ಕರ್ನಾಟಕ

karnataka

ETV Bharat / entertainment

'ನಾವು ಅತ್ಯುತ್ತಮರು': ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್ಸ್​​ನಲ್ಲಿ ಭಾರತದ ಪ್ರತಿಭೆಗಳ ಮಿಂಚು

Asian Academy Creative Awards 2023: ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್ಸ್ ವಿಜೇತರ ಪಟ್ಟಿ ಇಲ್ಲಿದೆ.

Asian Academy Creative Awards 2023
ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್ಸ್

By ETV Bharat Karnataka Team

Published : Dec 8, 2023, 3:44 PM IST

ನಿನ್ನೆ(ಗುರುವಾರ) ಸಿಂಗಾಪುರದಲ್ಲಿ ನಡೆದ 'ಏಷ್ಯನ್ ಅಕಾಡೆಮಿ ಕ್ರಿಯೇಟಿವ್ ಅವಾರ್ಡ್ಸ್ 2023'ರಲ್ಲಿ ಭಾರತದಿಂದ ವಿಜಯ್ ವರ್ಮಾ ಮತ್ತು ರಾಜ್​​ಶ್ರೀ ದೇಶ್​​​ಪಾಂಡೆ ಭಾಗಿಯಾಗಿ ವಿಶೇಷ ಗೌರವಕ್ಕೆ ಪಾತ್ರರಾದರು. ಸಿಂಗಾಪುರ, ಜಪಾನ್ ಮತ್ತು ಭಾರತ ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದುಕೊಂಡ ಪ್ರಮುಖ ದೇಶಗಳಾಗಿವೆ.

ಭಾರತೀಯ ನಟರು ನಟನಾ ವಿಭಾಗದಲ್ಲಿ ಮಿಂಚು ಹರಿಸಿದ್ದಾರೆ. ಟ್ರಯಲ್ ಬೈ ಫೈಯರ್‌ (ನೆಟ್‌ಫ್ಲಿಕ್ಸ್‌ನಲ್ಲಿ ಲಭ್ಯ) ಅಮೋಘ ಅಭಿನಯಕ್ಕಾಗಿ ರಾಜ್​​​​ಶ್ರೀ ದೇಶಪಾಂಡೆ ಅತ್ಯುತ್ತಮ ನಟಿ ಪ್ರಶಸ್ತಿ ಗೆದ್ದರು. ವಿಜಯ್ ವರ್ಮಾ ಪ್ರಮುಖ ಅತ್ಯುತ್ತಮ ನಟ ಪ್ರಶಸ್ತಿ ಮುಡಿಗೇರಿಸಿಕೊಂಡರು. ದಹಾದ್‌ನಲ್ಲಿನ (ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯ) ನಟನೆಗೆ ಈ ಗೌರವ ಸಂದಿದೆ.

ಇಬ್ಬರು ವಿಜೇತರು ಸಾಮಾಜಿಕ ಮಾಧ್ಯಮದಲ್ಲಿ ಸಂತಸ ಹಂಚಿಕೊಂಡಿದ್ದಾರೆ. ವಿಜಯ್ ಕೃತಜ್ಞತೆ ಸಲ್ಲಿಸಿ, ಇದು ತಮ್ಮ ದೇಶದ ಗೆಲುವು ಎಂಬುದನ್ನು ಒತ್ತಿ ಹೇಳಿದರು. "ಪ್ರಶಸ್ತಿ ಗೆಲ್ಲುವುದು ಯಾವಾಗಲೂ ಅದ್ಭುತ ಕ್ಷಣವೇ. ಆದರೆ ಈ ಬಾರಿ ಹೆಚ್ಚು ವಿಶೇಷವಾಗಿದೆ. ಏಕೆಂದರೆ ಇದು ನಿಮ್ಮ ಗೆಲುವು ನಿಮ್ಮ ದೇಶದ ಗೆಲುವು" ಎಂದರು. ಮುಂದುವರೆದು, "ನನ್ನ ದೇಶವಾಸಿಗಳಿಗೆ ಇದನ್ನು ಹೇಳಲು ಬಹಳ ಸಂತೋಷವಾಗುತ್ತಿದೆ. ಏಷ್ಯಾ-ಪೆಸಿಫಿಕ್​ನಲ್ಲಿ ನಾವು ಅತ್ಯುತ್ತಮರು" ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ:ಹಿರಿಯ ನಟಿ ಲೀಲಾವತಿ ಅವರ ಆರೋಗ್ಯ ವಿಚಾರಿಸಿದ ರಕ್ಷಾ ರಾಮಯ್ಯ

ದಹಾದ್‌ನಲ್ಲೂ ವಿಜಯ್ ವರ್ಮಾ ನಟನೆಗೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗಿದೆ. ರಾಜ್​​​ಶ್ರೀ ದೇಶಪಾಂಡೆ ಅವರು ಟ್ರಯಲ್ ಬೈ ಫೈಯರ್‌ನಲ್ಲಿ ನೀಲಂ ಕೃಷ್ಣಮೂರ್ತಿ ಪಾತ್ರದಲ್ಲಿ ನಟಿಸಿದ್ದರು. ನೆಟ್‌ಫ್ಲಿಕ್ಸ್‌ ಮತ್ತು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ದಹಾದ್‌ ಮತ್ತು ಟ್ರಯಲ್ ಬೈ ಫೈಯರ್‌ ವೀಕ್ಷಣೆಗೆ ಲಭ್ಯವಿದೆ.

ಪ್ರಶಸ್ತಿ ವಿಜೇತರು-(ಪ್ರಮುಖ ವಿಭಾಗಗಳು):

  • ಬೆಸ್ಟ್ ಅನಿಮೇಟೆಡ್ ಪ್ರೋಗ್ರಾಮ್​ ಅಥವಾ ಸೀರಿಸ್: ಓಎನ್​ಐ; ಥಂಡರ್ ಗಾಡ್ಸ್ ಟೇಲ್ (ಜಪಾನ್).
  • ಬೆಸ್ಟ್ ಡಾಕ್ಯುಮೆಂಟರಿ ಪ್ರೋಗ್ರಾಮ್ (ಒನ್​ ಆಫ್): ದಿ ಕ್ಲೀನಿಂಗ್ ಕಂಪನಿ (ಆಸ್ಟ್ರೇಲಿಯಾ).
  • ಬೆಸ್ಟ್ ಡಾಕ್ಯುಮೆಂಟರಿ ಸೀರಿಸ್: ನೇಚರ್ಸ್ ಹಿಡನ್ ಮಿರಾಕಲ್ಸ್; ದಿ ಸೀಕ್ರೆಟ್ ಲೈಫ್ ಆಫ್ ಪ್ಲ್ಯಾಂಟ್ಸ್ (ಜಪಾನ್).
  • ಬೆಸ್ಟ್ ಆ್ಯಕ್ಟರ್: ವಿಜಯ್ ವರ್ಮಾ - ದಹಾದ್​​ (ಭಾರತ).
  • ಬೆಸ್ಟ್ ಆ್ಯಕ್ಟ್ರೆಸ್: ರಾಜ್​​​ಶ್ರೀ ದೇಶ್​ಪಾಂಡೆ - ಟ್ರಯಲ್ ಬೈ ಫೈಯರ್‌ (ಭಾರತ).
  • ಬೆಸ್ಟ್ ಡೈರೆಕ್ಷನ್​​ (ಫಿಕ್ಷನ್​​): ಇಟರು ಮಿಜುನೊ - ರೀಬೂಟಿಂಗ್​​​ (ಜಪಾನ್).
  • ಬೆಸ್ಟ್ ಡ್ರಾಮಾ ಸೀರಿಸ್: ದಿ ಗ್ಲೋರಿ (ಕೊರಿಯಾ).
  • ಬೆಸ್ಟ್ ಫೀಚರ್ ಫಿಲ್ಮ್: ಹಂಗರ್ (ಥಾಯ್ಲೆಂಡ್).

ಇದನ್ನೂ ಓದಿ:'ಫೈಟರ್' ಟೀಸರ್​: ಮೈನವಿರೇಳಿಸುವ ವೈಮಾನಿಕ ದೃಶ್ಯಗಳೊಂದಿಗೆ ಬಂದ ಹೃತಿಕ್, ದೀಪಿಕಾ

ABOUT THE AUTHOR

...view details