ಕರ್ನಾಟಕ

karnataka

ETV Bharat / elections

ಸಾಮಾಜಿಕ ಜಾಲತಾಣಗಳಲ್ಲಿನ ಪ್ರಚಾರ ಕೆಲಸಕ್ಕೆ ಬರಲ್ಲ, ಸೇವೆ ಮಾಡುವ 'ಕೈ'ಗೆ ಮತನೀಡಿ: ಡಿಕೆ ಸುರೇಶ್ ಮನವಿ

ಲೋಕಸಭೆ ಸಾರ್ವತ್ರಿಕ ಚುನಾವಣೆ ಹತ್ತಿರ ಬರುತ್ತಿದ್ದಂತೆ ಬಿಜೆಪಿ ಪರ ಸಾಮಾಜಿಕ ಜಾಲತಾಣದಲ್ಲಿ ಹಾಗು ಮಾಧ್ಯಮ ವಲಯದಲ್ಲಿ ಹರಿದಾಡುತ್ತಿರುವ ರಂಜಿತ ಪ್ರಚಾರಗಳೆಲ್ಲಾ ಸುಳ್ಳು,ಸುಳ್ಳು,ಸುಳ್ಳು, ಅವು ಕೆಲಸಕ್ಕೆ ಬರಲ್ಲ ಬದಲಾಗಿ ನಿಮ್ಮ ಕಣ್ಣ ಮುಂದೆ ಆಗುತ್ತಿರುವ ಕೆಲಸಗಳನ್ನು ನೋಡಿ 'ಕೈ'ಗೆ ಶಕ್ತಿ ತುಂಬಿ, ಬೆಂಗಳೂರು ಗ್ರಾಮಂತರ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿ ಮಾಡಿ ತೋರಿಸುತ್ತೇನೆ ಎಂದು ಡಿಕೆ ಸುರೇಶ್ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ.

By

Published : Apr 9, 2019, 5:57 AM IST

ಡಿಕೆ ಸುರೇಶ್

ಆನೇಕಲ್: ಚುನಾವಣೆ ಸಂಬಂಧ ಬಿಜೆಪಿ ಪರ ಸಾಮಾಜಿಕ ಜಾಲತಾಣ ಹಾಗು ಮಾಧ್ಯಮ ವಲಯದಲ್ಲಿ ಹರಿದಾಡುತ್ತಿರುವ ರಂಜಿತ ಪ್ರಚಾರಗಳೆಲ್ಲಾ ಸುಳ್ಳು,ಅವು ಕೆಲಸಕ್ಕೆ ಬರಲ್ಲ ಬದಲಾಗಿ ನಿಮ್ಮ ಮತವನ್ನು ಕಣ್ಣ ಮುಂದೆ ಆಗುತ್ತಿರುವ ಕೆಲಸಗಳನ್ನು ನೋಡಿ ನನಗೆ ಮತ ನೀಡಿ, ಈ ಕ್ಷೇತ್ರವನ್ನು ಮಾದರಿ ಕ್ಷೇತ್ರವಾಗಿಸಿತ್ತೇನೆ ಎಂದು ಬೆಂಗಳೂರು ಗ್ರಾಮಂತರ ಕ್ಷೇತ್ರದ ಕಾಂಗ್ರೆಸ್​ ಅಭ್ಯರ್ಥಿ ಡಿಕೆ ಸುರೇಶ್​ ಮತಯಾಚಿಸಿದರು.

ಬೆಂಗಳೂರು ದಕ್ಷಿಣದ ಬೇಗೂರಿನಲ್ಲಿ ರೋಡ್ ಶೋನಲ್ಲಿ ಭಾಗವಹಿಸಿ ಮತದಾರರಿಗೆ ಕೆಲ ಮಾಹಿತಿಗಳನ್ನು ಪ್ರಚಾರ ಮಾಡುತ್ತಾ, ಕಳೆದ 25 ವರ್ಷಗಳಿಂದ ಸತತ ಬಿಜೆಪಿಯನ್ನು ಕೈ ಹಿಡಿಯುತ್ತಾ ಬಂದಿದ್ದೀರಿ ಏನು ಅಭಿವೃದ್ದಿ ಮಾಡಿ ತೋರಿಸಿದ್ದಾರೆ. ಬರೀ ಸೋಂಬೇರಿಗಳಾಗಿ ವೈಯಕ್ತಿಕ ಬೆಳವಣಿಗೆಯಲ್ಲಿ ತೊಡಗಿದ್ದಾರೆಯಷ್ಟೇ. ಕಳೆದ ಮೂರು ವರ್ಷಗಳಲ್ಲಿ ವಾರ್ಡ್ ಮಟ್ಟದಲ್ಲಿ ರಸ್ತೆ, ಚರಂಡಿ ಮಾಡಿ ನಿಮ್ಮ ಕಣ್ಣ ಮುಂದೆ ಸಾಕ್ಷಿ ಗುಡ್ಡೆಗಳನ್ನ ಇಟ್ಟಿದ್ದೇನೆ. ಕೆಲ ಕಾಮಗಾರಿಗಳು ಪೂರ್ಣಗೊಂಡು ಮತ್ತೆ ಕೆಲವು ನಡೆಯುತ್ತಲಿವೆ. ಮತ್ತೂ ಕೆಲವು ಕಾಮಗಾರಿಗಳು ಆರಂಭವಾಗಬೇಕಿವೆ. ಇಂತಹ ಕಣ್ಣೆದುರಿನ ಕೆಲಸಗಳನ್ನು ನೋಡಿ ಮತ ನೀಡಿ ಎಂದು ಕೋರಿದರು.

ರೋಡ್​ ಶೋ ಮೂಲಕ ಮತಯಾಚನೆ ಮಾಡುತ್ತಿರುವ ಡಿಕೆ ಸುರೇಶ್​

ಬೇಗೂರು ಕೆರೆಯಲ್ಲು ಕೊಳಚೆ ನೀರು ತುಂಬಿಸಿ ಗಬ್ಬು ನಾರಿಸುತ್ತಿದ್ದ ಕೀರ್ತಿ ಬಿಜೆಪಿಗರದ್ದು. ಅದನ್ನ ಮನಗಂಡು 20ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ದಿಗೆ ಶ್ರಮಿಸುತ್ತಿದ್ದೇವೆ. ಇಂತಹ ಜನಪರ ಕೆಲಸಗಳು ಸಾಕಾರಗೊಳ್ಳಬೇಕಾದರೆ ಕಾಂಗ್ರೆಸ್ ನಿಂದ ಮಾತ್ರ ಸಾಧ‍್ಯ. ಹೀಗಾಗಿ ಮತ್ತೆ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಆಶೀರ್ವಾದ ಮಾಡಿ ಕಳುಹಿಸಿ ನಿಮ್ಮ ಸುತ್ತಲ ಪರಿಸರದ ಕೆಲಸ ನನಗೆ ಬಿಡಿ ಎಂದು ಮತದಾರರಿಗೆ ಮನವಿ ಮಾಡಿದರು.

ಬೇಗೂರು ವೃತ್ತದಲ್ಲಿ ಪಟಾಕಿ ಸಿಡಿಸಿ ತಮಟೆ ವಾದನ ಹಾಗು ಹೂ ಎರಚುವ ಮೂಲಕ ಕಾಂಗ್ರೆಸ್ ಕಾರ್ಯಕರ್ತರು ಡಿಕೆ ಸುರೇಶ್​ರನ್ನು ಬರಮಾಡಿಕೊಂಡು ಬೃಹತ್ ಸೇಬಿನ ಹಾರವನ್ನು ಹಾಕಿದರು. ಜೊತೆಯಲ್ಲಿ ಬೇಗೂರು ಕಾರ್ಪೊರೇಟರ್ ಆಂಜಿನಪ್ಪ ಎಂ ಹಾಗೂ ಶಾಸಕ ಸ್ಥಾನದ ಮಾಜಿ ಅಭ್ಯರ್ಥಿ ಆರ್ಕೆ ರಮೇಶ್ ರೋಡ್ ಶೋನಲ್ಲಿ ಭಾಗವಹಿಸಿದ್ದರು.

ABOUT THE AUTHOR

...view details