ಕರ್ನಾಟಕ

karnataka

ETV Bharat / elections

ಅಪ್ಪ ಮಕ್ಕಳ ಬಳಿಕ, ಮೊಮ್ಮಕ್ಕಳ ಕಾಟ ಶುರು: ಬಿ.ಎಸ್.ವೈ ಗುಡುಗು - sumalatha ambrish

ಮಾಧ್ಯಮಗಳ ಮೇಲೆ ಹಲ್ಲೆ ನಡೆದರೆ ನಾವು ಜವಾಬ್ದಾರರಲ್ಲ ಎಂಬ ಮಾತಿಗೆ ಸಿಎಂ ರಾಜ್ಯದ ಜನರ ಕ್ಷಮೆ ಕೇಳಬೇಕೆಂದು ಬಿಎಸ್‌ ಯಡಿಯೂರಪ್ಪ ಆಗ್ರಹಿಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ

By

Published : Apr 11, 2019, 10:22 PM IST

ಹುಬ್ಬಳ್ಳಿ : ಕುಮಾರಸ್ವಾಮಿಯವರೇ, ನಿಮ್ಮ ಗುಂಡಾಗಿರಿ ಆಡಳಿತ ಬಹಳ ದಿನ ನಡೆಯಲ್ಲ ಎಂದು ಬಿ.ಎಸ್ ಯಡಿಯೂರಪ್ಪ ಸಿಎಂ ವಿರುದ್ಧ ಗುಡುಗಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ

ನಗರದ ಗಾಮನಗಟ್ಟಿಯಲ್ಲಿ ಪ್ರಹ್ಲಾದ್ ಜೋಶಿ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಮಾಧ್ಯಮಗಳು ಸುಮಲತಾ ಬಗ್ಗೆ ಹೆಚ್ಚಿಗೆ ಪ್ರಚಾರ ಕೊಡುತ್ತಿವೆ. ಮಾಧ್ಯಮದವರ ಮೇಲೆ ಹಲ್ಲೆ ನಡೆದರೆ ನಾವು ‌ಜವಾಬ್ದಾರರಲ್ಲ ಎಂಬ ಸಿಎಂ.ಕುಮಾರಸ್ವಾಮಿಯವರ ಮಾತಿಗೆ ಆಕ್ರೋಶ ವ್ಯಕ್ತಪಡಿಸಿದರು. ನಿಮ್ಮ ಗುಂಡಾಗಿರಿ ಬಹಳ ದಿನ ನಡೆಯಲ್ಲ. ಸಿಎಂ ಕುಮಾರಸ್ವಾಮಿ ಕೂಡಲೇ ರಾಜ್ಯದ ಜನರ ಕ್ಷೆಮೆ ಕೇಳಬೇಕು. ಇಷ್ಟು ದಿನ ಅಪ್ಪ ಮಕ್ಕಳ ಕಾಟ, ಇವಾಗ ಮೊಮ್ಮಕ್ಕಳ ಕಾಟ ಶುರುವಾಗಿದೆ ಎಂದು ಸಿಎಂ ಹೆಚ್‌ಡಿಕೆ, ನಿಖಿಲ್‌ ವಿರುದ್ದ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಮತಬೇಟೆ ಮರೆಯದ ಅವರು, ಬಿಜೆಪಿ ಪಕ್ಷಕ್ಕೆ ಮತ ಹಾಕಿಸುವ ಜವಾಬ್ದಾರಿ ನಿಮ್ಮದೆಂದು ಕಾರ್ಯಕರ್ತರಿಗೆ ಕಿವಿ‌ ಮಾತು ಹೇಳಿದರು.

ರಾಜ್ಯದೆಲ್ಲೆಡೆ ಬಿಜೆಪಿ ಅಲೆ ಇದೆ. ಮತದಾರರಿಗೆ ನಮ್ಮ ಸಾಧನೆಯನ್ನು ಮನವರಿಕೆ ಮಾಡಿ ಮತ ಹಾಕಿಸಿ ಎಂದು ಬಿ.ಎಸ್ ಯಡಿಯೂರಪ್ಪ ಈ ಸಂದರ್ಭ ಹೇಳಿದರು.

ABOUT THE AUTHOR

...view details