ಕರ್ನಾಟಕ

karnataka

ಕೇಂದ್ರ ಸಚಿವರ ಬಳಿ 15 ರೈಫಲ್ಸ್‌.. ರೋಲ್ಸ್‌ರಾಯ್ಸ್‌, ಪುಸ್ತಕಗಳೂ ರಾಜಸ್ಥಾನ ಅಭ್ಯರ್ಥಿಗಳ ಆಸ್ತಿ!

By

Published : Apr 17, 2019, 7:49 PM IST

Updated : Apr 17, 2019, 8:19 PM IST

ನಿನ್ನೆಯಷ್ಟೇ ಜೈಪುರ ಗ್ರಾಮೀಣ ಸಂಸತ್‌ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ 9 ಲಕ್ಷ ಮೌಲ್ಯದ 15 ರೈಫಲ್ಸ್‌ ಹೊಂದಿದ್ದಾರೆ. ವಿಶೇಷ ಅಂದ್ರೆ 10 ರೈಫಲ್‌ಗಳು ಸಚಿವರಿಗೆ ಉಡುಗೊರೆಯಾಗಿ ಬಂದಿವೆಯಂತೆ.

ರಾಜವರ್ಧನ್ ಸಿಂಗ್ ರಾಥೋಡ್

ರಾಜಸ್ಥಾನ: ರಾಜಸ್ಥಾನದಲ್ಲಿ ಲೋಕಸಭಾ ಚುನಾವಣೆ ಅಖಾಡಕ್ಕಿಳಿದ ವಿವಿಧ ಪಕ್ಷದ ಅಭ್ಯರ್ಥಿಗಳ ಘೋಷಿಸಿತ ಆಸ್ತಿಯಲ್ಲಿ ಅಚ್ಚರಿಯ ಅಂಶಗಳಿವೆ. ರೈಫಲ್ಸ್‌, ವಿಂಟೇಜ್‌ ರೋಲ್ಸ್‌ರಾಯ್ಸ್‌ ಕಾರುಗಳು, ಪೇಂಟಿಂಗ್ಸ್‌, ಕಲಾಕೃತಿಗಳು ಹಾಗೂ ಪುಸ್ತಕಗಳೂ ತಮ್ಮ ಆಸ್ತಿ ಎಂದು ಅಭ್ಯರ್ಥಿಗಳು ಘೋಷಿಸಿಕೊಂಡಿದ್ದಾರೆ.

ರಾಜವರ್ಧನ್ ಸಿಂಗ್ ರಾಥೋಡ್ ನಾಮಪತ್ರ ಸಲ್ಲಿಸಿದ ಕ್ಷಣ

ನಿನ್ನೆಯಷ್ಟೇ ಜೈಪುರ ಗ್ರಾಮೀಣ ಸಂಸತ್‌ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಕೇಂದ್ರ ಸಚಿವ ರಾಜವರ್ಧನ್ ಸಿಂಗ್ ರಾಥೋಡ್ 9 ಲಕ್ಷ ಮೌಲ್ಯದ 15 ರೈಫಲ್ಸ್‌ ಹೊಂದಿದ್ದಾರೆ. ವಿಶೇಷ ಅಂದ್ರೆ 10 ರೈಫಲ್‌ಗಳು ಸಚಿವರಿಗೆ ಉಡುಗೊರೆಯಾಗಿ ಬಂದಿವೆಯಂತೆ.

ಜೈಪುರದ ರಾಜಕುಮಾರಿ ದಿಯಾ ಕುಮಾರಿ ರಾಜಸಮಂದ್‌ ಕ್ಷೇತ್ರದಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದು, ಅವರ ಬಳಿ ₹ 64.89 ಲಕ್ಷ ಬೆಲೆಯ ಆಭರಣಗಳಿವೆಯಂತೆ. ಜಾಲ್ವಾರ್‌-ಬರನ್ ಸಂಸದ ದುಷ್ಯಂತ್‌ ಸಿಂಗ್‌ ಬಳಿ ಐದು ರೋಲ್ಸ್‌ರಾಯ್ಸ್‌ ವಿಂಟೇಜ್ ಕಾರುಗಳಿವೆ, ಪ್ರತಿ ಕಾರಿನ ಬೆಲೆ ₹ 3 ಲಕ್ಷ ಅಂತಾ ತಮ್ಮ ಅಫಿಡೆವಿಟ್‌ನಲ್ಲಿ ಅವರು ಘೋಷಿಸಿಕೊಂಡಿದ್ದಾರೆ.

ವಿಂಟೇಜ್​ ಕಾರುಗಳು

ಉದ್ಯಮಿ ರಿಜು ಜುಂಜುನ್‌ವಾಲಾ ಅಜ್ಮೇರ್‌ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ. ಜುಂಜುನ್‌ವಾಲಾ ತಮ್ಮ ಬಳಿ 16 ಲಕ್ಷ ರೂ. ಬೆಲೆಬಾಳುವ ಪೇಂಟಿಂಗ್ಸ್‌ ಮತ್ತು ಕಲಾಕೃತಿಗಳು ಇವೆ ಅಂತಾ ಘೋಷಿಸಿಕೊಂಡಿದ್ದಾರೆ. ಕೋಟಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಮ ನರೈನ್‌ ಮೀನಾ ಪುಸ್ತಕಗಳೂ ಕೂಡ ತಮ್ಮ ಆಸ್ತಿಯ ಒಂದು ಭಾಗ ಎಂದಿದ್ದಾರೆ. ಮೀನಾ ತಮ್ಮ ಬಳಿ 25 ಸಾವಿರ ಮೌಲ್ಯದ ಪುಸ್ತಕಗಳಿವೆ ಅಂತ ಅಫಿಡೆವಿಟ್‌ನಲ್ಲಿ ಘೋಷಿಸಿದ್ದಾರೆ.

Last Updated : Apr 17, 2019, 8:19 PM IST

ABOUT THE AUTHOR

...view details