ಮುಂಬೈ: ನಟಿ ಮಲೈಕಾ ಮತ್ತು ಅರ್ಜುನ್ ಕಪೂರ್ ಸಂಬಂಧ ಈಗಾಗಲೇ ಬಹಿರಂಗವಾಗಿದ್ದು, ಇಬ್ಬರೂ ಈ ಬಗ್ಗೆ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಬಹು ವಯಸ್ಸಿನ ಅಂತರದ ಈ ಸಂಬಂಧದ ಬಗ್ಗೆ ಮಲೈಕಾ ಮತ್ತು ಅರ್ಜುನ್ ಇಬ್ಬರೂ ಗಂಭೀರವಾಗಿಯೇ ಇದ್ದಾರೆ. ಇದನ್ನು ಇತ್ತೀಚೆಗೆ ನಡೆದ ಕಾಫಿ ವಿತ್ ಕರಣ್ ಶೋ ಅಲ್ಲಿ ನಟ ಅರ್ಜುನ್ ಕೂಡ ತಿಳಿಸಿದ್ದರು. ಒಟ್ಟೊಟ್ಟಿಗೆ ಪ್ರವಾಸಿತಾಣ, ಮೋಜು ಮಸ್ತಿ ನಡುವೆ ಕ್ಯಾಮೆರಾಗೆ ಈ ಜೋಡಿಗಳು ಸೆರೆಯಾಗುತ್ತಲೇ ಇರುತ್ತಾರೆ.
ಇದೀಗ ಇವರಿಬ್ಬರು ವಿಶೇಷ ದಿನಕ್ಕೆ ಒಟ್ಟಾಗಿ ಪ್ಯಾಪಾರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ನಟ ಅರ್ಜುನ್ ಕಪೂರ್ ಹುಟ್ಟುಹಬ್ಬದ ಹಿನ್ನಲೆ ಇವರು ಕಾಣಿಸಿಕೊಂಡಿದ್ದಾರೆ. ಗೆಳೆಯ ಅರ್ಜುನ್ ಕಪೂರ್ ಹುಟ್ಟ ಹಬ್ಬದ ಹಿನ್ನಲೆ ನಟಿ ಮಲೈಕಾ ಗೆಳೆಯನ ಮನೆಯಲ್ಲಿ ಸೆರೆ ಸಿಕ್ಕಿದ್ದಾರೆ. ತಮ್ಮ ಬಳ್ಳಿಯಂತಹ ಬಳುಕುವ ದೇಹದೊಂದಿಗೆ ಸಖತ್ ಔಟ್ಫಿಟ್ನಲ್ಲಿ ನಾಚಿದ್ದಾರೆ. ಪ್ರತಿ ಬಾರಿ ದೇಶದ ಹೊರಗೆ ಪರಸ್ಪರ ಹುಟ್ಟು ಹಬ್ಬ ಆಚರಿಸುವ ಈ ಜೋಡಿ ಈ ಬಾರಿ ಮಾತ್ರ ಆ ಸಂಪ್ರದಾಯಕ್ಕೆ ತಿಲಾಂಜಲಿ ಹಾಕಿದೆ. ತಮ್ಮ 38ನೇ ಹುಟ್ಟುಹಬ್ಬದಂದು ಇಬ್ಬರು ತಮ್ಮ ಅಮೂಲ್ಯ ಸಮಯವನ್ನು ಮನೆಯಲ್ಲಿಯೇ ಕಳೆಯಲು ನಿರ್ಧರಿಸಿದ್ದಾರೆ.
ಅರ್ಜುನ್ ಕಪೂರ್ ಮನೆಗೆ ಸಂಜೆ ಬಂದ ನಟಿ ಮಲೈಕಾ ಬಿಳಿ, ಕಿತ್ತಳೆ ಬಣ್ಣದ ಸ್ಲಿವ್ಲೆಸ್ ಪ್ರಿಂಟ್ ಮಿಡಿ ಡ್ರೆಸ್ನಲ್ಲಿ ಮಿಂಚಿದರು. ಲೋವೆ ಬ್ರಾಂಡ್ನ ಈ ಸ್ಲಿಟ್ ಡ್ರೆಸ್ ಅವರಿಗೆ ಮುದ್ದಾಗಿ ಕಾಣುತ್ತಿತ್ತು. ಈ ನಡುವೆ ನೀ ಹೈ ಟಂಗ್ ಶೂ ತೊಟ್ಟಿದ್ದ ಅವರು ಕುತ್ತಿಗೆಗೆ ಕ್ಯೂಬನ್ ಚೈನ್ ತೊಟ್ಟಿದ್ದರು.