ಕರ್ನಾಟಕ

karnataka

ETV Bharat / entertainment

ಪ್ರಿಯಾಂಕಾ ನನ್ನನ್ನೇ ಓವರ್ ಟೇಕ್ ಮಾಡುತ್ತಿದ್ದಾರೆ: ಉಪೇಂದ್ರ - Detective teekshna of priyanka upendra

ಡಿಟೆಕ್ಟಿವ್​​ ತೀಕ್ಷ್ಣ ಚಿತ್ರದ ಮೋಷನ್ ಪಿಕ್ಚರ್ ಬಿಡುಗಡೆ ಕಾರ್ಯಕ್ರಮ ಇಂದು ಕಲಾವಿದರ ಸಂಘದಲ್ಲಿ ನಡೆಯಿತು.

Detective teekshna Motion Picture released
ಡಿಟೆಕ್ಟೀವ್ ತೀಕ್ಷ್ಣ ಚಿತ್ರದ ಮೋಷನ್ ಪಿಕ್ಚರ್ ಬಿಡುಗಡೆ

By

Published : May 12, 2022, 3:21 PM IST

ನಟಿ ಪ್ರಿಯಾಂಕಾ ಉಪೇಂದ್ರ ಸೆಕೆಂಡ್ ಇನ್ನಿಂಗ್ಸ್​​​ ಶುರು ಮಾಡುವ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಬಹು ಬೇಡಿಕೆ ಹೊಂದಿದ್ದಾರೆ. ಸದ್ಯ ಲೈಫ್ ಈಸ್ ಬ್ಯೂಟಿಫುಲ್, ಉಗ್ರಾವತಾರ, ಖೈಮಾರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಡಿಟೆಕ್ಟಿವ್​​ ತೀಕ್ಷ್ಣ ಚಿತ್ರದ ಮೋಷನ್ ಪಿಕ್ಚರ್ ಬಿಡುಗಡೆ ಕಾರ್ಯಕ್ರಮ ಇಂದು ಕಲಾವಿದರ ಸಂಘದಲ್ಲಿ ನಡೆಯಿತು.

ಡಿಟೆಕ್ಟಿವ್ ತೀಕ್ಷ್ಣ ಚಿತ್ರದ ಮೋಷನ್ ಪಿಕ್ಚರ್ ಬಿಡುಗಡೆ ಕಾರ್ಯಕ್ರಮ..

ಕನ್ನಡ, ತೆಲುಗು, ತಮಿಳು ಹಾಗೂ ಬಂಗಾಳಿ ಸಿನಿಮಾಗಳು ಸೇರಿ ಪ್ರಿಯಾಂಕಾ ಉಪೇಂದ್ರ ಅವರ 50ನೇ ಸಿನಿಮಾ ಡಿಟೆಕ್ಟೀವ್ ತೀಕ್ಷ್ಣ ಆಗಿದೆ. ಪ್ರಿಯಾಂಕಾ ಅವರ ಪತಿ ಉಪೇಂದ್ರ ಅವರು ಚಿತ್ರದ ಮೋಷನ್ ಪಿಕ್ಚರ್ ಅನಾವರಣ ಮಾಡುವ ಮೂಲಕ ‌ಪತ್ನಿ ಪ್ರಿಯಾಂಕಾ ಜೊತೆಗೆ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು. ಮಗ ಆಯುಷ್, ಉಪೇಂದ್ರರವರ ಅಣ್ಣನ ಮಗ ನಿರಂಜನ್ ಸುಧೀಂದ್ರ ಸಿನಿಮಾಗೆ ಸಾಥ್ ನೀಡಿದರು.

ಈ ಚಿತ್ರ 50ನೆಯದು ಆದರೆ, ವಯಸ್ಸು 25 ಅಂತಾ ಮಾತು ಶುರು ಮಾಡಿದ ಉಪೇಂದ್ರ, ನಮ್ಮವರು ನನ್ನನ್ನೇ ಓವರ್ ಟೇಕ್ ಮಾಡ್ತಾ ಇದ್ದಾರೆ. ಎಲ್ಲ ಭಾಷೆ ಸೇರಿ 50 ಸಿನಿಮಾಗಳನ್ನು ಮಾಡಿದ್ದಾರೆ ಎಂದರು. ನಿರ್ದೇಶಕ ತ್ರಿವಿಕ್ರಮ ಒಂಬತ್ತು ತಿಂಗಳು ಸ್ಕ್ರಿಪ್ಟ್ ವರ್ಕ್ ಮಾಡಿದ್ದಾರೆ. ಹಾಲಿವುಡ್​ನಲ್ಲಿ ಹೇಳುವ ಹಾಗೆ ಒಂದು ಸಿನಿಮಾಗೆ ಸ್ಟಾರ್ ಮುಖ್ಯ ಅಲ್ಲಾ ಕಥೆ ಮುಖ್ಯ ಅನ್ನೋ ಸಾಲಿಗೆ ಈ ಸಿನಿಮಾ ಸೇರಲಿ ಎಂದರು.

ನಂತರ ಮಾತನಾಡಿದ ಉಪೇಂದ್ರ ಅವರ ಅಣ್ಣನ ಮಗ ನಿರಂಜನ್ ಸುಧೀಂದ್ರ ನನ್ನ ಚಿಕ್ಕಮ್ಮ ಹಾಲಿವುಡ್ ನಟಿಯ ರೀತಿ ಇದ್ದಾರೆ. ಅದೇ ರೀತಿ ಈ‌ ಸಿನಿಮಾ ಮೂಡಿ ಬರುತ್ತೆ ಎಂದರು. ಹಾಗೆಯೇ ಮಗ ಆಯುಷ್ ಕೂಡ ಅಮ್ಮನ ಸಿನಿಮಾಗೆ ಆಲ್ ದಿ ಬೆಸ್ಟ್ ಹೇಳಿದರು.

ನಟಿ ಪ್ರಿಯಾಂಕಾ ಉಪೇಂದ್ರ ಮಾತನಾಡಿ, ನಾನು ಮದುವೆ ಆದ ಮೇಲೆ ಕೆಲ ಯುವ ನಿರ್ದೇಶಕರು ಮಹಿಳಾ ಪ್ರಧಾನ ಕಥೆಗಳನ್ನು ಮಾಡಿ ನನ್ನ ಕೈಯಲ್ಲಿ ಆ್ಯಕ್ಟ್ ಮಾಡಿಸುತ್ತಿರುವುದು ನನಗೆ ಹೆಮ್ಮ. ಅದೇ ರೀತಿಯ ಸಿನಿಮಾ ಡಿಟೆಕ್ಟಿವ್​​ ತೀಕ್ಷ್ಣ ಆಗಿದೆ. ಆ್ಯಕ್ಷನ್ ಜೊತೆಗೆ ಆ್ಯಕ್ಟಿಂಗ್ ಮಾಡೋದು ಚಾಲೇಂಜ್ ಆಗಿದೆ ಎಂದರು.

ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಸಹ ನಿರ್ದೇಶಕನಾಗಿ ಕೆಲಸ ಮಾಡಿರೋ ತ್ರಿವಿಕ್ರಮ ರಾಘು ಈಗ ಡಿಟೆಕ್ಟಿವ್‌ ತೀಕ್ಷ್ಣ ಸಿನಿಮಾ ಮೂಲಕ ಪೂರ್ಣ ಪ್ರಮಾಣದ ನಿರ್ದೇಶಕರಾಗುತ್ತಿದ್ದಾರೆ. ಒಂದುವರೆ ವರ್ಷದಿಂದ ಈ ಕಥೆಯನ್ನು ಮಾಡಿದ್ವಿ. ಇದಕ್ಕೆಲ್ಲ ಮುಖ್ಯ ಬೆಂಬಲ ಪ್ರಿಯಾಂಕಾ ಮೇಡಂ ಅವರು, ಉಪೇಂದ್ರ ಸರ್ ನನಗೆ ಗಾಢ್ ಫಾದರ್ ರೀತಿ ಎಂದರು.

ಇದನ್ನೂ ಓದಿ:ಒಂದು ಸಣ್ಣ ಬ್ರೇಕ್‌ನ ನಂತರ ಮತ್ತೆ ಭಾರತಕ್ಕೆ ಬಂದ ನರ್ಗಿಸ್ ಫಖ್ರಿ ; 2ನೇ ಇನ್ನಿಂಗ್ಸ್​ಗೆ ವಿದೇಶಿ ಹಕ್ಕಿ ರೆಡಿ

ಇದೊಂದು ಬಿಗ್ ಬಜೆಟ್‌ನ ಪ್ಯಾನ್ ಇಂಡಿಯಾ ಚಿತ್ರ. ಏಳು ಭಾಷೆಗಳಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ತ್ರಿವಿಕ್ರಮ ರಾಘು ಆ್ಯಕ್ಷನ್ ಕಟ್ ಹೇಳ್ತಿದ್ದಾರೆ. ಅವರೇ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ಇನ್ನು ಮಂಗಳೂರು ಮೂಲದ ಪುರುಷೋತ್ತಮ ಬಿ ಕೊಯೂರು ಈ‌ ಸಿನಿಮಾವನ್ನು ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ಇದೇ ಜೂನ್‌ನಿಂದ ಚಿತ್ರೀಕರಣ ಆರಂಭವಾಗಲಿದೆ. ಬೆಂಗಳೂರು, ಕೇರಳ, ರಾಜಸ್ತಾನ, ಗೋವಾ ಸೇರಿದಂತೆ ಹಲವೆಡೆ ಕಡೆ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲಾನ್ ಮಾಡಿದೆ.

ABOUT THE AUTHOR

...view details