ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೊಮ್ಮಗಳು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ವಸಂತನಗರದಲ್ಲಿ ನಡೆದಿದೆ.
ಕೌಟುಂಬಿಕ ಕಲಹದಿಂದ ಸೌಂದರ್ಯ(30) ಸಾವಿಗೆ ಶರಣಾಗಿದ್ದಾರೆ ಎನ್ನಲಾಗಿದೆ. ಬಿಎಸ್‌ವೈ ಅವರ ಪುತ್ರಿ ಪದ್ಮಾವತಿ ಅವರ ಪುತ್ರಿ ಸೌಂದರ್ಯ ವಿವಾಹ 2018ರಲ್ಲಿ ಡಾ.ನೀರಜ್ ಎಂಬುವರೊಂದಿಗೆ ನೆರವೇರಿತ್ತು.
ಆತ್ಮಹತ್ಯೆಗೆ ಶರಣಾಗಿರುವ ಬಿಎಸ್‌ವೈ ಮೊಮ್ಮಗಳು ಸೌಂದರ್ಯ ಕುಟುಂಬದೊಂದಿಗೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಬೌರಿಂಗ್ ಆಸ್ಪತ್ರೆಯಲ್ಲಿ ಇಡಲಾಗಿದ್ದು, ಸುದ್ದಿ ತಿಳಿದು ಸ್ಥಳಕ್ಕೆ ಬಂದು ಹೈಗ್ರೌಂಡ್ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಸೌಂದರ್ಯ ಅವರಿಗೆ ಒಂದು ಗಂಡು ಮಗುವಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸೌಂದರ್ಯ ಪತಿ ಡಾ. ನೀರಜ್ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ರೇಡಿಯೋಲೊಜಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಆತ್ಮಹತ್ಯೆ ಪ್ರತ್ಯಕ್ಷದರ್ಶಿಗಳ ಪ್ರತಿಕ್ರಿಯೆ:
ಬೆಳಗ್ಗೆ 8 ಗಂಟೆಗೆ ಡಾ. ನೀರಜ್ ಕೆಲಸಕ್ಕೆ ಹೋಗಿದ್ರು, ಆ ವೇಳೆ ಮನೆಯಲ್ಲಿ ಸೌಂದರ್ಯ ಅವರು 9 ತಿಂಗಳ ಮಗುವಿನೊಂದಿಗೆ ಇದ್ದರು. ಮನೆ ಕೆಲಸದವರು ಸಹ ಮನೆಯಲ್ಲೇ ಇದ್ರು. ಆ ವೇಳೆ ರೂಂ ಗೆ ತೆರಳಿದ ಸೌಂದರ್ಯ ನೇಣು ಹಾಕಿಕೊಂಡಿದ್ದಾರೆ. ತಿಂಡಿಕೊಡಲೆಂದು ಕೆಲಸದಾಕೆ ರೂಂಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ.
ಅಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುವ ಕೆಲಸಗಾರ
ದಂಪತಿ ನಡುವೆ ಯಾವತ್ತು ಜಗಳವಾಗಿಲ್ಲ, ಈಗ ತಾನೇ 9 ತಿಂಗಳು ಗಂಡು ಮಗುವಾಗಿದೆ.2 ವರ್ಷದಿಂದ ವಾಸವಾಗಿದ್ರು, ಕೆಲಸದವರು ಬಂದು ನೋಡಿದಾಗ ಘಟನೆ ಗೊತ್ತಾಗಿದೆ. ಸೌಂದರ್ಯ ಪತಿ ಕೆಲಸಕ್ಕೆ ಹೋದಾಗ ಘಟನೆ ನಡೆದಿದೆ. ಘಟನೆ ನಡೆದ ನಂತರ ಸೌಂದರ್ಯ ತಾಯಿ,ಅಣ್ಣ ಕುಟುಂಬಸ್ಥರು ಮೃತ ದೇಹ ತೆಗೆದುಕೊಂಡು ಹೋಗಿದ್ದಾರೆ. ಯಾವ ಪೊಲೀಸರೂ ಸಹ ಇಲ್ಲಿಗೆ ಬಂದಿಲ್ಲ.
ಖ್ವಾಜಾ ಹುಸೇನ್, ಸೌಂದರ್ಯ ವಾಸದ ಬಿಲ್ಡಿಂಗ್ ಕಂಟ್ರಾಕ್ಟರ್