AUTHOR

...view details