ETV Bharat / assembly-elections

ತೆಲಂಗಾಣ ವಿಧಾನಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪ್ರಕಾಶ್ ರಾಜ್‌ ಹೇಳಿದ್ದೇನು? - ಭಾರತ್ ರಾಷ್ಟ್ರ ಸಮಿತಿ

Prakash Raj reaction about Telangana assembly elections: ತೆಲಂಗಾಣ ವಿಧಾನಸಭಾ ಚುನಾವಣೆಯ ಗೆಲುವು ದಾಖಲಿಸಿದ ಕಾಂಗ್ರೆಸ್ ಪಕ್ಷಕ್ಕೆ ನಟ ಪ್ರಕಾಶ್ ರಾಜ್‌ ಶುಭಾಶಯ ತಿಳಿಸಿದ್ದಾರೆ. ಇದರ ಜೊತೆಗೆ, ಕೆಸಿಆರ್ ಹಾಗೂ ಕೆಟಿಆರ್​ ಸೇರಿದಂತೆ ಇತರ ಬಿಆರ್​ಎಸ್ ನಾಯಕರಿಗೂ ಬೆಂಬಲ ವ್ಯಕ್ತಪಡಿಸಿದ್ದಾರೆ.

prakash raj
ತೆಲಂಗಾಣ ವಿಧಾನಸಭೆ ಚುನಾವಣೆ: ನಿಮ್ಮ ಹೃದಯ ತೆಲಂಗಾಣಕ್ಕಾಗಿ ಯಾವಾಗಲೂ ಮಿಡಿಯುತ್ತದೆ: ಕೆಸಿಆರ್, ಕೆಟಿಆರ್​ ಹೊಗಳಿದ ನಟ ಪ್ರಕಾಶ್ ರಾಜ್
author img

By ETV Bharat Karnataka Team

Published : Dec 4, 2023, 12:07 PM IST

Updated : Dec 4, 2023, 1:11 PM IST

ತೆಲಂಗಾಣ: ವಿಧಾನಸಭಾ ಚುನಾವಣೆಯಲ್ಲಿ ಕೆ.ಚಂದ್ರಶೇಖರ್ ರಾವ್‌ ನೇತೃತ್ವದ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್‌) ಪಕ್ಷಕ್ಕೆ ಸೋಲಾಗಿದೆ. ಕಾಂಗ್ರೆಸ್ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಸಂಭ್ರಮ ಮನೆ ಮಾಡಿದೆ. ಮತ್ತೊಂದೆಡೆ, ಮೂರನೇ ಬಾರಿಗೆ ಅಧಿಕಾರ ಹಿಡಿಯುವ ತವಕದಲ್ಲಿದ್ದ ಬಿಆರ್​ಎಸ್ ಪಕ್ಷಕ್ಕೆ ಚುನಾವಣೆಯ ಸೋಲು ನಿರಾಶೆ ಮೂಡಿಸಿದೆ.

ಬಿಆರ್‌ಎಸ್ ಪತನದ ನಂತರ ಕೆಸಿಆರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಈಗಾಗಲೇ ರಾಜ್ಯಪಾಲರಿಗೆ ಸಲ್ಲಿಕೆ ಮಾಡಿದ್ದಾರೆ. ಚುನಾವಣಾ ಫಲಿತಾಂಶಕ್ಕೆ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಹಲವು ಗಣ್ಯರು ಪ್ರತಿಕ್ರಿಯಿಸಿದ್ದಾರೆ.

  • Respecting the Mandate . Congratulations to Congress.. Thank you #KCR garu . @KTRBRS .. for everything.. We are with you .. we know your heart will continue to beat for #Telangana .. this too shall pass .. but yes.. it hurts (trolls are welcome ) pic.twitter.com/f3YrflIdCB

    — Prakash Raj (@prakashraaj) December 3, 2023 " class="align-text-top noRightClick twitterSection" data=" ">

ಪ್ರಕಾಶ್‌ ರಾಜ್ 'ಎಕ್ಸ್‌' ಪೋಸ್ಟ್ ಹೀಗಿದೆ: 'ಜನರ ನಿರ್ಧಾರವನ್ನು ಗೌರವಿಸುತ್ತೇನೆ. ಕಾಂಗ್ರೆಸ್ ಪಕ್ಷಕ್ಕೆ ಅಭಿನಂದನೆಗಳು. ಕೆಸಿಆರ್‌ ಅವರಿಗೆ ಧನ್ಯವಾದಗಳು. ನಾವು ನಿಮ್ಮೊಂದಿಗಿದ್ದೇವೆ. ನಿಮ್ಮ ಹೃದಯ ಸದಾ ತೆಲಂಗಾಣಕ್ಕಾಗಿ ಮಿಡಿಯುತ್ತಿದೆ ಎಂಬುದು ನಮಗೆ ಗೊತ್ತಿದೆ. ಇಂಥ ಸಂದರ್ಭವೂ ದೂರವಾಗಲಿ. ಆದರೂ ಇದು ನೋವುಂಟು ಮಾಡುತ್ತಿದೆ ಎಂಬುದು ನನಗೆ ಗೊತ್ತಿದೆ'. (ಟ್ರೋಲಿಗರಿಗೆ ಸ್ವಾಗತ)

ಸಿನಿಮಾ ನಿರ್ದೇಶಕ ಆರ್‌ಜಿವಿ, ಸಂದೀಪ್ ಕಿಶನ್ ಮತ್ತು ನಿಖಿಲ್ ಅವರು ಕೂಡ ಕೆಟಿಆರ್ ಅವರನ್ನು ಬೆಂಬಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ 64 ಸ್ಥಾನಗಳನ್ನು ಗೆದ್ದಿದೆ. ಬಿಆರ್‌ಎಸ್ 39, ಬಿಜೆಪಿ 8 ಮತ್ತು ಎಐಎಂಐಎಂ 7 ಕ್ಷೇತ್ರಗಳಲ್ಲಿ ವಿಜಯ ಗಳಿಸಿದರೆ, ಸಿಪಿಐ ಒಂದು ಕ್ಷೇತ್ರದಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಮುಖ್ಯಮಂತ್ರಿ ಕೆಸಿಆರ್ ಕಾಮರೆಡ್ಡಿ ಕ್ಷೇತ್ರದಲ್ಲಿ ಸೋಲು ಕಂಡರೆ, ಗಜ್ವೆಲ್‌ನಿಂದ ಗೆದ್ದಿದ್ದಾರೆ.

ಇದನ್ನೂ ಓದಿ: ಮಿಜೋರಾಂ ಮತ ಎಣಿಕೆ: ಸ್ಪಷ್ಟ ಬಹುಮತದತ್ತ ಝಡ್‌ಪಿಎಂ ದಾಪುಗಾಲು; ಸಿಎಂ, ಡಿಸಿಎಂಗೆ ಹಿನ್ನಡೆ

Last Updated : Dec 4, 2023, 1:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.