ಕರ್ನಾಟಕ

karnataka

ETV Bharat / entertainment

ದೃಶ್ಯಂ 2 ಅಬ್ಬರದ ನಡುವೆಯೂ ಬಾಕ್ಸ್ ಆಫೀಸ್‌ ಧೂಳೆಬ್ಬಿಸಿದ ಭೇಡಿಯಾ - ವರುಣ್ ಧವನ್

ಭೇಡಿಯಾ ಸಿನಿಮಾ ಬಿಡುಗಡೆ ಆದ ಮೊದಲ ದಿನ ಅಂದರೆ ಶುಕ್ರವಾರದಂದು ವಿಶ್ವದಾದ್ಯಂತ 12.06 ಕೋಟಿ ರೂ. ಗಳಿಸಿದೆ.

Bhediya box office collections
ಭೇಡಿಯಾ ಸಿನಿಮಾ ಕಲೆಕ್ಷನ್​​

By

Published : Nov 26, 2022, 3:50 PM IST

ವರುಣ್ ಧವನ್ ಮತ್ತು ಕೃತಿ ಸನೋನ್ ಅಭಿನಯದ ಭೇಡಿಯಾ ಚಿತ್ರ ಶುಕ್ರವಾರದಂದು ಬಿಡುಗಡೆ ಆಗಿ ಪ್ರೇಕ್ಷಕರು, ವಿಮರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಚಿತ್ರ ಬಿಡುಗಡೆ ಆದ ದಿನದಂದು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್​ ಮಾಡಿದ್ದು, ಬಾಲಿವುಡ್​ಗೆ ಬೂಸ್ಟರ್ ಡೋಸ್​ ಸಿಕ್ಕಂತಾಗಿದೆ.

ಚಿತ್ರ ತಯಾರಕರ ಪ್ರಕಾರ, ಸಿನಿಮಾ ಬಿಡುಗಡೆ ಆದ ಮೊದಲ ದಿನ ಅಂದರೆ ಶುಕ್ರವಾರದಂದು ವಿಶ್ವದಾದ್ಯಂತ 12.06 ಕೋಟಿ ರೂ. ಗಳಿಸಿದೆ. ಅಜಯ್ ದೇವಗನ್ ಅಭಿನಯದ ಸಸ್ಪೆನ್ಸ್ ಥ್ರಿಲ್ಲರ್ ದೃಶ್ಯಂ 2 ಬಾಕ್ಸ್ ಆಫೀಸ್‌ನಲ್ಲಿ ಪ್ರಾಬಲ್ಯ ಸಾಧಿಸುತ್ತಿರುವ ಈ ಹೊತ್ತಿನಲ್ಲಿ ಭೇಡಿಯಾ ಚಿತ್ರ ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಭೇಡಿಯಾ ಅಮರ್ ಕೌಶಿಕ್ ನಿರ್ದೇಶನದ, ದಿನೇಶ್ ವಿಜನ್ ನಿರ್ಮಿಸಿದ ಹಾರರ್ ಹಾಸ್ಯ ಚಿತ್ರ. ಇದರಲ್ಲಿ ವರುಣ್ ಮತ್ತು ಕೃತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅರುಣಾಚಲ ಪ್ರದೇಶದ ಕಾಡುಗಳಲ್ಲಿ ನಡೆಯುವ ಕಥೆಯು ಭಾಸ್ಕರ್ (ವರುಣ್) ಎಂಬ ವ್ಯಕ್ತಿಯ ಸುತ್ತ ಸುತ್ತುತ್ತದೆ. ಒಂದು ರಾತ್ರಿ ಆ ವ್ಯಕ್ತಿ ತೋಳದಿಂದ ಕಚ್ಚಿಸಿಕೊಂಡಾಗ ಕಥೆಯಲ್ಲಿ ಟ್ವಿಸ್ಟ್ ಸಿಗುತ್ತದೆ. ಇದರಿಂದಾಗಿ ಅವನು ಕೆಲವು ವಿಶೇಷ ಶಕ್ತಿಗಳನ್ನು ಪಡೆಯುತ್ತಾನೆ. ಭಾಸ್ಕರ್ ಮತ್ತು ಅವರ ಗೆಳೆಯರು ಕೆಲ ಪ್ರಶ್ನೆಗಳಿಗೆ ಉತ್ತರಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದಂತೆ, ಕಥೆಗೆ ಕೆಲ ಟ್ವಿಸ್ಟ್ ಸಿಗುತ್ತದೆ.​ ಇದುವೇ ಚಿತ್ರಕಥೆ.​ ಜೊತೆಗೆ ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಷ್ಟು ನಗಿಸುತ್ತದೆ.

2015ರ ದಿಲ್‌ವಾಲೆ ಮತ್ತು 2019ರ ಕಲಂಕ್‌ನಲ್ಲಿ ಸ್ಕ್ರೀನ್​ ಶೇರ್ ಮಾಡಿದ್ದ ವರುಣ್ ಮತ್ತು ಕೃತಿ ಅವರಿಗಿದು ಒಟ್ಟಾಗಿ ನಟಿಸುತ್ತಿರುವ ಮೂರನೇ ಸಿನಿಮಾ. ದೀಪಕ್ ಡೊಬ್ರಿಯಾಲ್ ಮತ್ತು ಅಭಿಷೇಕ್ ಬ್ಯಾನರ್ಜಿ ಸಹ ನಟಿಸಿರುವ ಈ ಚಲನಚಿತ್ರವು ನಿನ್ನೆ 2D ಮತ್ತು 3Dನಲ್ಲಿ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಬಿಡುಗಡೆ ಆಗಿದೆ.

ಇದನ್ನೂ ಓದಿ:ರಜನಿಯ 'ಲಾಲ್ ಸಲಾಂ' ಸುಶಾಂತ್ ಸಿಂಗ್ ಅಭಿಯಿಸಿದ್ದ 'ಕೈ ಪೋ ಚೆ' ರಿಮೇಕ್?

ಇನ್ನೂ ನಿರ್ದೇಶಕ ನಿತೇಶ್ ತಿವಾರಿ ಅವರ ಬವಾಲ್ ಸಿನಿಮಾದಲ್ಲಿ ಜಾನ್ವಿ ಕಪೂರ್ ಜೊತೆ ವರುಣ್ ಧವನ್​ ನಟಿಸಲಿದ್ದಾರೆ. ಕೃತಿ, ಟೈಗರ್ ಶ್ರಾಫ್ ಜೊತೆ ನಟಿಸಿರುವ ಆ್ಯಕ್ಷನ್ ಥ್ರಿಲ್ಲರ್ ಚಿತ್ರ ಗಣಪಥ್ -ಭಾಗ: 1, ದಕ್ಷಿಣ ನಟ ಪ್ರಭಾಸ್ ಜೊತೆಗೆ ನಟಿಸಿರುವ ಪ್ಯಾನ್-ಇಂಡಿಯಾ ಚಿತ್ರ ಆದಿಪುರುಷ್​ ಮತ್ತು ಕಾರ್ತಿಕ್ ಆರ್ಯನ್ ಜೊತೆಗೆ ಅಭಿನಯಿಸಿರುವ ಫ್ಯಾಮಿಲಿ ಎಂಟರ್​ಟೈನ್​ಮೆಂಟ್​​ ಚಿತ್ರ ಶೆಹಝಾದಾ ಚಿತ್ರ ಬಿಡುಗಡೆ ಹಂತದಲ್ಲಿದೆ.

ABOUT THE AUTHOR

...view details