ಕರ್ನಾಟಕ

karnataka

ETV Bharat / entertainment

'ಕಾಂತಾರ 2'ನಲ್ಲಿ ಬಣ್ಣ ಹಚ್ಚಲಿದ್ದಾರೆ ಬಾಲಿವುಡ್‌ ಬೆಡಗಿ ಊರ್ವಶಿ ರೌಟೇಲಾ! - Kantara 2

ನಟಿ ಊರ್ವಶಿ ರೌಟೇಲಾ ರಿಷಬ್​ ಶೆಟ್ಟಿ ಜೊತೆಗಿನ ಫೋಟೋ ಹಂಚಿಕೊಂಡು ಕಾಂತಾರ 2 ಎಂದು ಬರೆದುಕೊಂಡಿದ್ದಾರೆ.

actress Urvashi Rautela in Kantara 2
'ಕಾಂತಾರ 2'ನಲ್ಲಿ ಊರ್ವಶಿ ರೌಟೇಲಾ

By

Published : Feb 11, 2023, 3:32 PM IST

Updated : Feb 11, 2023, 3:47 PM IST

ಬಾಲಿವುಡ್‌ ಬೆಡಗಿ ಊರ್ವಶಿ ರೌಟೇಲಾ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟೀವ್​. ತಮ್ಮ ದಿನಚರಿಗಳನ್ನು ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳಿಗೆ ಅಪ್​ಡೇಟ್​ ಕೊಡುತ್ತಿರುತ್ತಾರೆ. ಇದೀಗ ತಮ್ಮ ಅಭಿಮಾನಿಗಳಿಗೆ ದೊಡ್ಡ ಗುಡ್ ನ್ಯೂಸ್ ನೀಡಿದ್ದಾರೆ. ಇದು ಕೇವಲ ಅವರ ಅಭಿಮಾನಿಗಳಿಗೆ ಮಾತ್ರವಲ್ಲ ಕನ್ನಡಿಗರಿಗೆ ವಿಶೇಷವಾಗಿ ರಿಷಬ್ ಶೆಟ್ಟಿ ಅವರ ಅಭಿಮಾನಿಗಳಿಗೂ ದೊಡ್ಡ ಸುದ್ದಿಯೇ. ಬ್ಯೂಟಿಫುಲ್ ನಟಿ ಊರ್ವಶಿ ರೌಟೇಲಾ ಕನ್ನಡ ಚಿತ್ರರಂಗದ ಸೂಪರ್‌ಹಿಟ್ ಚಿತ್ರ 'ಕಾಂತಾರ'ದ ಸೀಕ್ವೆಲ್​​ನಲ್ಲಿ (ವಾಸ್ತವವಾಗಿ ಈಗಾಗಲೇ ತೆರೆ ಕಂಡ ಸಿನಿಮಾ ಭಾಗ 2, ಭಾಗ 1 ಸಿದ್ಧಗೊಳ್ಳುತ್ತಿದೆ) ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಚರ್ಚೆ ಶುರುವಾಗಿದೆ. ಈ ಬೆಳವಣಿಗೆಗೆ ಕಾರಣ ಸ್ವತಃ ನಟಿಯೇ ಹಾಕಿಕೊಂಡಿರುವ ಸೋಷಿಯಲ್​ ಮೀಡಿಯಾ ಪೋಸ್ಟ್.

ಊರ್ವಶಿ ರೌಟೇಲಾ ಸೋಶಿಯಲ್​ ಮೀಡಿಯಾ ಪೋಸ್ಟ್

ಊರ್ವಶಿ ರೌಟೇಲಾ ಇನ್​ಸ್ಟಾ ಸ್ಟೋರಿ: ನಟಿ ಊರ್ವಶಿ ರೌಟೇಲಾ ಇನ್​ಸ್ಟಾ ಸ್ಟೋರಿಯಲ್ಲಿ ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ನಲ್ಲಿ ಅವರು ಕಾಂತಾರ ಸ್ಟಾರ್ ರಿಷಬ್ ಶೆಟ್ಟಿ ಅವರೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ಫೋಟೋಗೆ ಅವರು ಹಾಕಿರುವ ಕ್ಯಾಪ್ಷನ್​ ಎಲ್ಲರ ಗಮನ ಸೆಳೆದಿದೆ. ಕಾಂತಾರ 2 ಎಂದು ಬರೆದು ಪೋಸ್ಟ್ ಅನ್ನು ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಸ್ಮ್​​ಗೆ ಟ್ಯಾಗ್​​ ಮಾಡಿದ್ದಾರೆ. ಇವರಿಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಕಾಂತಾರ ಬಗ್ಗೆ ಜನರ ಉತ್ಸಾಹ: ನಟಿ ಊರ್ವಶಿ ರೌಟೇಲಾ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ, ಅವರು ಹಳದಿ ಉಡುಪಿನಲ್ಲಿ ಕಾಣಿಸಿಕೊಂಡಿದ್ದಾರೆ. ಪಕ್ಕದಲ್ಲಿ ನಿಂತಿರುವ ಕನ್ನಡದ ಸೂಪರ್​ ಸ್ಟಾರ್, ಕಾಂತಾರ ಸಾರಥಿ ರಿಷಬ್ ಶೆಟ್ಟಿ ಬಿಳಿ ಟೀ ಶರ್ಟ್ ಮತ್ತು ಡೆನಿಮ್ ಧರಿಸಿದ್ದಾರೆ. ಇದರೊಂದಿಗೆ ಹ್ಯಾಟ್ ಕೂಡ​ ಧರಿಸಿದ್ದಾರೆ. ಈ ಪೋಸ್ಟ್ ಅನ್ನು ಹಂಚಿಕೊಂಡಿರುವ ಊರ್ವಶಿ, ಕಾಂತಾರ ಲೋಡಿಂಗ್​ ಎಂದು ಬರೆದು ರಿಷಬ್ ಶೆಟ್ಟಿ ಮತ್ತು ಹೊಂಬಾಳೆ ಫಿಲ್ಮ್ಸ್​​ಗೆ ಟ್ಯಾಗ್​ ಮಾಡಿದ್ದಾರೆ. ಊರ್ವಶಿ ಅವರ ಈ ಪೋಸ್ಟ್‌ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಕಾಂತಾರ 2 ಬಗ್ಗೆ ಜನರು ಉತ್ಸಾಹ ತೋರುತ್ತಿದ್ದಾರೆ. ಇವರಿಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ನಟಿ ಪೋಸ್ಟ್​ಗೆ ಕಾಮೆಂಟ್ :ಈ ಫೋಟೋ ಭಾರಿ ಮೆಚ್ಚುಗೆ ಗಳಿಸೋದ್ರ ಜೊತೆಗೆ ಕೆಲ ಮಂದಿಯಿಮದ ಟ್ರೋಲ್​ ಕೂಡ ಆಗಿದೆ. ಬಳಕೆದಾರರೊಬ್ಬರು, 'ರಿಷಬ್ ಪಂತ್ ಇಲ್ಲದಿದ್ದರೆ ರಿಷಬ್ ಶೆಟ್ಟಿ ಸರಿ' ಎಂದು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, 'ನಿಮ್ಮ ಜೀವನದಲ್ಲಿ ಎಷ್ಟು ರಿಷಬ್​​​ ರು ಭಾಗಿಯಾಗಿದ್ದಾರೆ, ದೀದಿ' ಎಂದು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರರು, 'ರಿಷಬ್ ಶೆಟ್ಟಿ ಕೇವಲ ರಿಷಬ್ ಆಗಿರಬೇಕು' ಎಂದು ಹೇಳಿದ್ದಾರೆ. ಮತ್ತೋರ್ವರು, 'ದೀದಿಯ ಜೀವನ ಆರ್‌ಪಿಯಲ್ಲಿ ಸಂಪರ್ಕ ಹೊಂದಿದೆ' ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:ವಿಶ್ವದ ಜನರು ನೋಡಿದ್ದು ಕಾಂತಾರ ‘2’, ಪಾರ್ಟ್ 1 ಬರಬೇಕಿದೆ: ನಿರ್ದೇಶಕ ರಿಷಬ್ ಶೆಟ್ಟಿ

16 ಕೋಟಿ ಬಜೆಟ್​​ನಲ್ಲಿ ನಿರ್ಮಾಣ ಆದ ಕಾಂತಾರ ಚಿತ್ರ ಕಳೆದ ಸೆಪ್ಟೆಂಬರ್​​ನಲ್ಲಿ ತೆರೆ ಕಂಡು 450 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಇತ್ತೀಚೆಗೆ 100 ದಿನ‌ ಪೂರೈಸಿದ ಹಿನ್ನೆಲೆ ಚಿತ್ರತಂಡ ಶತದಿನೋತ್ಸವ ಸಮಾರಂಭವನ್ನು ಆಯೋಜನೆ ಮಾಡಿತ್ತು. ಆ ವೇಳೆ ನಿರ್ದೇಶಕ, ನಟ ರಿಷಬ್​ ಶೆಟ್ಟಿ ನೀವು ನೋಡಿದ್ದು ಕಾಂತಾರ ಭಾಗ 2, ಕಾಂತಾರ​ 1 ಬರಬೇಕಿದೆ ಎಂದು ಹೇಳಿ ಕುತೂಹಲ ಮೂಡಿಸಿದ್ದರು.

Last Updated : Feb 11, 2023, 3:47 PM IST

ABOUT THE AUTHOR

...view details