ಕರ್ನಾಟಕ

karnataka

ETV Bharat / elections

ಬಿಸಿಲ ನಗರಿಯಲ್ಲಿ ಕೈ ಭದ್ರಕೋಟೆ ಛಿದ್ರ ಛಿದ್ರ

ಕೈ ಪಡೆಯ ಭದ್ರಕೋಟೆ ಎಂದೇ ಬಿಂಬಿತವಾಗಿರುವ ರಾಯಚೂರು ಲೋಕಸಭೆ ಕ್ಷೇತ್ರ ಬಿಜೆಪಿಗೆ ಒಲಿದಿದೆ. ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ವಿರುದ್ದ ಬಿಜೆಪಿಯ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಜಯಭೇರಿ ಬಾರಿಸಿ, ಕೈ ಕೋಟೆಯನ್ನ ಛಿದ್ರಗೊಳಿಸಿ, ಕೈ ಕೋಟೆಯಲ್ಲಿ ಕಮಲದ ಬಾವುಟ ಹರಿಸುವಲ್ಲಿ ಸಫಲವಾಗಿದ್ದಾರೆ.

By

Published : May 23, 2019, 8:10 PM IST

Updated : May 23, 2019, 8:54 PM IST

ಕೈ ಭದ್ರಕೋಟೆ ಛೀದ್ರ ಛೀದ್ರ

ರಾಯಚೂರು: ಜಿಲ್ಲೆಯಲ್ಲಿ ಕಳೆದ ಬಾರಿ ಹೀನಾಯ ಸೋಲು ಕಂಡಿದ ಬಿಜೆಪಿ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿ, ಸೋಲಿನ ಸೇಡು ತೀರಿಸಿಕೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅಬ್ಬರದ ಅಲೆಗೆ ಮಣಿದ ಕಾಂಗ್ರೆಸ್ ನ ಅಭ್ಯರ್ಥಿ ಸೋಲಿನ ಕಹಿ ಅನುಭವಿಸಿದ್ದಾರೆ.

ಕೈ ಭದ್ರಕೋಟೆ ಛಿದ್ರ ಛಿದ್ರ

ಕೈ ಪಡೆಯ ಭದ್ರಕೋಟೆ ಎಂದೇ ಬಿಂಬಿತವಾಗಿರುವ ರಾಯಚೂರು ಲೋಕಸಭೆ ಕ್ಷೇತ್ರ ಬಿಜೆಪಿಗೆ ಒಲಿದಿದೆ. ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ವಿರುದ್ದ ಬಿಜೆಪಿಯ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಜಯಭೇರಿ ಬಾರಿಸಿ, ಕೈ ಕೋಟೆಯನ್ನ ಛಿದ್ರಗೊಳಿಸಿ, ಕೈ ಕೋಟೆಯಲ್ಲಿ ಕಮಲದ ಬಾವುಟ ಹರಿಸುವಲ್ಲಿ ಸಫಲವಾಗಿದೆ. ಜೆಡಿಎಸ್-ಕಾಂಗ್ರೆಸ್ ನ ಮೈತ್ರಿ ಪಕ್ಷದ ಪ್ರಬಲ ಪೈಪೂಟಿ ಮಧ್ಯೆಯು ಬಿಜೆಪಿ ತನ್ನ ಅಭ್ಯರ್ಥಿಯನ್ನ ಗೆಲ್ಲಿಸಿಕೊಳ್ಳಲು ಯಶ್ವಸಿಯಾಗಿ ಕೈ ಪಡೆಗೆ ಭಾರಿ ಮುಖಭಂಗವನ್ನ ಮಾಡಿದೆ.

ಇನ್ನು ಕಳೆದ ಬಾರಿ ಮೋದಿಯ ಅಲೆಯಲ್ಲಿ ಕೇವಲ 1499 ಮತಗಳ ಅಂತರದಿಂದ ಕೆ.ಶಿವನಗೌಡನಾಯಕ ಸೋಲು ಅನುಭವಿಸಿದ್ರು. ಆದ್ರೆ ಈ ಬಾರಿ ಮೋದಿಯ ಅಲೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸುವ ಮೂಲಕ ಕಳೆದ ಲೋಕಸಭೆ ಚುನಾವಣೆ ಹೀನಾಯ ಸೋಲಿನ ಸೇಡನ್ನ ತೀರಿಸಿಕೊಳ್ಳುವಲ್ಲಿ ಸಫಲಗೊಂಡಿದೆ. ರಾಜಕೀಯ ವಿಶ್ಲೇಷಕರು ಸಹ ಕಳೆದ ಬಾರಿ ಆಯ್ಕೆಯಾಗಿದ ಕಾಂಗ್ರೆಸ್ ಅಭ್ಯರ್ಥಿ ಬಿ.ವಿ.ನಾಯಕ ಕೇವಲ ಒಳ್ಳೆತನ ಹೊರತು ಪಡಿಸಿದ್ದಾರೆ. ಉಳಿದ ಕ್ಷೇತ್ರದಲ್ಲಿ ನಿರೀಕ್ಷೆಗೆ ತಕ್ಕಂತೆ ಅಭಿವೃದ್ದಿ ಕಾರ್ಯ ಮಾಡದೆ ಇರುವುದು, ಜಿಲ್ಲೆಯ ಕಾಂಗ್ರೆಸ್ ಪಕ್ಷದ ಬಣ ರಾಜಕೀಯ, ಸ್ಥಳೀಯ ನಾಯಕರ ಮನಸ್ತಾಪ ಸೋಲಿಗೆ ಕಾರಣವಾಗಿ ಬಿಜೆಪಿ ಅಭ್ಯರ್ಥಿಗೆ ವರವಾಗಿ ಪರಿಣಮಿಸಿತು.

ಒಟ್ಟಿನಲ್ಲಿ ಜಿದ್ದಾಜಿದ್ದಿನ ಕಣವಾಗಿದ್ದ ರಾಯಚೂರು ಲೋಕಸಭೆ ಕ್ಷೇತ್ರ ದಲ್ಲಿ ಪ್ರತಿಬಾರಿ ಕಾಂಗ್ರೆಸ್​ಗೆ ಜೈ ಎನ್ನುತ್ತಿದ್ದ ಮತದಾರ ಪ್ರಭು, ಈ ಬಾರಿ ಬಿಜೆಪಿಗೆ ಜೈ ಎಂದಿದ್ದಾರೆ.

Last Updated : May 23, 2019, 8:54 PM IST

For All Latest Updates

TAGGED:

ABOUT THE AUTHOR

...view details