ಕರ್ನಾಟಕ

karnataka

ETV Bharat / elections

ಅರ್ಚಕರ ಮನೇಲಿ ಐಟಿ ಅಧಿಕಾರಿಗಳಿಗೆ ದ್ರಾಕ್ಷಿ-ಗೋಡಂಬಿ ಸಿಕ್ಕಿರಬೇಕು: ರೇವಣ್ಣ ಲೇವಡಿ - hasana

ದೇವೇಗೌಡ್ರಿಗೆ ರಾಜಕೀಯ ಶಕ್ತಿ ನೀಡಿದಂತೆ ನನ್ನ ಮಗ ಪ್ರಜ್ವಲ್‌ಗೂ ಶಕ್ತಿ ನೀಡುವಂತೆ ಸಚಿವ ಹೆಚ್.ಡಿ.ರೇವಣ್ಣ ಪ್ರಚಾರ ಕಾರ್ಯಕ್ರಮದಲ್ಲಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ರೇವಣ್ಣ

By

Published : Apr 13, 2019, 5:43 AM IST

ಹಾಸನ: ಹರದನಹಳ್ಳಿ ಈಶ್ವರ ದೇವಾಲಯ ಅರ್ಚಕರ ಮನೆಯ ಮೇಲೆ ಐಟಿ ಅಧಿಕಾರಿಗಳಿಗೆ ದ್ರಾಕ್ಷಿ- ಗೋಡಂಬಿ ಸಿಕ್ಕಿರಬೇಕು ಎಂದು ಲೇವಡಿ ಮಾಡಿದ್ದಾರೆ.

ಅರ್ಚಕರ ಮನೆಯ ಮೇಲೆ ಐಟಿ ದಾಳಿ ಕುರಿತ ವಿಷಯಕ್ಕೆ ಸಂಬಂಧ ಪ್ರತಿಕ್ರಿಯಿಸಿದ ಅವರು, ಐಟಿ ದಾಳಿ ಮಾಡಲಿ ಬಿಡಿ. ಅವರ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಈಶ್ವರನ ಮೇಲಾದರೂ ಮಾಡಲಿ, ಅರ್ಚಕರ ಮೇಲಾದರೂ ರೇಡ್ ಮಾಡಲಿ. ಅರ್ಚಕರ ಮನೆಯಲ್ಲಿ ಏನು ಮಹಾ ಸಿಗುತ್ತೆ. ಗೋಡಂಬಿ ದ್ರಾಕ್ಷಿ ಸಿಕ್ಕಿರಬೇಕು ಅಷ್ಟೆ ಎಂದು ಅಪಹಾಸ್ಯ ಮಾಡಿದರು.

ಇದೆ ವೇಳೆ ನಿನ್ನೆ, ಹಾಸನದಲ್ಲಿ ಇದುವರೆಗೂ ಮಕ್ಕಳು ಸೊಸೆಯಂದಿರು ದೇವೇಗೌಡರಿಗೆ ಊಟ ಹಾಕಿಲ್ಲ ಎಂಬ ಎ.ಮಂಜು ಹೇಳಿಕೆಗೆ ಪ್ರತಿಕ್ರಿಯಿಸಿ,‌ ಅಯ್ಯೋ ಎ.ಮಂಜು ಮಾತಿಗೆಲ್ಲಾ ಉತ್ತರಿಸಿದ್ರೆ ನಾನು ಪಳ್ಳಾಗಬೇಕಾಗುತ್ತೆ. ಅವನನ್ನ ನೆಗ್ಲೆಕ್ಟ್ ಮಾಡಿ ಬಿಟ್ಟಿದ್ದೇನೆ. ನನ್ನ ಬಾಯಲ್ಲಿ ಅವರ ಹೆಸರು ಏಕೆ ಹೇಳಿಸ್ತೀರಾ? ನಮ್ಮ ಅಪ್ಪ-ಅಮ್ಮನ್ನ ಚೆನ್ನಾಗಿ ನೋಡ್ಕೊಳ್ಳೋದು ನಮಗೆ ಗೊತ್ತು. ಮೊದಲು ಅವರು ಅವರ ಅಪ್ಪ,ಅವ್ವನ್ ಸರಿಯಾಗಿ ನೋಡ್ಕೊಳ್ಳಿ ಎಂದು ಟಾಂಗ್ ನೀಡಿದರು.

ಹೆಚ್​ ಡಿ ರೇವಣ್ಣ

ಪ್ರಜ್ವಲ್ ರೇವಣ್ಣಗೂ ರಾಜಕೀಯ ಶಕ್ತಿ ಕೊಡಿ:

ದೇವೇಗೌಡ್ರಿಗೆ ರಾಜಕೀಯ ಶಕ್ತಿ ನೀಡಿದಂತೆ ನನ್ನ ಮಗ ಪ್ರಜ್ವಲ್‌ಗೂ ಶಕ್ತಿ ನೀಡುವಂತೆ ಸಚಿವ ಹೆಚ್.ಡಿ.ರೇವಣ್ಣ ಈ ವೇಳೆ ಸಾರ್ವಜನಿಕರಲ್ಲಿ ಮನವಿ ಮಾಡಿದರು.

ದೇವೆಗೌಡರ ಶಕ್ತಿ ದಂಡಿಗನಹಳ್ಳಿ ಹೋಬಳಿ. ಇಲ್ಲಿಗೆ ಅವಶ್ಯವಿರುವ ಕೆಲಸಗಳನ್ನೆಲ್ಲಾ‌ ಮಾಡಿದ್ದೇವೆ. ಇನ್ನೂ ಆಲಗೋಡನಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ತ್ವರಿತಗರಿಯಲ್ಲಿ ನಡೆಯುತ್ತಿದ್ದು, ಈಗಾಗಲೇ ಪೈಪುಗಳನ್ನು ಶೇಖರಿಸಲಾಗಿದೆ. ಹೋಬಳಿಯ ಎಲ್ಲಾ ಗ್ರಾಮಗಳಿಗೆ ನದಿ ಮೂಲದಿಂದ ಕುಡಿಯುವ ನೀರು ಸರಬರಾಜು ಯೋಜನೆಗೆ ಟೆಂಡರ್ ಕರೆಯಲಾಗಿದೆ. ಎಲ್ಲಾ ಹಳ್ಳಿಗಳಿಗೆ ಮೂಲ ಸೌಲಭ್ಯ ಕಲ್ಪಿಸಲಾಗಿದೆ. ಬಾಕಿ ಏನಾದರೂ ಕಾಮಗಾರಿ ಉಳಿದಿದ್ದರೆ ಚುನಾವಣೆ ನಂತರ ಪೂರೈಸುವೆ ಎಂದು ಭರವಸೆ ನೀಡಿದರು.

ABOUT THE AUTHOR

...view details