ನವೆಂಬರ್ 18 ರಂದು ಬಿಡುಗಡೆಯಾದ ಹಿಂದಿಯ ದೃಶ್ಯಂ 2 ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ಭಾರಿ ಸದ್ದು ಮಾಡಿದೆ. ಬಾಲಿವುಡ್ ನಟ ಅಜಯ್ ದೇವಗನ್ ಮತ್ತು ನಟಿ ಶ್ರಿಯಾ ಸರನ್ ಅಭಿನಯದ 'ದೃಶ್ಯಂ-2' ಚಿತ್ರ ಬಿಡುಗಡೆ ಆದ ದಿನದಿಂದಲೂ ಬಾಕ್ಸ್ ಆಫೀಸ್‌ನಲ್ಲಿ ಮಿಂಚುತ್ತಲೇ ಇದೆ. ಕೇವಲ 9 ದಿನಗಳಲ್ಲಿ 126 ಕೋಟಿ ಕಲೆಕ್ಷನ್ ಮಾಡಿದೆ. ಸೌತ್ ಸಿನಿಮಾ ಇಂಡಸ್ಟ್ರಿ ಅಬ್ಬರಕ್ಕೆ ನಲುಗಿದ್ದ ಬಾಲಿವುಡ್ಗೆ ಬೂಸ್ಟರ್ ಡೋಸ್ ಸಿಕ್ಕಂತಾಗಿದೆ.
ಅಭಿಷೇಕ್ ಪಾಠಕ್ ನಿರ್ದೇಶನದ 'ದೃಶ್ಯಂ-2' ಚಿತ್ರದ ಮೇಕಿಂಗ್ ಬಜೆಟ್ ಕೇವಲ 50 ಕೋಟಿ ರೂಪಾಯಿ. 9 ದಿನಗಳಲ್ಲಿ ಸಿನಿಮಾ 126 ಕೋಟಿ ಗಳಿಕೆ ಮಾಡಿ ದಾಖಲೆ ಬರೆದಿದೆ. ಚಿತ್ರವು ಮೊದಲ ದಿನ 15.38 ಕೋಟಿ, ಎರಡನೇ ದಿನ 21.59 ಕೋಟಿ, ಮೂರನೇ ದಿನ 27.17 ಕೋಟಿ, ನಾಲ್ಕನೇ ದಿನ 11.87 ಕೋಟಿ, ಐದನೇ ದಿನ 10.48 ಕೋಟಿ, 6ನೇ ದಿನ 9.55 ಕೋಟಿ ಬಾಚಿಕೊಂಡಿತ್ತು. ಶುಕ್ರವಾರ 7.87 ಕೋಟಿ, ಶನಿವಾರ 14.05 ಕೋಟಿ ಕಲೆಕ್ಷನ್ ಮಾಡಿದ್ದು, ಈವರೆಗೆ 126 ಕೋಟಿ ರೂಪಾಯಿ ಸಂಗ್ರಹಿಸಿದೆ.
ಚಿತ್ರದ ಕಥೆ ಏನು?:ಸರಣಿ ಕೊಲೆ ರಹಸ್ಯವನ್ನು ಆಧರಿಸಿದ 'ದೃಶ್ಯಂ 2' ಚಿತ್ರ ಕೊನೆಯವರೆಗೂ ಸಸ್ಪೆನ್ಸ್ನಿಂದ ಕೂಡಿದ್ದು ಪ್ರೇಕ್ಷಕರಲ್ಲಿ ಥ್ರಿಲ್ ಹುಟ್ಟಿಸಿದೆ. ಎರಡು ಹೆಣ್ಣು ಮಕ್ಕಳ ತಂದೆಯಾಗಿರುವ ಸರಳ ಕುಟುಂಬದ ವಿಜಯ್ ಸಲಗಾಂವ್ಕರ್ ಪಾತ್ರದಲ್ಲಿ ಅಜಯ್ ದೇವಗನ್ ನಟಿಸಿದ್ದು, ದಕ್ಷಿಣದ ಸುಂದರ ನಟಿ ಶ್ರಿಯಾ ಸರಣ್ ಅಜಯ್ ಅವರ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ. ಬಾಲಿವುಡ್ ನಟಿ ಟಬು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ.