ಕರ್ನಾಟಕ

karnataka

ETV Bharat / entertainment

'ರಾಮ ಸೇತು' ಸಿನಿಮಾದ ಫಸ್ಟ್​ ಫೋಟೋ ಹಂಚಿಕೊಂಡ ಬಾಲಿವುಡ್​ ಸ್ಟಾರ್​ ಅಕ್ಷಯ್​ ಕುಮಾರ್​

ಅಕ್ಷಯ್ ಕುಮಾರ್ ತಮ್ಮ ಮುಂಬರುವ ಚಿತ್ರ ರಾಮ್ ಸೇತುವಿನ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದು, ಈ ಆ್ಯಕ್ಷನ್​ ಸಿನಿಮಾ ಪೌರಾಣಿಕ ರಾಮ-ಸೇತುವಿನ ಅಸ್ತಿತ್ವವನ್ನು ಸಾಬೀತುಪಡಿಸಲು ಹೋರಾಡುವ ಒಬ್ಬ ಆರ್ಕಿಯೋಲಾಜಿಸ್ಟ್​ನ ಕಥೆಯಾಗಿದೆ.

By

Published : Apr 29, 2022, 12:54 PM IST

Akshay Kumar shares a glimpse into the world of Ram Setu
'ರಾಮ ಸೇತು' ಸಿನಿಮಾದ ಫಸ್ಟ್​ ಪೋಟೋ

ಮುಂಬೈ (ಮಹಾರಾಷ್ಟ್ರ): ಬಾಲಿವುಡ್​ ಸೂಪರ್​ಸ್ಟಾರ್​ ಅಕ್ಷಯ್​ ಕುಮಾರ್​ ಅವರು ತಮ್ಮ ಈ ವರ್ಷದ ಬಹುನಿರೀಕ್ಷಿತ ಸಿನಿಮಾ 'ರಾಮ್​ ಸೇತು' ಚಿತ್ರದ ಮೊದಲ ನೋಟವನ್ನು ಗುರುವಾರ ರಿವೀಲ್​ ಮಾಡಿದ್ದಾರೆ. ತಮ್ಮ ಇನ್​ಸ್ಟಾಗ್ರಾಂ ಖಾತೆಯಲ್ಲಿ ನಟಿ ಜಾಕ್ವೆಲಿನ್​ ಫರ್ನಾಂಡಿಸ್​ ಹಾಗೂ ನಟ ಸತ್ಯದೇವ್​ ಅವರೊಂದಿಗಿರುವ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ.

ತಮ್ಮ ಪೋಸ್ಟ್‌ಗೆ #ರಾಮಸೇತು ಪ್ರಪಂಚದ ಒಂದು ನೋಟ. ಚಿತ್ರಮಂದಿರಗಳಲ್ಲಿ ದೀಪಾವಳಿ, 2022' ಎಂದು ಶೀರ್ಷಿಕೆಯನ್ನೂ ನೀಡಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕೈಯಲ್ಲಿ ಬೆಂಕಿಯ ಪಂಜು ಹಿಡಿದುಕೊಂಡಿದ್ದು, ಡಾರ್ಕ್​ ಲೈಟ್​ ಶೇಡ್​ನಲ್ಲಿ ಮಿಂಚಿದ್ದಾರೆ. ಜಾಕ್ವೆಲಿನ್ ಮತ್ತು ಸತ್ಯ ದೇವ್ ಅವರ ಪಕ್ಕದಲ್ಲೇ ನಿಂತಿರುವುದನ್ನು ಗಮನಿಸಬಹುದು. ಚಿತ್ರದ ಹಿನ್ನೆಲೆಯು ನಿಗೂಢ ಐತಿಹಾಸಿಕ ವೈಬ್ ಇರುವಂತೆ ಕಾಣುತ್ತದೆ.

ಈ ಸಾಹಸಮಯ ಚಿತ್ರ ಪೌರಾಣಿಕ ರಾಮ-ಸೇತುವಿನ ನಿಜವಾದ ಅಸ್ತಿತ್ವ ಸಾಬೀತುಪಡಿಸಲು ಸಮಯದ ವಿರುದ್ಧ ಓಡುವ ಒಬ್ಬ ಪುರಾತತ್ವಶಾಸ್ತ್ರಜ್ಞನ (ಆರ್ಕಿಯೋಲಾಜಿಸ್ಟ್​) ಕಥೆಯಾಗಿದೆ. ಇದು ಭಾರತೀಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಪರಂಪರೆಯಲ್ಲಿ ಆಳವಾಗಿ ಬೇರೂರಿರುವ ಕಥೆಯ ಮೇಲೆ ಬೆಳಕು ಚೆಲ್ಲುತ್ತದೆ. ರಾಮ್ ಸೇತು ಸಿನಿಮಾದಲ್ಲಿ ಅಕ್ಷಯ್ ಕುಮಾರ್​ ಜೊತೆಗೆ ನಟರಾದ ಜಾಕ್ವೆಲಿನ್ ಫರ್ನಾಂಡೀಸ್, ಸತ್ಯದೇವ್ ಮತ್ತು ನುಶ್ರತ್ ಭರುಚ್ಚಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಮುಂದಿನ ವರ್ಷ ದೀಪಾವಳಿಗೆ ಬೆಳ್ಳಿತೆರೆಗೆ ಬರಲಿರುವ ಈ ಸಿನಿಮಾಗೆ ಅಭಿಷೇಕ್​ ಶರ್ಮಾ ಆ್ಯಕ್ಷನ್​ ಕಟ್​ ಹೇಳಿದ್ದಾರೆ. ಅರುಣಾ ಭಾಟಿಯಾ ಮತ್ತು ವಿಕ್ರಮ್ ಮಲ್ಹೋತ್ರಾ ಸಿನಿಮಾ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡ ಶೀಘ್ರದಲ್ಲೇ ರಾಮ್ ಸೇತು ಅಮೆಜಾನ್ ಪ್ರೈಮ್ ಸದಸ್ಯರಿಗೆ ಲಭ್ಯವಿರುತ್ತದೆ.

ಇದನ್ನೂ ಓದಿ:'ಭಾರತಕ್ಕೆ ಇರುವುದೊಂದೇ ಭಾಷೆ, ಅದು ಮನರಂಜನೆ': ಅಜಯ್​ ದೇವಗನ್​ಗೆ ಸೋನು ಸೂದ್ ತಿರುಗೇಟು

ABOUT THE AUTHOR

...view details