ಮುಂಬೈ (ಮಹಾರಾಷ್ಟ್ರ): ಪಂಜಾಬಿ ಗಾಯಕ ಗುರು ರಾಂಧವಾ ಅವರು ನಟಿ, ಗಾಯಕಿ ಮತ್ತು ಬಿಗ್‌ಬಾಸ್ ಸ್ಪರ್ಧಿ ಶೆಹನಾಜ್ ಗಿಲ್ ಅವರೊಂದಿಗೆ ನೃತ್ಯ ಮಾಡುತ್ತಿರುವ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ಇಬ್ಬರೂ ನೃತ್ಯ ಮಾಡುತ್ತ ಒಬ್ಬರಿಗೊಬ್ಬರನ್ನು ನೋಡಿ ನಗುತ್ತಿದ್ದರು. 'ಭಾರತದ ಮೆಚ್ಚಿನ' ಶೆಹನಾಜ್ ಗಿಲ್ ಅವರಿಗೆ ದೀಪಾವಳಿ ಶುಭಾಶಯಗಳು" ಎಂದು ಗುರು ರಾಂಧವಾ ಬರೆದುಕೊಂಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಅಭಿಮಾನಿಯೊಬ್ಬರು, "ಹಹಾ ಇಬ್ಬರೂ ನನ್ನ ಮೆಚ್ಚಿನವರು" ಎಂದು ಬರೆದರೆ ಮತ್ತೊಬ್ಬ ಅಭಿಮಾನಿ 'ತುಂಬಾ ಮುದ್ದಾಗಿದೆ' ಎಂದು ಕಾಮೆಂಟ್ ಮಾಡಿದ್ದಾರೆ.
ಬಿಗ್ ಬಾಸ್ ಸೀಸನ್ 13ರ ನಂತರ ಶೆಹನಾಜ್ ಖ್ಯಾತಿ ಗಳಿಸಿದರು. 2015ರಲ್ಲಿ ತಮ್ಮ ಮಾಡೆಲಿಂಗ್ ವೃತ್ತಿಯನ್ನು ಪ್ರಾರಂಭಿಸಿದ ಇವರು, 2017ರಲ್ಲಿ ಪಂಜಾಬಿ ಚಲನಚಿತ್ರ 'ಸತ್ ಶ್ರೀ ಅಕಾಲ್ ಇಂಗ್ಲೆಂಡ್' ನಲ್ಲಿ ನಟಿಯಾಗಿ ಪಾದಾರ್ಪಣೆ ಮಾಡಿದರು. ನಂತರ 2019 ರಲ್ಲಿ ಕಾಲಾ ಶಾ ಕಾಲಾ ಚಿತ್ರದಲ್ಲಿ ನಟಿಸಿದರು. ಇದೀಗ ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ.
ಇದನ್ನೂ ಓದಿ:ರಾಘವ್ ಜುಯಲ್ ಜೊತೆ ಶೆಹನಾಜ್ ಡೇಟಿಂಗ್ ವದಂತಿ - ಮೌನ ಮುರಿದ ಗಿಲ್