ಕರ್ನಾಟಕ

karnataka

ETV Bharat / elections

ಮೋದಿ ಮತ್ತು ಪಾಕ್ ನಡುವಿನ ಒಳ ಒಪ್ಪಂದ ಏನು? ಸಿದ್ದರಾಮಯ್ಯ ಪ್ರಶ್ನೆ - kannada news

ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಎಂಬ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆಯ ವಿರುದ್ಧ ಮಾಜಿ ಸಿ.ಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ಮಾಜಿ ಸಿ.ಎಂ ಸಿದ್ದರಾಮಯ್ಯ

By

Published : Apr 11, 2019, 5:02 PM IST

Updated : Apr 11, 2019, 5:08 PM IST


ಚಿಕ್ಕಮಗಳೂರು: ಪಾಕ್ ಪ್ರಧಾನಿ ಜೊತೆ ಮೋದಿ ಒಳಒಪ್ಪಂದ ಏನು? ಈ ಒಪ್ಪಂದ ಎಲ್ಲರಿಗೂ ಗೊತ್ತಾಗಬೇಕಿದೆ ಎಂದು ಮಾಜಿ ಸಿ.ಎಂ ಸಿದ್ದರಾಮಯ್ಯ ಮೋದಿಯವರನ್ನು ಪ್ರಶ್ನಿಸಿದ್ದಾರೆ.

ಕಡೂರಿನಲ್ಲಿ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪರ ಮತಯಾಚನೆ ವೇಳೆ ಮಾತನಾಡಿದ ಅವರು,ಮೊದಿ ಮತ್ತೊಮ್ಮೆ ಪಿಎಂ ಆಗಬೇಕು ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಬಯಸಿದ್ದಾರೆ. ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್ ಇದ್ದಾಗ ಮೋದಿ ಅಲ್ಲಿಗೆ ಹೋಗಿ ಬಿರಿಯಾನಿ ತಿಂದು ಬಂದಿದ್ದರು. ಪಾಕ್ ಪ್ರಧಾನಿ ಜೊತೆ ಮೋದಿ ಒಳ ಒಪ್ಪಂದ ಏನು? ಬಿಜೆಪಿಯವರಿಗೆ ಚುನಾವಣಾ ಸಮಯದಲ್ಲಷ್ಟೆ ದೇಶ ಭಕ್ತಿ ಉಕ್ಕುತ್ತದೆ ಎಂದು ವರು ವ್ಯಂಗ್ಯವಾಡಿದರು.

ಮಾಜಿ ಸಿ.ಎಂ ಸಿದ್ದರಾಮಯ್ಯ

ಮೈಸೂರು, ಮಂಡ್ಯ, ಹಾಸನ, ತುಮಕೂರಲ್ಲೂ ನಾವು ಗೆಲ್ಲುತ್ತೇವೆ. ಕೋಪ ಮರೆತು ಎಲ್ಲರೂ ಗೆಲುವಿಗೆ ಹೋರಾಡಬೇಕು ಎಂದು ಅವರು ಮೈತ್ರಿ ಪಕ್ಷದ ಕಾರ್ಯಕರ್ತರಲ್ಲಿ ಮನವಿ ಮಾಡಿದರು.

ಇದೇ ವೇಳೆ ಎ.ಮಂಜು ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಅವನಿಗೆ ಒಂದು ಓಟು ಹಾಕಬೇಡಿ. ನಾನೇ ಅವನನ್ನು ಮಿನಿಸ್ಟರ್ ಮಾಡಿದೆ. ಈಗ ಕಳ್ಳೆತ್ತು ಬಿಜೆಪಿಗೆ ಹೋಗಿದ್ದಾನೆ. ಬಿಜೆಪಿಗೆ ಹೋಗುವ ಮೂರು ದಿನದ ಮುನ್ನ, ನನ್ನ ಹತ್ತಿರ ಮಾತಾಡಿ ಬಿಜೆಪಿಗೆ ಹೋಗಲ್ಲ ಅಂದಿದ್ದ. ಆದರೆ ಪಕ್ಷಕ್ಕೆ ದ್ರೋಹ ಮಾಡಿ ಈಗ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾನೆ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು.

Last Updated : Apr 11, 2019, 5:08 PM IST

ABOUT THE AUTHOR

...view details