ಕರ್ನಾಟಕ

karnataka

By

Published : Mar 9, 2023, 3:31 PM IST

ETV Bharat / entertainment

ಸಾಂಪ್ರದಾಯಿಕ ಲುಕ್​ನಲ್ಲಿ ಸಿಂಹಪ್ರಿಯೆ.. ಅಭಿಮಾನಿಗಳಿಂದ ಮೆಚ್ಚುಗೆಯ ಮಳೆ

ಸ್ಯಾಂಡಲ್​ವುಡ್​ ನಟಿ ಹರಿಪ್ರಿಯಾ ಸಾಂಪ್ರದಾಯಿಕ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ವಿಡಿಯೋವೊಂದನ್ನು ಶೇರ್​ ಮಾಡಿರುವ ಅವರು, ಮಹಿಳಾ ದಿನಾಚರಣೆ ಮತ್ತು ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ.

haripriya
ಹರಿಪ್ರಿಯಾ

ನೀರ್​ದೋಸೆ ಬೆಡಗಿ ಹರಿಪ್ರಿಯಾ ಅವರು ನಟ ವಸಿಷ್ಠ ಸಿಂಹ ಜೊತೆ ಕೆಲ ದಿನಗಳ ಹಿಂದಷ್ಟೇ ಸಪ್ತಪದಿ ತುಳಿದಿದ್ದಾರೆ. ವೈವಾಹಿಕ ಜೀವನ ಆರಂಭಿಸಿರುವ ನಟಿ ಅಭಿಮಾನಿಗಳ ಜೊತೆ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸಂಪರ್ಕದಲ್ಲಿದ್ದಾರೆ. ನಿನ್ನೆಯಷ್ಟೇ ಹರಿಪ್ರಿಯಾ ಇನ್​ಸ್ಟಾಗ್ರಾಮ್​ನಲ್ಲಿ ವಿಡಿಯೋವೊಂದನ್ನು ಪೋಸ್ಟ್​ ಮಾಡಿದ್ದು, ಮಹಿಳಾ ದಿನಾಚರಣೆ ಮತ್ತು ಹೋಳಿ ಹಬ್ಬದ ಶುಭಾಶಯಗಳನ್ನು ಕೋರಿದ್ದಾರೆ. ಈ ವಿಡಿಯೋಗೆ ಅಭಿಮಾನಿಗಳು ಕಮೆಂಟ್​ಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಜೊತೆಗೆ ತಮ್ಮ ನೆಚ್ಚಿನ ನಟಿಗೆ ಪ್ರತಿಯಾಗಿ ವಿಶ್​ ಮಾಡಿದ್ದಾರೆ.

ವಿಡಿಯೋದಲ್ಲಿ ಹರಿಪ್ರಿಯಾ ಸೀರೆ ಉಟ್ಟು ಸಾಂಪ್ರದಾಯಿಕ ಲುಕ್​ನಲ್ಲಿ ತುಂಬಾ ಮುದ್ದಾಗಿ ಕಾಣುತ್ತಿದ್ದಾರೆ. ಫ್ಯಾನ್ಸ್​ಗಳು 'ಗಾರ್ಜಿಯಸ್'​ ಎಂಬುದಾಗಿ ಕಮೆಂಟ್​ ಮಾಡುತ್ತಿದ್ದು, ನಟಿಯ ಅಂದವನ್ನು ಹೊಗಳುತ್ತಿದ್ದಾರೆ. ಜೊತೆಗೆ ಕೆಂಪು ಹೃದಯದ ಎಮೋಜಿಯನ್ನು ಕಳುಹಿಸುತ್ತಿದ್ದಾರೆ. ಸೀತಾ ಮಾತೆ, ವಂಡರ್​ಫುಲ್​ ವುಮೆನ್​ ಎಂದೆಲ್ಲಾ ಹರಿಪ್ರಿಯಾರನ್ನು ಅಭಿಮಾನಿಗಳು ಸಂಬೋಧಿಸುತ್ತಿದ್ದಾರೆ.

ಇದನ್ನೂ ಓದಿ:ಶರಿಯತ್ ಕಾನೂನು ಬಿಕ್ಕಟ್ಟಿಗೆ ಪರಿಹಾರ: ಹೆಣ್ಣು ಮಕ್ಕಳ ಭವಿಷ್ಯಕ್ಕಾಗಿ 28 ವರ್ಷಗಳ ನಂತರ ಮರು ಮದುವೆಯಾದ ಸಿನಿಮಾ ನಟ

ಪ್ರೀತಿಸಿ ಮದುವೆಯಾದ ಸಿಂಹಪ್ರಿಯಾ: ಪ್ರೀತಿಸಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ ಜೋಡಿಗಳ ಸಾಲಿಗೆ ನಟಿ ಹರಿಪ್ರಿಯಾ ಮತ್ತು ನಟ ವಸಿಷ್ಠ ಸಿಂಹ ಸೇರಿದ್ದಾರೆ. ಜನವರಿ 26 ರಂದು ಸ್ಯಾಂಡಲ್​ವುಡ್​ ಲವ್​ ಬರ್ಡ್ಸ್​ಗಳಾಗಿ ಗುರುತಿಸಿಕೊಂಡಿದ್ದ ಬಹುಬೇಡಿಕೆ ತಾರಾ ಜೋಡಿ ಹಸೆಮಣೆ ಏರಿದ್ದರು. ಮೂರು ವರ್ಷಗಳ ಪ್ರೀತಿಗೆ ಮದುವೆ ಎಂಬ ಮುದ್ರೆ ಒತ್ತಿದರು. ಕಳೆದ ಮೂರು ವರ್ಷಗಳಿಂದ ಡೇಟಿಂಗ್​ನಲ್ಲಿದ್ದ ಈ ಜೋಡಿ ಎಲ್ಲಿಯೂ ಗುಟ್ಟು ಬಿಟ್ಟುಕೊಟ್ಟಿರಲಿಲ್ಲ. ಕಳೆದ ಡಿಸೆಂಬರ್​ ತಿಂಗಳವರೆಗೆ ಜೊತೆಯಾಗಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ.

ಅಲ್ಲದೇ ಇವರಿಬ್ಬರು ಮದುವೆಯಾಗಬಹುದು ಎಂದು ಯಾರೂ ಕೂಡ ಊಹಿಸಿರಲಿಲ್ಲ. ಆದರೆ, ನಾಲ್ಕು ತಿಂಗಳ ಹಿಂದೆ ಇವರಿಬ್ಬರು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸಖತ್​ ಸುದ್ದಿ ಮಾಡಿತ್ತು. ದುಬೈ ಪ್ರವಾಸ ಮುಗಿಸಿ ಇಬ್ಬರು ಜೊತೆಯಾಗಿ ಕೈ ಕೈ ಹಿಡಿದುಕೊಂಡು ಮಾಧ್ಯಮದ ಮುಂದೆ ಕಾಣಿಸಿಕೊಂಡಿದ್ದರು. ಇವರಿಬ್ಬರ ಏರ್​ಪೋರ್ಟ್​ ಫೋಟೋ ಸಖತ್​ ವೈರಲ್​ ಆಗಿತ್ತು. ಬಳಿಕ ಕುಟುಂಬಸ್ಥರ ಸಮ್ಮುಖದಲ್ಲಿ ಗೌಪ್ಯವಾಗಿ ನಿಶ್ಚಿತಾರ್ಥ ಕೂಡ ಮಾಡಿಕೊಂಡಿದ್ದರು.

ಇದನ್ನೂ ಓದಿ:"ವಾವ್, ಫ್ಯಾಬ್​ ಲುಕ್"- 'ಮ್ಯಾನ್​' ಮೋಷನ್​ ಪೋಸ್ಟರ್ ಹಂಚಿಕೊಂಡ ನಟಿ ಹನ್ಸಿಕಾ

ಅಲ್ಲದೇ ಸಿಂಹಪ್ರಿಯಾ ತಮ್ಮ ನಿಶ್ಚಿತಾರ್ಥದ ಫೋಟೋ ಮತ್ತು ಪ್ರೀತಿಯ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಹಂಚಿಕೊಂಡು ಸ್ವತಃ ಅವರೇ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದರು. ನಾವು ಪ್ರೀತಿಸುತ್ತಿದ್ದೆವು, ಈಗ ಮನೆಯವರ ಒಪ್ಪಿಗೆಯಂತೆ ಅರೇಂಜ್​ ಮ್ಯಾರೇಜ್​ ಆಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಕೊನೆಗೂ ಜನವರಿ 26 ರಂದು ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಮದುವೆ ನಡೆದಿದ್ದು, ಆರತಕ್ಷತೆ ಕಾರ್ಯಕ್ರಮ ಬೆಂಗಳೂರಿನಲ್ಲಿ ಅದ್ದೂರಿಯಾಗಿ ನೆರವೇರಿತು. ಆತ್ಮೀಯರು, ಕುಟುಂಬಸ್ಥರು, ಸೆಲೆಬ್ರಿಟಿಗಳು ಮದುವೆ ಫಂಕ್ಷನ್​ನಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ:ಕೆಜಿಎಫ್ ಚಾಪ್ಟರ್ 2 ದಾಖಲೆ ಸರಿಗಟ್ಟಲಿದೆ ಕಬ್ಜ ಸಿನಿಮಾ ಬಿಡುಗಡೆ.. 4000 ಚಿತ್ರಮಂದಿರಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಸಂಭವ

ABOUT THE AUTHOR

...view details