ಕರ್ನಾಟಕ

karnataka

ETV Bharat / entertainment

ಯುವ ನಟ ರೋಹಿತ್ ಸಿನಿಮಾಗೆ ವಸಿಷ್ಠ ಸಿಂಹ ಸಾಥ್ - film news

ರಾಯಚೂರು ಜಿಲ್ಲೆ ಪುಟ್ಟ ಹಳ್ಳಿಯ ಯುವನಟ ರೋಹಿತ್ ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್​​ವುಡ್​​ಗೆ ಪದಾರ್ಪಣೆ ಮಾಡುತ್ತಿದ್ದಾರೆ.

hosaprathibe-rohita-cinemage-vasishta-simha-saatu
ಯುವ ನಟನ ರೋಹಿತ್ ಸಿನಿಮಾಗೆ ವಸಿಷ್ಠ ಸಿಂಹ ಸಾಥ್

By

Published : May 23, 2023, 4:10 PM IST

ಮಾಡಲಿಂಗ್ ಲೋಕದಿಂದ ಸಿನಿಮಾಲೋಕಕ್ಕೆ ಎಂಟ್ರಿ ಕೊಟ್ಟ ಅದೆಷ್ಟು ಪ್ರತಿಭೆಗಳು ಸ್ಯಾಂಡಲ್​ವುಡ್ ನಲ್ಲಿ ನೆಲೆ ಕಂಡುಕೊಂಡಿವೆ. ಆ ಸಾಲಿಗೆ ಸೇರಲು ಯುವ ನಟ ರೋಹಿತ್ ಕಾತರರಾಗಿದ್ದಾರೆ. ಮೂಲತಃ ಉತ್ತರ ಕರ್ನಾಟಕದ ರಾಯಚೂರು ಜಿಲ್ಲೆ ಪುಟ್ಟ ಹಳ್ಳಿಯ ರೋಹಿತ್ ಆರು ವರ್ಷಗಳ ಕಾಲ ಮಾಡಲಿಂಗ್ ಸಾಮ್ರಾಜ್ಯದಲ್ಲಿ ಮಿಂಚಿದವರು. ಎರಡು ವರ್ಷಗಳ ರಂಗಭೂಮಿ ಅನುಭವ ಪಡೆದಿರುವ ಅವರೀಗ ರಕ್ತಾಕ್ಷ ಸಿನಿಮಾ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗದ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.

ನಟ ರೋಹಿತ್​

ಒಂದಷ್ಟು ಪ್ರತಿಷ್ಠಿತ ಬ್ರ್ಯಾಂಡ್ ಪ್ರತಿನಿಧಿಸಿರುವ ರೋಹಿತ್ 'ಎಬಿ ಪಾಸಿಟಿವ್' ಎಂಬ ಸಿನಿಮಾದಲ್ಲಿ ಖಳನಾಯಕನಾಗಿ ಅಭಿನಯಿಸಿದ ಅನುಭವಿದೆ. ನಾಯಕನಾಗಿ ಬೆಳ್ಳಿಪರದೆಯಲ್ಲಿ ರಾರಾಜಿಸಬೇಕು ಎಂಬ ಹೊಸ ಉತ್ಸಾಹ ಹಾಗೂ ಹುಮ್ಮಸ್ಸಿನೊಂದಿಗೆ ತಮ್ಮದೇ ಸಾಯಿ ಪ್ರೊಡಕ್ಷನ್ ಹೌಸ್ ನಡಿ ರಕ್ತಾಕ್ಷ ಚಿತ್ರ ನಿರ್ಮಾಣ ಮಾಡಿ ಹಾಗೂ ಅಭಿನಯಿಸಿದ್ದಾರೆ. ವಾಸುದೇವ ಎಸ್ ಎನ್ ಎಂಬುವವರು ಈ ಚಿತ್ರ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಚೊಚ್ಚಲ ನಿರ್ದೇಶನದ ಸಿನಿಮಾವಾಗಿದೆ.

ಸಿನಿಮಾ ಟೈಟಲ್ ಟ್ರ್ಯಾಕ್​ಗೆ ಚಿಟ್ಟೆ ಧ್ವನಿ

ಒಂದಷ್ಟು ಸಿನಿಮೋತ್ಸಾಹಿ ಪ್ರತಿಭೆಗಳು ಸೇರಿ ತಯಾರಿಸುತ್ತಿರುವ ರಕ್ತಾಕ್ಷ ಸಿನಿಮಾಗೆ ವಸಿಷ್ಠ ಸಿಂಹ ಸಾಥ್ ಕೊಟ್ಟಿದ್ದಾರೆ. ರೋಹಿತ್ ಹೀರೋ ಆಗಿ ನಟಿಸುತ್ತಿರುವ ಈ ಚಿತ್ರದ ಟೈಟಲ್ ಟ್ರ್ಯಾಕ್​ಗೆ ಚಿಟ್ಟೆ ಧ್ವನಿಯಾಗಿದ್ದಾರೆ. ಸುಜಿತ್ ವೆಂಕಟ್ ವೆಂಕಟರಾಮಯ್ಯ ಸಾಹಿತ್ಯ, ಧೀರೇಂದರ್ ದಾಸ್ ಸಂಗೀತ ಈ ಹಾಡಿಗಿದ್ದು, ಶೀಘ್ರದಲ್ಲಿ ರಕ್ತಾಕ್ಷ ಟೈಟಲ್ ಟ್ರ್ಯಾಕ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ.

ಚಿಕ್ಕಂದಿನಿಂದಲೇ ಬಣ್ಣದ ಲೋಕದಲ್ಲಿ ಮಿಂಚಬೇಕೆಂಬ ಕನಸುಕಟ್ಟಿಕೊಂಡಿರುವ ಪ್ರತಿಭಾವಂತ ರೋಹಿತ್, ತನ್ನಜೊತೆ ಹಳ್ಳಿ ಪ್ರತಿಭೆಗಳಿಗೂ ಈ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದಾರೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗವನ್ನು ಮುಂದಿನ ದಿನಗಳಲ್ಲಿ ಚಿತ್ರತಂಡ ರಿವೀಲ್ ಮಾಡಲು ಪ್ಲಾನ್ ಹಾಕಿಕೊಂಡಿದೆ.

ರಕ್ತಾಕ್ಷ ಚಿತ್ರದ ಪೋಸ್ಟರ್​​​

ಯುವಕರ 'ರಂಗು ರಗಳೆ': ಕನ್ನಡ ಚಿತ್ರರಂಗದಲ್ಲಿ ಸದ್ಯ ಹೊಸ ಪ್ರಯೋಗಗಳ ಪರ್ವ ಕಾಲ ಶುರುವಾಗಿದೆ. ಹೊಸಬರು ವಿಭಿನ್ನ ಪ್ರಯತ್ನದೊಂದಿಗೆ ಚಿತ್ರರಂಗಕ್ಕೆ ಅಡಿ ಇಡುತ್ತಿದ್ದಾರೆ. ಅದಕ್ಕೆ ಉದಾಹರಣೆ ಎಂಬಂತೆ ರೂಪುಗೊಂಡಿರುವ ಸಿನಿಮಾವೇ 'ರಂಗು ರಗಳೆ'. ಜಾಕ್​ ನಿರ್ದೇಶಿಸುತ್ತಿರುವ ಈ ಚಿತ್ರದ ಮುಹೂರ್ತ ಕಾರ್ಯಕ್ರಮವು ಇದೇ ತಿಂಗಳು ಬೆಂಗಳೂರಿನ ಪಂಚಮುಖಿ ಗಣಪತಿ ದೇಗುಲದಲ್ಲಿ ನೆರವೇರಿತ್ತು.

ತಮಿಳು ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿರುವ ಜಾಕ್ ಈ ಚಿತ್ರಕ್ಕೆ ಆ್ಯಕ್ಷನ್​ ಕಟ್ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ. ರೋಮ್ಯಾಂಟಿಕ್ ಕಾಮಿಡಿ ಕಥಾಹಂದರದ ಈ ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿಯ ಅಭಿಲಾಷ್ ದಳಪತಿ, ಗಟ್ಟಿಮೇಳ ಧಾರಾವಾಹಿ ಖ್ಯಾತಿಯ ಅಭಿದಾಸ್ ಹಾಗೂ ಮೆಟ್ರೋ ಸಾಗಾ ಮೂಲಕ ಮನೆ ಮಾತಾಗಿರುವ ಸುಘೋಷ್ ನಾಯಕರಾಗಿ ನಟಿಸುತ್ತಿದ್ದಾರೆ.

ಶ್ರೀ ವಿಶ್ವಂ ಸಿನಿಮಾಸ್ ಬ್ಯಾನರ್ ಅಡಿ ಶಶಿಕಲಾ ಉಮೇಶ್ 'ರಂಗು ರಗಳೆ' ಸಿನಿಮಾಗೆ ಬಂಡವಾಳ ಹೂಡಿದ್ದು, ಪೂರ್ಣಚಂದ್ರ ತೇಜಸ್ವಿ ಸಂಗೀತ, ಸಾಗರ್ ಎಂಬಿ ಸಂಕಲನ, ಶೇಖರ್ ಛಾಯಾಗ್ರಹಣವಿದೆ. ರಂಗಾಯಣ ರಘು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲಿಯೇ ಉಳಿದ ತಾರಾಬಳಗದ ಬಗ್ಗೆ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

ಇದನ್ನೂ ಓದಿ:ಬಿಡುಗಡೆಯಾಯ್ತು 'ಸ್ಥಬ್ಧ' ಚಿತ್ರದ ಟ್ರೈಲರ್​​; ಸಸ್ಪೆನ್ಸ್​​ ಜೊತೆಗೆ ಥ್ರಿಲ್ಲರ್​ ಅನುಭವ

For All Latest Updates

TAGGED:

ABOUT THE AUTHOR

...view details