ಕರ್ನಾಟಕ

karnataka

ಒಂದೂವರೆ ತಿಂಗಳಲ್ಲಿ 150 ಡ್ರಗ್ಸ್​​​ ಪೆಡ್ಲರ್​​ಗಳನ್ನ ಬಂಧಿಸಿದ ತ್ರಿಪುರ ಪೊಲೀಸರು

ಕಳೆದ ಒಂದೂವರೆ ತಿಂಗಳಲ್ಲಿ 150 ಡ್ರಗ್ಸ್​​​ ಪೆಡ್ಲರ್​​ಗಳನ್ನ ಬಂಧಿಸಿರುವ ತ್ರಿಪುರ ಪೊಲೀಸರು, ಆರೋಪಿಗಳಿಂದ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

By

Published : May 16, 2021, 9:23 AM IST

Published : May 16, 2021, 9:23 AM IST

Tripura_drug
ಒಂದೂವರೆ ತಿಂಗಳಲ್ಲಿ 150 ಡ್ರಗ್​ ಪೆಡ್ಲರ್​​ಗಳನ್ನ ಬಂಧಿಸಿದ ತ್ರಿಪುರ ಪೊಲೀಸ್​​

ಅಗರ್ತಲ (ತ್ರಿಪುರ): ರಾಜ್ಯದಲ್ಲಿ ಡ್ರಗ್ಸ್​​ ಮಾಫಿಯಾ ತಡೆಗಟ್ಟಲು ವಿಶೇಷ ಕಾರ್ಯಾಚರಣೆಯನ್ನು ನಡೆಸುತ್ತಿರುವ ತ್ರಿಪುರ ಪೊಲೀಸರು, ಕಳೆದ ಒಂದೂವರೆ ತಿಂಗಳಲ್ಲಿ 150 ಡ್ರಗ್ಸ್​​​ ಪೆಡ್ಲರ್​​ಗಳನ್ನ ಬಂಧಿಸಿದ್ದಾರೆ.

ಶಿಲ್ಲಾಂಗ್ ಮತ್ತು ಮಣಿಪುರದಿಂದ ಮಾದಕ ವಸ್ತುಗಳನ್ನು ಖರೀದಿಸಿ, ತ್ರಿಪುರ ರಾಜಧಾನಿ ಅಗರ್ತಲಾ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸಾಗಿಸಿ ಮಾರಾಟ ಮಾಡುತ್ತಿದ್ದವರು ಪೊಲೀಸರ ಅತಿಥಿಗಳಾಗಿದ್ದಾರೆ ಎಂದು ಅಗರ್ತಲ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ಡಾ. ರಮೇಶ್ ಯಾದವ್ ಮಾಹಿತಿ ನೀಡಿದ್ದಾರೆ. ಬಂಧಿತರಲ್ಲಿ ಡ್ರಗ್ಸ್​ ಮಾಫಿಯಾ ಕಿಂಗ್‌ಪಿನ್‌ಗಳೂ ಇದ್ದಾರೆ.

ಡ್ರಗ್ಸ್​​​ ಪೆಡ್ಲರ್​​ಗಳನ್ನ ಬಂಧಿಸಿ ಅಪಾರ ಪ್ರಮಾಣದ ಮಾದಕ ವಸ್ತು ವಶಕ್ಕೆ ಪಡೆದ ತ್ರಿಪುರ ಪೊಲೀಸರು

ಇದನ್ನೂ ಓದಿ:ರಾಮನಗರ ಪೊಲೀಸರ ಭರ್ಜರಿ ಕಾರ್ಯಾಚರಣೆ: 2.95 ಲಕ್ಷ ಮೌಲ್ಯದ ಅಕ್ರಮ ಗೋವಾ ಮದ್ಯ ಜಪ್ತಿ

ಆರೋಪಿಗಳಿಂದ ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಮೊನ್ನೆ ಪಶ್ಚಿಮ ತ್ರಿಪುರ ಠಾಣೆಯ ಪೊಲೀಸರು ನಡೆಸಿದ ದಾಳಿಯಲ್ಲಿ ಜೈಪುರ ಮೂಲದ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 80,000 ರೂ. ನಗದು, 120 ಗ್ರಾಂ ತೂಕದ ಬ್ರೌನ್ ಶುಗರ್ ಪ್ಯಾಕೆಟ್​ಗಳು, 1200 ಕ್ಯಾಪ್ಸುಲ್ಸ್​, 4 ಮೊಬೈಲ್ ಫೋನ್ ಮತ್ತು 2 ದ್ವಿಚಕ್ರ ವಾಹನಗಳು ಸೇರಿದಂತೆ 15ರಿಂದ 20 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ರಮೇಶ್ ಯಾದವ್ ತಿಳಿಸಿದ್ದಾರೆ.

ABOUT THE AUTHOR

...view details