ಕರ್ನಾಟಕ

karnataka

ETV Bharat / entertainment

ಟ್ವಿಟರ್​ ಬ್ಲ್ಯೂಟಿಕ್​ಗೆ ಶುಲ್ಕ: ಎಲೋನ್​ ಮಸ್ಕ್​ ನಿರ್ಧಾರಕ್ಕೆ ನಟಿ ಕಂಗನಾ ಬೆಂಬಲ - ಟ್ವಿಟರ್​ ಬ್ಲ್ಯೂಟಿಕ್​ಗಾಗಿ ಹಣ ಪಾವತಿ

ಟ್ವಿಟರ್​ ಕಂಪನಿಯನ್ನು ತನ್ನ ವಶಕ್ಕೆ ಪಡೆದ ಬಳಿಕ ವಿಶ್ವದ ನಂ.1 ಧನಿಕ ಎಲೋನ್​ ಮಸ್ಕ್​ ಖಾತೆಯ ಬ್ಲ್ಯೂಟಿಕ್​ಗೆ ಮಾಸಿಕ 8 ಡಾಲರ್​ ಶುಲ್ಕ ವಿಧಿಸಿದ್ದಕ್ಕೆ ವಿರೋಧ ವ್ಯಕ್ತವಾಗಿದೆ. ಆದರೆ, ಇದಕ್ಕೆ ಬಾಲಿವುಡ್​ ನಟಿ ಕಂಗನಾ ರಣಾವತ್​ ಬೆಂಬಲ ನೀಡಿದ್ದಾರೆ.

twitter-blue-tick-charge
ಟ್ವಿಟ್ಟರ್​ ಬ್ಲ್ಯೂಟಿಕ್​ಗೆ ಶುಲ್ಕ

By

Published : Nov 6, 2022, 10:30 PM IST

ನವದೆಹಲಿ:ಪ್ರಚೋದನಕಾರಿ ಪೋಸ್ಟ್​ ಆರೋಪದ ಮೇರೆಗೆ ಶಾಶ್ವತವಾಗಿ ಟ್ವಿಟರ್​ನಿಂದ ಬ್ಯಾನ್​ ಆಗಿರುವ ಬಾಲಿವುಡ್​ ನಟಿ ಕಂಗನಾ ರಣಾವತ್​ ಬ್ಲ್ಯೂಟಿಕ್​ ಪಡೆಯಲು 8 ಡಾಲರ್​ ಶುಲ್ಕ ನೀಡಬೇಕು ಎಂಬ ಎಲೋನ್​ ಮಸ್ಕ್​ ನಿರ್ಧಾರಕ್ಕೆ ಬೆಂಬಲ ನೀಡಿದ್ದಾರೆ. ಇದು ಉತ್ತಮ ನಿರ್ಣಯ. ಅಧಿಕೃತ ಟ್ವಿಟರ್​ಗಾಗಿ ಆಧಾರ್​ ಕಾರ್ಡ್​ ಪರಿಶೀಲನೆ ಮಾಡಬೇಕು ಎಂದು ಹೇಳಿದ್ದಾರೆ.

ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟಿ, ಟ್ವಿಟರ್​ ಬ್ಲ್ಯೂಟಿಕ್​ಗಾಗಿ ಹಣ ಪಾವತಿಸಬೇಕಾದ ನಿರ್ಧಾರಕ್ಕೆ ನನ್ನ ಬೆಂಬಲವಿದೆ. ಇದರಿಂದ ಅನಧಿಕೃತ ಖಾತೆಗಳು ರದ್ದಾಗಲಿವೆ. ಇವುಗಳಿಂದ ವಿನಾಕಾರಣ ತೊಂದರೆ ಅನುಭವಿಸಬೇಕಾಗಿದೆ. ಎಲ್ಲ ಅಧಿಕೃತ ಖಾತೆಗಳು ಬ್ಲ್ಯೂಟಿಕ್​ ಪಡೆಯಬೇಕು. ಇದಕ್ಕೆ ಆಧಾರ್​ ಕಾರ್ಡ್​ ಪರಿಶೀಲನೆಯೂ ನಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ನಟಿ ಕಂಗನಾ ಪೋಸ್ಟ್​

ಟ್ವಿಟರ್ ಅತ್ಯುತ್ತಮ ಸಾಮಾಜಿಕ ಮಾಧ್ಯಮ ವೇದಿಕೆಯಾಗಿದೆ. ಇದು ಬೌದ್ಧಿಕ ಮತ್ತು ಸೈದ್ಧಾಂತಿಕವಾಗಿ ನೆರವಾಗಲಿದೆ. ಇದರಲ್ಲಿ ಹಲವರು ಅನಧಿಕೃತ ಖಾತೆ ಹೊಂದಿದ್ದಾರೆ. ಯಾರನ್ನಾದರೂ ಹುಡುಕಬೇಕಾದರೆ, ಹಲವು ಖಾತೆಗಳು ತೆರೆದುಕೊಳ್ಳುತ್ತವೆ. ಹಣ ನೀಡಿ ಬ್ಲ್ಯೂಟಿಕ್​ ಪಡೆಯಬೇಕು ಎಂದು ತಮ್ಮ ತಂದೆಯ ಖಾತೆ ಉದಾಹರಣೆ ನೀಡಿದ್ದಾರೆ.

ನಟಿ ಕಂಗನಾ ಪೋಸ್ಟ್​

ಕಂಗನಾ ರಣಾವತ್​ ಅವರ ಟ್ವಿಟರ್​ ಖಾತೆಯನ್ನು ಕಂಪನಿ ಶಾಶ್ವತವಾಗಿ ರದ್ದು ಮಾಡಿದೆ. ಇವರ ವಿರುದ್ಧ ಪ್ರಚೋದನಾತ್ಮಕ ಪೋಸ್ಟ್​ ಮಾಡಿದ ಆರೋಪಗಳಿವೆ. ಟ್ವಿಟರ್​ ಬ್ಲ್ಯೂಟಿಕ್​ಗೆ ವಿಧಿಸಿದ ಶುಲ್ಕಕ್ಕೆ ಬೆಂಬಲ ನೀಡಿದ್ದ ನಟಿಯ ಖಾತೆಯನ್ನು ಮರು ಪಡೆಯುವಂತೆ ಅಭಿಮಾನಿಗಳು ಕೋರಿದ್ದಾರೆ.

ಓದಿ:ಶ್ರೀಕಾಕುಳಂ ಐಐಐಟಿಯಲ್ಲಿ 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ: ಪೋಷಕರಿಗೆ ಮಾಹಿತಿ ನೀಡದ ಅಧಿಕಾರಿಗಳು

ABOUT THE AUTHOR

...view details