ಕರ್ನಾಟಕ

karnataka

ETV Bharat / entertainment

'777 ಚಾರ್ಲಿ' ಟ್ರೈಲರ್ ಬಿಡುಗಡೆ: ಸಿನೆಮಾ ಬಗ್ಗೆ ಸಿಂಪಲ್​ ಸ್ಟಾರ್ ರಕ್ಷಿತ್​ ಹೇಳಿದ್ದೇನು?

ಮನುಷ್ಯ ಹಾಗೂ ಶ್ವಾನದ ನಡುವಿನ ಬಾಂಧವ್ಯದ ಕಥೆ ಒಳಗೊಂಡಿರುವ '777 ಚಾರ್ಲಿ' ಸಿನಿಮಾದಲ್ಲಿ ಧರ್ಮ (ರಕ್ಷಿತ್ ಶೆಟ್ಟಿ) ಮತ್ತು ಚಾರ್ಲಿ ಎಂಬ ಶ್ವಾನದ ಕಾಂಬಿನೇಷನ್ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಒಬ್ಬ ಮನುಷ್ಯನ ಬಾಳಲ್ಲಿ ಚಾರ್ಲಿ ಎಂಬ ನಾಯಿಯ ಆಗಮನದಿಂದ ಏನೆಲ್ಲಾ ಆಗುತ್ತೆ ಎಂಬುದು ಚಿತ್ರದ ಕಥೆಯಾಗಿದೆ.

By

Published : May 16, 2022, 5:58 PM IST

777-charlie-movie-trailer-releases
'777 ಚಾರ್ಲಿ' ಟ್ರೈಲರ್ ಬಿಡುಗಡೆ: ಸಿನೆಮಾ ಬಗ್ಗೆ ಸಿಂಪಲ್​ ಸ್ಟಾರ್​ ಹೇಳಿದ್ದೇನು?

ಟೀಸರ್, ಪೋಸ್ಟರ್​​ಗಳಿಂದಲೇ, ಕನ್ನಡ ಚಿತ್ರರಂಗವಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ, ಕ್ರೇಜ್ ಹುಟ್ಟಿಸಿರುವ ಸಿನಿಮಾ '777 ಚಾರ್ಲಿ'. ಅವನೇ ಶ್ರೀಮನ್ನಾರಾಯಣ ಚಿತ್ರದ ಬಳಿಕ ರಕ್ಷಿತ್ ಶೆಟ್ಟಿ, ಅಭಿನಯದ ಬಹುನಿರೀಕ್ಷಿತ ಚಿತ್ರ ಇದಾಗಿದ್ದು, ಇಂದು ಮಧ್ಯಾಹ್ನ 12.45ಕ್ಕೆ ಕನ್ನಡ, ತೆಲುಗು, ತಮಿಳು ಮಲೆಯಾಳಂ ಹಾಗೂ ಹಿಂದಿಯಲ್ಲಿ ಟ್ರೈಲರ್ ಬಿಡುಗಡೆ ಆಗಿದೆ.

ಚಿತ್ರದ ಕನ್ನಡ ಟ್ರೈಲರ್ ಅನ್ನು ಈ ಚಿತ್ರದಲ್ಲಿರುವ ಚಾರ್ಲಿ ಶ್ವಾನ ತನ್ನದೇ ಮಾತಿನಲ್ಲಿ​​ ಲಾಂಚ್ ಅಂತಾ ಹೇಳುವ ಮೂಲಕ ಬಿಡುಗಡೆ ಮಾಡಿತು. ತೆಲುಗಿನಲ್ಲಿ ವಿಕ್ಟರಿ ವೆಂಕಟೇಶ್, ಸಾಯಿ ಪಲ್ಲವಿ, ತಮಿಳಿನಲ್ಲಿ ಧನುಷ್ ಹಾಗೂ ಮಲೆಯಾಳಂನಲ್ಲಿ ನಿವಿನ್ ಪೌಲ್​ ಸೋಷಿಯಲ್ ಮೀಡಿಯಾದಲ್ಲಿ ಅನಾವರಣ ಮಾಡಿದ್ದಾರೆ.

ಒಬ್ಬ ಮನುಷ್ಯ ಹಾಗೂ ಶ್ವಾನದ ನಡುವಿನ ಬಾಂಧವ್ಯದ ಕಥೆ ಒಳಗೊಂಡಿರುವ '777 ಚಾರ್ಲಿ' ಸಿನಿಮಾದಲ್ಲಿ ಧರ್ಮ (ರಕ್ಷಿತ್ ಶೆಟ್ಟಿ) ಮತ್ತು ಚಾರ್ಲಿ ಎಂಬ ಶ್ವಾನದ ಕಾಂಬಿನೇಷನ್ ಬಹಳ ಅದ್ಭುತವಾಗಿ ಮೂಡಿ ಬಂದಿದೆ. ಒಬ್ಬ ಮನುಷ್ಯನ ಬಾಳಲ್ಲಿ ಚಾರ್ಲಿ ಎಂಬ ನಾಯಿಯ ಆಗಮನದಿಂದ ಏನೆಲ್ಲಾ ಆಗುತ್ತೆ ಎಂಬುದು ಚಿತ್ರದ ಕಥೆಯಾಗಿದೆ. ಈ ಚಿತ್ರದಲ್ಲಿ ಬರುವ ರಕ್ಷಿತ್ ಶೆಟ್ಟಿ, ಸಂಗೀತಾ ಶೃಂಗೇರಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ರಾಜ್‌ ಬಿ ಶೆಟ್ಟಿ, ಡ್ಯಾನಿ, ಬಾಬಿ ಸಿಂಹ, ಬೇಬಿ ಶಾರ್ವರಿ ಪಾತ್ರಗಳು ಸಖತ್ ನಿರೀಕ್ಷೆ ಹುಟ್ಟಿಸಿವೆ.

ಬಿಡುಗಡೆಗೂ ಮುಂಚೆ ಒಳ್ಳೆ ಬ್ಯುಸಿನೆಸ್: ಕಾರ್ಯಕ್ರಮದಲ್ಲಿ ಮೊದಲಿಗೆ ಮಾತನಾಡಿದ ನಟ ರಕ್ಷಿತ್ ಶೆಟ್ಟಿ, ಈ ಸಿನಿಮಾ ಆರಂಭ ಆಗುವುದಕ್ಕೆ ನಿರ್ಮಾಪಕರಾದ ಜಿ.ಎಸ್ ಗುಪ್ತ ಹಾಗೂ ಪರಮ್ ಸ್ಟುಡಿಯೋ ಲಾಂಚ್ ವೇಳೆ ಪುನೀತ್ ರಾಜ್‍ಕುಮಾರ್ ಸರ್ ಬಂದು ಅನಾವರಣ ಮಾಡಿದ್ದರು. ಅಲ್ಲಿಂದ 777 ಚಾರ್ಲಿ ಸಿನಿಮಾ ಆರಂಭವಾಯಿತು.

ಈ ಸಿನಿಮಾದ ಪಯಣದ ಎಲ್ಲವನ್ನೂ ಹೇಳಲು ಆಗುವುದಿಲ್ಲ. ಯಾಕೆಂದರೆ ಅಷ್ಟೊಂದು ಎಮೋಷನ್ಸ್​ ಈ ಚಿತ್ರದಲ್ಲಿದೆ. ಸಿನಿಮಾ ಬಿಡುಗಡೆಗೂ ಮುಂಚೆ ಒಳ್ಳೆಯ ಬ್ಯುಸಿನೆಸ್ ಆಗಿದೆ, ಹೀಗಾಗಿ ನಾವು ನಿರಾತಂಕವಾಗಿದ್ದೇವೆ. ಈ ಸಿನಿಮಾ ನೋಡಿದ ಎಲ್ಲರೂ ತಮ್ಮ ಮನೆಯಲ್ಲೂ ಚಾರ್ಲಿ ತರಹದ ಶ್ವಾನ ಬೇಕು ಅಂತಾರೆ ಎಂದು ಹೇಳಿದರು.

ನಿರ್ದೇಶಕ ಕಿರಣ್ ರಾಜ್ ಕೆ. ಮಾತನಾಡಿ, ಸಿನೆಮಾದ 5 ವರ್ಷದ ಜರ್ನಿ ಬಗ್ಗೆ ಮೆಲುಕು ಹಾಕಿದರು. ಚಿತ್ರದ ಆರಂಭಕ್ಕೆ ಹಾಗೂ ಇಂದು ಇಲ್ಲಿ ವೇದಿಕೆ ಮೇಲೆ ಕುಳಿತಿರುವುದಕ್ಕೆ ಮುಖ್ಯ ಕಾರಣ ರಕ್ಷಿತ್ ಸರ್. ನಾನು ಎಷ್ಟು ಸಿನಿಮಾ ಮಾಡಿದರೂ, ನನ್ನ‌ ಜೀವನದಲ್ಲಿ ರಕ್ಷಿತ್ ಸರ್​ ಮರೆಯಲು ಆಗುವುದಿಲ್ಲ ಎಂದು ಸಿಂಪಲ್​ ಸ್ಟಾರ್​ ಬಗ್ಗೆ ಹೊಗಳಿದರು.

ಚಿತ್ರದಲ್ಲಿ ಶ್ವಾನದ ಡಾಕ್ಟರ್ ಪಾತ್ರ ಮಾಡಿರುವ ರಾಜ್ ಬಿ ಶೆಟ್ಟಿ ಮಾತನಾಡಿ, ರಕ್ಷಿತ್ ಹಾಗೂ ಕಿರಣ್ ರಾಜ್ ಇಬ್ಬರೂ ಹುಚ್ಚರು, ಅವರು ಗೆಲ್ಲಬೇಕು ಎಂದರು. ಈ ಸಿನಿಮಾದಲ್ಲಿ ನನಗೆ ಅವಕಾಶ ಲಭಿಸಿರುವುದೇ ದೊಡ್ಡದು ಎಂದು ರಕ್ಷಿತ್ ಜೊತೆ ಸ್ಕ್ರೀನ್ ಹಂಚಿಕೊಂಡಿರುವ ಸಂಗೀತಾ ಶೃಂಗೇರಿ ಹೇಳಿದರು.

ರಕ್ಷಿತ್ - ರಮ್ಯಾ ಮದುವೆ ವಿಚಾರ:ಚಿತ್ರಕ್ಕೆ ಶುಭ ಹಾರೈಸಲು ಬಂದಿದ್ದ ನಟ, ನಿರ್ದೇಶಕ ರಿಷಭ್ ಶೆಟ್ಟಿ ಮಾತನಾಡಿ, ನಾನು ಹಾಗೂ ನನ್ನ ಹೆಂಡತಿ ಸಿನೆಮಾ ನೋಡಿದೆವು. ಬಹಳ ಎಮೋಷನಲ್ ಸಿನೆಮಾ, ಎಲ್ಲರಿಗೂ ಇಷ್ಟ ಆಗಲಿದೆ. ರಕ್ಷಿತ್ ಶೆಟ್ಟಿ ರಮ್ಯಾರನ್ನು ಮದುವೆ ಆಗಲಿದ್ದಾರೆ ಎಂಬ ಸುದ್ದಿ ನಿಜಕ್ಕೂ ಸುಳ್ಳು. ಈ ಚಿತ್ರಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.

777 ಚಾರ್ಲಿಗೆ ರಿಷಭ್ ಶೆಟ್ಟಿ ಜೊತೆ ಈ ಹಿಂದೆ ಸಹಾಯ ನಿರ್ದೇಶಕನಾಗಿ ಕೆಲಸ ಮಾಡಿರುವ ಯುವ ನಿರ್ದೇಶಕ ಕಿರಣ್‌ ರಾಜ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ‌ ಮಾಡಿದ್ದಾರೆ. ನೊಬಿನ್ ಪೌಲ್ ಸಂಗೀತವಿದ್ದು, ಅರವಿಂದ್ ಕಶ್ಯಪ್ ಛಾಯಾಗ್ರಹಣವಿದೆ. ಪರಮ್ ಸ್ಟುಡಿಯೋಸ್​​ನಲ್ಲಿ ಜಿ‌.ಎಸ್ ಗುಪ್ತಾ ಹಾಗೂ ರಕ್ಷಿತ್ ಶೆಟ್ಟಿ ಈ ಸಿನಿಮಾ ನಿರ್ಮಿಸಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿಯಲ್ಲಿ ಜೂನ್ 10ಕ್ಕೆ ವಿಶ್ವಾದ್ಯಂತ ತೆರೆ ಕಾಣುತ್ತಿದೆ.

ಇದನ್ನೂ ಓದಿ: ಬಹುಕೋಟಿ ವೆಚ್ಚದ ಈ ಸಿನಿಮಾ ಕಥೆ ನಾನೇ ಹುಡುಕಿದ್ದು: ನೀನಾಸಂ ಸತೀಶ್

ABOUT THE AUTHOR

...view details