ನವದೆಹಲಿ: ಸಮಾಜದಲ್ಲಿ ಅಂದ ಚಂದಕ್ಕೆ ಮೌಲ್ಯ ಜಾಸ್ತಿ. ದೇಹದ ಆಕಾರ, ತೂಕ ಅತಿಯಾಗಿದ್ದರೆ ಹೀಯಾಳಿಸುವವರು ಎಲ್ಲೆಂದರಲ್ಲಿ ಇರುತ್ತಾರೆ. ಅತಿಯಾದ ದೇಹದ ತೂಕ, ಆಕಾರದಿಂದಾಗಿ ಸಾಮಾನ್ಯ ಜನರಲ್ಲದೆ ಸಿನಿಮಾ ರಂಗದ ನಟ ನಟಿಯರು ನಿಂದನೆಯ ಜೊತೆ ಮಾನಸಿಕ ಖಿನ್ನತೆಗೂ ಒಳಗಾದ ಅನೇಕರು ಇದ್ದಾರೆ. ಇದೀಗ ಅದೇ ವಿಷಯದ ಆಧಾರದ ಮೇಲೆ ದೇಹದ ಸ್ವಯಂ ಪ್ರೀತಿ ಮತ್ತು ಸಕಾರಾತ್ಮಕತೆಯ 'ಡಬಲ್ ಎಕ್ಸ್ಎಲ್ ' ಎಂಬ ಹೊಸ ಚಲನಚಿತ್ರದ ಬಿಡುಗಡೆಯಾಗಿದೆ.
ಮುದಸ್ಸರ್ ಅಜೀಜ್ ಅವರು ಲಾಕ್ ಡೌನ್ ನಂತರ ದೇಹದ ತೂಕ ಹೆಚ್ಚಾಗಿದ್ದರ ಕುರಿತು ನಟ ನಟಿಯರು ನೀಡುತ್ತಿದ್ದ ಮಾಹಿತಿ ಆಧರಿಸಿ ಕಥೆ ಬರೆದಿದ್ದಾರೆ. ಈ ಚಲನಚಿತ್ರವು ನಾನು, ನನ್ನ ಕುಟುಂಬದವರು ಹಾಗೂ ಸ್ನೇಹಿತರು ನನ್ನ ಲಿವಿಂಗ್ ಕೊಣೆಯಲ್ಲಿ ಮಾಡುವ ಮೋಜಿನ ಸಂಭಾಷಣೆಯೊಂದಿಗೆ ಪ್ರಾರಂಭವಾಗುತ್ತದೆ. ನಿರ್ದೇಶಕ ಸತ್ರಮ್ ರಮಣಿ ಅವರು 'ಡಬಲ್ ಎಕ್ಸ್‌ಎಲ್' ಗಾಗಿ ತೂಕ ಹೆಚ್ಚಿಸಲು ಕೇಳಿಕೊಂಡರು. ಹೀಗಾಗಿ ಚಿತ್ರೀಕರಣದ ಬಿಡುವಿನ ವೇಳೆ ಬರೀ ಪೀಜ್ಜಾ ತಿನ್ನಿ ,ಬರ್ಗರ್ ತಿನ್ನಿ ಎಂಬುದೇ ಆಗಿತ್ತು ಎಂದು 36 ವರ್ಷದ ನಟಿ ಹುಮಾ ಖುರೇಷಿ ಬಹಿರಂಗಪಡಿಸಿದರು.