ಕರ್ನಾಟಕ

karnataka

ETV Bharat / entertainment

ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ.. ಡ್ರೀಮ್​ ಗರ್ಲ್​ ಸಾವಿನಿಂದ ಅಭಿಮಾನಿಗಳಿಗೆ ಆಘಾತ - akanksha dubey suicide case

ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿದ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

akanksha dubey commits suicide
ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ

By

Published : Mar 26, 2023, 2:44 PM IST

Updated : Mar 26, 2023, 3:07 PM IST

ಭೋಜ್‌ಪುರಿ ನಟಿ ಆಕಾಂಕ್ಷಾ ದುಬೆ (Akanksha Dubey) ಆತ್ಮಹತ್ಯೆಗೆ ಶರಣಾಗಿದ್ದಾರೆ. ಇಂದು ವಾರಣಾಸಿಯ ಹೋಟೆಲ್ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸಾರನಾಥ ಪ್ರದೇಶದ ಹೋಟೆಲ್​ವೊಂದರ ಕೋಣೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಅವರು ಚಿತ್ರದ ಶೂಟಿಂಗ್‌ಗಾಗಿ ವಾರಣಾಸಿಗೆ ಬಂದಿದ್ದರು. ಘಟನೆಯ ಬಗ್ಗೆ ಪೊಲೀಸರು ನಟಿಯ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ.

ನೃತ್ಯ, ನಟನೆಯಲ್ಲಿ ಆಸಕ್ತಿ.. ಆಕಾಂಕ್ಷಾ ದುಬೆ 1997ರ ಅಕ್ಟೋಬರ್ 21ರಂದು ಉತ್ತರ ಪ್ರದೇಶದ ಮಿರ್ಜಾಪುರದಲ್ಲಿ ಜನಿಸಿದ್ದರು. ಬಾಲ್ಯದಿಂದಲೂ ನೃತ್ಯ ಮತ್ತು ನಟನೆಯನ್ನು ಇಷ್ಟಪಡುತ್ತಿದ್ದರು. ತಮ್ಮ ನೃತ್ಯ ಮತ್ತು ನಟನೆಯ ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಟಿಕ್‌ಟಾಕ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಜನಪ್ರಿಯರಾಗಿದ್ದರು. ಬಳಿಕ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಶನಿವಾರ ರಾತ್ರಿಯೂ ಸಹ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದರು. ಇದು ಅವರು ಶೇರ್ ಮಾಡಿರುವ ಕೊನೆ ವಿಡಿಯೋ.

ಸಹನಟನ ಪ್ರೀತಿಯಲ್ಲಿದ್ದ ನಟಿ: ಒಂದು ತಿಂಗಳ ಹಿಂದೆ, ಪ್ರೇಮಿಗಳ ದಿನದಂದು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೀತಿಯ ವಿಚಾರವನ್ನು ಹಂಚಿಕೊಂಡಿದ್ದರು. ಇನ್​ಸ್ಟಾ ಪೇಜ್​ನಲ್ಲಿಸಹನಟ ಸಮರ್ ಸಿಂಗ್ ಜೊತೆಗಿನ ಫೋಟೋಗಳನ್ನು ನಟಿ ಹಂಚಿಕೊಂಡಿದ್ದರು. ಜೊತೆಗೆ 'ಪ್ರೇಮಿಗಳ ದಿನದ ಶುಭಾಶಯಗಳು' ಎಂದು ಬರೆದಿದ್ದರು.

ಆಘಾತಕ್ಕೊಳಗಾದ ಅಭಿಮಾನಿಗಳು:ಆದ್ರೀಗ ಅವರ ಆತ್ಮಹತ್ಯೆ ಪ್ರಕರಣ ಚಿತ್ರರಂಗವನ್ನು ಬೆಚ್ಚಿ ಬೀಳಿಸಿದೆ. ಕಹಿ ಘಟನೆ ಕೇಳಿದ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಆತ್ಮಹತ್ಯೆ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ ಮತ್ತು ಘಟನೆಯ ಬಗ್ಗೆ ಪ್ರತಿಕ್ರಿಯಿಸಲು ಪೊಲೀಸ್ ಅಧಿಕಾರಿಗಳು ನಿರಾಕರಿಸಿದ್ದಾರೆ.

'ಡ್ರೀಮ್ ಗರ್ಲ್' ಇನ್ನಿಲ್ಲ: ಆಕಾಂಕ್ಷಾ ದುಬೆ ಅವರನ್ನು ಭೋಜ್‌ಪುರಿ ಚಿತ್ರರಂಗದ 'ಡ್ರೀಮ್ ಗರ್ಲ್' ಎಂದು ಕರೆಯಲಾಗುತ್ತಿತ್ತು. ಆಕಾಂಕ್ಷಾ ಅವರ ಪೋಷಕರು ಪುತ್ರಿ ಐಪಿಎಸ್ ಅಧಿಕಾರಿಯಾಗಬೇಕೆಂದು ಬಯಸಿದ್ದರು. ಆದರೆ ಆಕಾಂಕ್ಷಾ ಬೆಳ್ಳಿತೆರೆಯಲ್ಲಿ ತಮ್ಮ ವೃತ್ತಿಜೀವನ ಕಟ್ಟಿಕೊಳ್ಳಲು ಬಯಸಿದ್ದರು. ಅಭಿನಯದ ಕನಸು ನನಸು ಮಾಡಿಕೊಂಡಿದ್ದರು.

'ಮೇರಿ ಜಂಗ್ ಮೇರಾ ಫೈಸ್ಲಾ' ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ಮುಜ್ಸೆ ಶಾದಿ ಕರೋಗಿ (ಭೋಜ್‌ಪುರಿ), 'ವೀರೋನ್ ಕೆ ವೀರ್', 'ಫೈಟರ್ ಕಿಂಗ್', 'ಕಸಂ ಬದ್ನಾ ಕರ್ನೆ ಕಿ 2' ಚಿತ್ರಗಳಲ್ಲಿ ನಟಿಸಿದರು.

ಇದನ್ನೂ ಓದಿ:'ಗರ್ಭಪಾತವಾಗಿದ್ರೂ ಮರುದಿನವೇ ಕೆಲಸಕ್ಕೆ ಬನ್ನಿ ಅಂದಿದ್ರು': ಸ್ಮೃತಿ ಇರಾನಿ ಹೇಳಿದ ಕಹಿ ಘಟನೆ

ಆಕಾಂಕ್ಷಾ ಅವರ ಮ್ಯೂಸಿಕ್ ವಿಡಿಯೋ 'ಯೇ ಆರಾ ಕಭಿ ಹರಾ ನಹೀ' ಇಂದು ಬಿಡುಗಡೆಯಾಗಿದೆ. ಆದ್ರೆ ಈ ದಿನವೇ ಆಘಾತಕಾರಿ ಸುದ್ದಿ ಹೊರ ಬಂದಿದೆ. ಪವರ್ ಸ್ಟಾರ್ ಪವನ್ ಸಿಂಗ್ ಜೊತೆ ನಟಿಯನ್ನು ನೋಡಲು ಅಭಿಮಾನಿಗಳು ಕಾತರರಾಗಿದ್ದರು. ಶನಿವಾರದಂದು, ನಟಿ ಈ ಹಾಡಿನ ಬಿಡುಗಡೆ ದಿನಾಂಕ ಮತ್ತು ಸಮಯದ ಬಗ್ಗೆ ತನ್ನ ಅಭಿಮಾನಿಗಳಿಗೆ ನೆನಪಿಸಲು ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಅವರಿಲ್ಲ ಅನ್ನೋದು ಮಾತ್ರ ನೋವಿನ ಸಂಗತಿ.

ಇದನ್ನೂ ಓದಿ:ಹೃದಯಾಘಾತದಿಂದ ಸ್ಯಾಂಡಲ್​​ವುಡ್ ನಿರ್ದೇಶಕ ಕಿರಣ್ ಗೋವಿ ನಿಧನ

Last Updated : Mar 26, 2023, 3:07 PM IST

ABOUT THE AUTHOR

...view details