ರಾಂಪುರ (ಉತ್ತರ ಪ್ರದೇಶ) :ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂದು ಪತ್ನಿಯನ್ನು ಅನುಮಾನಿಸಿದ ಪತಿ ಆಕೆಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಉತ್ತರಪ್ರದೇಶದ ರಾಂಪುರದಲ್ಲಿ ನಡೆದಿದೆ.
ಕ್ರೂರ ಪತಿಯು ಹೆಂಡತಿಯನ್ನು ಕೋಣೆಯಲ್ಲಿ ಬಂಧಿಸಿ, ಬಾಯಿಗೆ ಬಟ್ಟೆ ಕಟ್ಟಿ, ಆಕೆಯ ಗುಪ್ತಾಂಗಗಳನ್ನು ಗಾಯಗೊಳಿಸಿದ್ದಾನೆ. ಯಾವಾಗ ಮಹಿಳೆಯ ಸ್ಥಿತಿ ಗಂಭೀರವಾಯಿತೋ ಆಗ ಪತಿ ಪರಾರಿಯಾಗಿದ್ದಾನೆ. ಬಳಿಕ ಆಕೆ ಅಲ್ಲಿಂದ ತಪ್ಪಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.